Advertisement
ತಾಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ತುಂಬದ ಮಾತನಾಡಿ, ರಾಜ್ಯದಲ್ಲಿ ಈಗ ಲಾಕ್‌ಡೌನ್ ಇದೆ. ಬಾಗಲಕೋಟೆ ಜಿಲ್ಲೆ ರೆಡ್ ಝೋನ್ ನಲ್ಲಿದ್ದರೂ ಗಣಿಗಾರಿಕೆ ಆರಂಭಿಸಿದ್ದಾರೆ. ಗಣಿಗಾರಿಕೆ ಕೆಲಸಕ್ಕೆ ಗದಗ, ಹುಬ್ಬಳ್ಳಿಯ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದ್ದು, ಇದರಿಂದ ಬಲಕುಂದಿ ಹಾಗೂ ಸುತ್ತುಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಪರಸ್ಥಳದಿಂದ ಆಗಮಿಸುವ ಕಾರ್ಮಿಕರಿಂದ ಕೊರೊನಾ ಹರಡುತ್ತದೆಯೋ ಎಂಬ ಭೀತಿ ಗ್ರಾಮಸ್ಥರಲ್ಲಿ ಆವರಿಸಿದೆ. ಲಾಕ್ ಡೌನ್‌ದಿಂದ ಮುಕ್ತಿ ಆಗುವವರೆಗೂ ಗಣಿಗಾರಿಕೆ ನಡೆಸದಂತೆ ತಾಲೂಕು ಆಡಳಿತ ತಡೆಯಬೇಕು. ಇಲ್ಲವಾದರೇ ಗ್ರಾಮಸ್ಥರು ಗಣಿಗಾರಿಕೆ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತ ಮುಖಂಡರಾದ ಎಚ್.ಬಿ. ಪಾಟೀಲ, ಎಂ.ವೈ. ಕಾಲಗಗ್ಗರಿ ಹಾಗೂ ಇತರರು ಉಪಸ್ಥಿತರಿದ್ದರು. Advertisement
ಗಣಿಗಾರಿಕೆ ತಡೆಗೆ ಆಗ್ರಹಿಸಿ ಮನವಿ
04:49 PM May 01, 2020 | Suhan S |
Advertisement
Udayavani is now on Telegram. Click here to join our channel and stay updated with the latest news.