Advertisement
ಮೀನುಗಾರಿಕೆ ಮತ್ತು ಬಂದರು ಇಲಾಖೆಯಿಂದ ರಾಜ್ಯಕ್ಕೆ ಸಾಗರಮಾಲಾ ಯೋಜನೆಯಲ್ಲಿ 28 ಯೋಜನೆಗಳು ಮಂಜೂರಾಗಿದ್ದು, ವಿವಿಧ ಯೋಜನೆಗಳು ಅನುಷ್ಠಾನಗೊಂಡಿವೆ. ಅವುಗಳಲ್ಲಿ 16 ಯೋಜನೆಗಳು ಬಾಕಿಯಿದ್ದು, ಅದನ್ನು ಶೀಘ್ರ ಅನುಷ್ಠಾನಿಸುವಂತೆ, ಮೀನುಗಾರಿಕೆ ಇಲಾಖೆಯಲ್ಲಿ ರಾಜ್ಯದಲ್ಲಿ ಸಂಚಾರಿ ಮೀನು ಮಾರಾಟ ವಾಹನಗಳಿಗೆ ಸೋಲಾರ್ ಮತ್ತು ಎಲೆಕ್ಟ್ರಾನಿಕ್ ವಾಹನಗಳ ವ್ಯವಸ್ಥೆಯನ್ನು ಅನುಷ್ಠಾನ ಮಾಡುವಂತೆ ಅಂಗಾರ ಮನವಿ ಮಾಡಿದರು.
ಮೀನಿನ ತ್ಯಾಜ್ಯದಿಂದ ಬಯೋ ಡೀಸೆಲ್ ಉತ್ಪಾದನೆ ಮಾಡುವ ಯೋಜನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಲಾಯಿತು. ಬೋಟ್‌ಗಳಲ್ಲಿ ಬಳಕೆಗಾಗಿ ಸಮುದ್ರದ ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಯೋಜನೆ ಬಗ್ಗೆ ಅಂಗಾರ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ನೀಡುವಂತೆ ಮನವಿ ಮಾಡಿಕೊಂಡರು. ಕೇಂದ್ರದ ಸಚಿವರು ಸರಕಾರದ ಜತೆ ಚರ್ಚಿಸಿ ಪೂರಕ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಮೀನುಗಾರಿಕೆ ಸಂಬಂಧಿಸಿದಂತೆ ವಿವಿಧ ವಿಚಾರ, ಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು. ಸಚಿವರ ವಿಶೇಷ ಕರ್ತವ್ಯಾಧಿಕಾರಿ ಮಲ್ಲಿಕಾರ್ಜುನ ಹಾಗೂ ಸಲಹೆಗಾರರಾದ ಅರುಣ್ ಬೆಂಗಳೂರು ಉಪಸ್ಥಿತರಿದ್ದರು.