Advertisement
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಧನಂಜಯಾರಾಧ್ಯ, ಮಹಾ ರಾಷ್ಟ್ರದ ರೈತರು ಚಿಂತಾಮಣಿ ಹಸುಗಳ ಸಂತೆ ಯಲ್ಲಿ ಖರೀದಿಸಿ 110 ಹೈಬ್ರಿಡ್ ಎಚ್‌ಎಫ್ ತಳಿ ಹಸು ಸಾಗಾಣೆ ಮಾಡುತ್ತಿದ್ದಾಗ ಮಾ.3ರಂದು ತುಮಕೂರು ನಗರ ಪೊಲೀಸರು ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ದಾಖ ಲಿಸಿ, ಶಿರಾ ತಾಲೂಕಿನ ಚಿಕ್ಕಬಾಣಗೆರೆ ಸರ್ಕಾರಿ ಗೋಶಾಲೆಗೆ ಕಳುಹಿಸಿದ್ದಾರೆ ಎಂದು ಹೇಳಿದರು.
Related Articles
Advertisement
ಬಿಸಿಲಿನ ತಾಪಕ್ಕೆ ಹಸುಗಳ ಸಾವು: ಕೆಲವು ಹಸುಗಳು, ಕರುಗಳು ಬಿಸಿಲಿನ ತಾಪ ತಾಳದೇ ಮೃತಪಟ್ಟಿದ್ದು, ಅವುಗಳನ್ನು ಸರಿಯಾಗಿ ಹೂತು ಹಾಕಿಲ್ಲ. ಒಂದೇ ಗುಂಡಿಯಲ್ಲಿ ಮೂರು ನಾಲ್ಕು ಕರುಗಳನ್ನು ಹಾಕಲಾಗಿದೆ. ಸರಿಯಾಗಿ ಮಣ್ಣು ಮುಚ್ಚಿಲ್ಲದ ಕಾರಣ ದುರ್ನಾತ ಬೀರುತ್ತಿದೆ. ಸ್ವತ್ಛತೆ, ಸೌಲಭ್ಯ ಮರೀಚಿಕೆ ಆಗಿದ್ದು, ಸ್ಥಳೀಯರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರು, ರೈತ ಸಂಘದವರಿಂದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ, ಭಾನುವಾರ ನೆರಳಿಗಾಗಿ ತಾತ್ಕಾಲಿಕ ಶೆಡ್ ನಿರ್ಮಿಸಬೇಕು, ಹಿಂಡಿ, ರಾಗಿ ಹುಲ್ಲು ಹಾಗೂ ಜೋಳದ ತೆನೆ ಕತ್ತರಿಸಿ ರಾಸುಗಳಿಗೆ ನೀಡಬೇಕು, 15 ಗೋಪಾಲಕರನ್ನು ನೇಮಿಸಬೇಕು, ಸತ್ತ ಕರುಗಳನ್ನು ಸೂಕ್ತವಾಗಿ ಸುಡಬೇಕು. ಒಬ್ಬ ಪಶು ವೈದ್ಯ ಸ್ಥಳದಲ್ಲೇ ಇದ್ದು ರಾಸುಗಳಿಗೆ ಚಿಕಿತ್ಸೆ ನೀಡಬೇಕು. ಔಷಧ ಕೊರತೆ ಉಂಟಾಗಬಾರದು, ಇನ್ನು ಮುಂದೆ ಏನಾದರೂ ಹಸು, ಕರು ಸಾವನ್ನಪಿದ್ರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. -ಎಲ್.ಮುರಳೀಧರ್, ತಹಶೀಲ್ದಾರ್, ಶಿರಾ