Advertisement

ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮನವಿ

05:44 PM Apr 13, 2022 | Shwetha M |

ವಿಜಯಪುರ: ಘೋಷಿತ ಸ್ಲಂಗಳಿಗೆ ಸ್ಲಂ ಘೋಷಣಾ ಪತ್ರ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ವಿಜಯಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ವಿಜಯಪುರ ನಗರದ ವಿವಿಧ ಸ್ಥಳೀಯ ಸ್ಲಂ ಸಮಿತಿಗಳ ಸಹಯೋಗದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಸಾಂಕೇತಿಕವಾಗಿ ನಡೆಸಲಾಯಿತು.

Advertisement

ನೇತೃತ್ವ ವಹಿಸಿದ್ದ ಸ್ಲಂ ಸಮಿತಿ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಮಾತನಾಡಿ, ವಿಜಯಪುರ ನಗರದಲ್ಲಿ ಸ್ಲಂಗಳಲ್ಲಿ ವಾಸಿಸುವ ಸ್ಲಂಜನರಿಗೆ ಹಕ್ಕು ಪತ್ರವಿತರಣೆ ಮಾಡುತ್ತಿರುವುದು ಸಂತೋಷ, ಆದರೆ ಇನ್ನೂ ಅನೇಕ ಪ್ರದೇಶಗಳನ್ನು ಸ್ಲಂ ಪ್ರದೇಶ ಎಂದು ಘೋಷಿಸಿ ಕಳೆದ 1 ದಶಕದಿಂದ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ, ಪ್ರಮುಖವಾಗಿ ಹಬೀಬ ನಗರ, ನೋರೋದ್ದಿನ, ರಾಮನಗರ, ಡಾ| ಅಂಬೇಡ್ಕರ್‌ ನಗರ, ಶಿಖಾರಖಾನೆ-1, ಶಿಖಾರಖಾನೆ-2, ಮಹಾಲಕ್ಷ್ಮೀ ಶಾಹಾಪೇಟಿ, ಭರತ ಬಾವಿ, ಸಂಧ್ಯಾ ದೀಪ, ಭಾರತ ನಗರ, ಗೌರಿ ಗಣೇಶ ಈ ಸ್ಲಂಗಳು ಘೋಷಸಿ ಇವುಗಳಿಗೂ ಹಕ್ಕು ಪತ್ರದೊರೆಯಬೇಕು ಮತ್ತು ಮಾಲಿಕತ್ವವಜಾಗದಲ್ಲಿ ಇದ್ದು ಘೋಷಣೆಯಾಗಿರುವ ಸ್ಲಂಗಳಿಗೂ ಹಕ್ಕು ಪತ್ರ ದೊರೆಯಬೇಕು ಎಂದರು.

ಒಂದು ವೇಳೆ1 ತಿಂಗಳ ಮಂಡಳಿಗೆ ಕಾಲಾವಕಾಶ ಕೊಟ್ಟು ಆ ಸಮಯದಲ್ಲಿ ಆಗದೇ ಹೋದರೆ ನಿರಂತರ ಧರಣಿ ಸತ್ಯಾಗ್ರಹಕ್ಕೆ ಅಣಿಯಾಗಲಾಗುವುದು ಎಂದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಸಸಾಲಟ್ಟಿ ಒಂದು ತಿಂಗಳಲ್ಲಿ ಈ ಎಲ್ಲ ಸ್ಲಂಗಳನ್ನು ಘೋಷಿಸಿ ಹಕ್ಕು ಪತ್ರಕ್ಕ ಅನುವು ಮಾಡಲಾಗುವುದು ಎಂದು ಭರವಸೆ ನೀಡಿದರು.

ನಿರ್ಮಲಾ ಹೊಸಮನಿ, ಮೀನಾಕ್ಷಿ ಕಾಲೇಬಾಗ, ಅರುಣಾ ಬೂದಿಹಾಳ, ರಾಜಸಾಬ ಸುತಾರ, ಕೃಷ್ಣಾ ಜಾಧವ, ಅಬ್ದುಲರಜಾಕ ತುರ್ಕಿ,ಇಬ್ರಾಹಿಂ ಮಸಗನಾಳ, ಲಾಲಸಾಬ ದೇಗಿನಾಳ, ಶರಣು ಮಳ್ಳಿ, ಮೊಹ್ಮದ್‌ ಮೋಮಿನ್‌, ಸದಾಶಿವ ಬಿರಾದಾರ, ವರ್ಧಮಾನ, ಶಿವಪ್ಪ ಘಂಟಿ, ರಫೀಕ್‌ ಮನಗೂಳಿ, ಆಜಾದಟೇಲರ, ಜೈರಾಬಿ, ಮಹಾದೇವಿ ಮಾನೆ, ಪರಶುರಾಮ ಮಾದರ, ಸಂಗಪ್ಪ, ಸರಸ್ವತಿ ಕಪಾಳೆ, ರೇಷ್ಮಾ, ಮಮ್ತಾಜ್‌, ಶಕೀಲಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next