Advertisement

ನ್ಯಾ|ಸದಾಶಿವ ಆಯೋಗ ವರದಿ ಜಾರಿಗೆ ಮನವಿ

02:00 PM May 11, 2022 | Team Udayavani |

ಗುರುಮಠಕಲ್‌: ನ್ಯಾ| ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೊಳಿಸಬೇಕು. ನಮ್ಮ ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೆ ತಾಲೂಕಿನ ಡಾ| ಬಾಬು ಜಗಜೀವನರಾಂ ಯುವಕ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

Advertisement

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಎ. ನಾರಾಯಣಸ್ವಾಮಿ ಹೈದರಬಾದಿನಿಂದ-ಶಹಬಾದ ಹೋಗುವ ಮಾರ್ಗದಲ್ಲಿ ಪಟ್ಟಣದ ಅಂಬೇಡ್ಕರ್‌ ಸರ್ಕಲ್‌ನಲ್ಲಿ ಬಾಬು ಜಗಜೀವನರಾಂ ಯುವಕ ಸಂಘದವರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮನವಿ ನೀಡಿ ಸನ್ಮಾನಿಸಿದರು.

ನಮ್ಮ ಮಾದಿಗ ಸಮುದಾಯ ಸತತವಾಗಿ ಸುಮಾರು 30 ವರ್ಷಗಳಿಂದ ವರ್ಗೀಕರಣ ಕುರಿತು ಹೋರಾಟ ಮಾಡುತ್ತಾಲೇ ಬಂದಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸರ್ಕಾರ ಬಂದರೂ ನ್ಯಾ| ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೊಳಿಸಿಲ್ಲ. ಈ ವರದಿಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಸುಮಾರು 8 ವರ್ಷಗಳು ಆಗಿದೆ. ಆದರೂ ಒಳ ಮೀಸಲಾತಿ ಜಾರಿಗೆ ಆಗಿಲ್ಲ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯ ಪ್ರಕಾರ ಒಳಮೀಸಲಾತಿ ವರ್ಗೀಕರಣವನ್ನು ನಮ್ಮ ಮಾದಿಗ ಸಮುದಾಯಕ್ಕೆ ಮತ್ತು ಇನ್ನು ಇತರೆ ಕುಲ ಬಾಂಧವರಿಗೆ ಒಳಮೀಸಲಾತಿ ವರ್ಗೀಕರಣ ಜಾರಿಗೊಳಿಸಿ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.

ಭೀಮಶಪ್ಪ ಗುಡ್ಸೆ, ಕೆ. ದೇವದಾಸ್‌, ಕೃಷ್ಣ ಚಪೇಟ್ಲಾ, ಹಣಮಂತು ಶನಿವಾರಂ, ವೆಂಕಟೇಶ, ಹುಸೇನಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next