Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

03:51 PM Mar 02, 2020 | Suhan S |

ಹಾನಗಲ್ಲ: ಬೀಡಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯವಾಗಿ ಹೆಸರು ನೋಂದಣಿಗೆ ಅವಕಾಶ, ಬೀಡಿ ಮಾಲೀಕರಿಂದ ಕನಿಷ್ಠ ಕೂಲಿ ಹಾಗೂ ಗುರುತಿನ ಚೀಟಿ ದೊರಕಿಸಿ ಕೊಡುವುದು ಸೇರಿದಂತೆ ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್‌ ಸಮಿತಿ ಮನವಿ ಸಲ್ಲಿಸಿತು.

Advertisement

ತಾಲೂಕು ತಹಶೀಲ್ದಾರ್‌ ಮೂಲಕ ಸಚಿವರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಿಯಾಜ್‌ ಶೇಖ, ತಾಲೂಕಿನಲ್ಲಿ 3 ಸಾವಿರಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದು, ಅದರಲ್ಲಿ 100 ಜನರಿಗೆ ಗುರುತಿನ ಚೀಟಿ ನೀಡಿಲ್ಲ. ಅವರಿಗೆ ಕನಿಷ್ಟ ವೇತನ ನೀಡದೆ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕ ಇಲಾಖೆಗಳು ಕೂಡ ಇಲಾಖೆಯಿಂದ ನಡೆಯುವ ಯಾವುದೇ ಸಭೆಗಳಿಗೆ ಕಾರ್ಮಿಕರನ್ನು ಆಹ್ವಾನಿಸುವುದಿಲ್ಲ. ಹೀಗಾಗಿ ಮಾಹಿತಿ ಕೊರತೆಯಿಂದ ಕಾರ್ಮಿಕರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಗುರುತಿನ ಚೀಟಿ ನೀಡದೆ ದುಡಿಸಿಕೊಳ್ಳುವ ಬೀಡಿ ಕಂಪನಿಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು.

ಸರಕಾರಕ್ಕೆ ಬೀಡಿ ಉದ್ಯಮದಿಂದ ಸಾಕಷ್ಟು ಪ್ರಮಾಣದಲ್ಲಿ ಸೆಸ್‌ ಬರುತ್ತಿದೆಯಾದರೂ ಅದು ಕಾರ್ಮಿಕರ ಕಲ್ಯಾಣಕ್ಕೆ ವಿನಿಯೋಗವಾಗುತ್ತಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಕಾನೂನು ಬಾಹೀರವಾಗಿ ಬೀಡಿ ಕಟ್ಟುವುದು ನಿಲ್ಲಬೇಕು. ಬೀಡಿ ಕಟ್ಟುವ ಕಾರ್ಮಿಕರಿಗೆ ಕನಿಷ್ಟ ವೇತನ, ಪಿಎಫ್‌, ಬೋನಸ್‌, ಗ್ರಾಚ್ಯುವಿಟಿ ಫಂಡ್‌ ಸೇರಿದಂತೆ ಅವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಇಲಾಖೆ ದೊರಕಿಸಿಕೊಡಬೇಕು. ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ನಿಯಾಜ ಶೇಖ ಒತ್ತಾಯಿಸಿದರು.

ಮಾಜಿ ಸಚಿವ ಮನೋಹರ ತಹಶೀಲ್ದಾರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಸಂಘಟನೆಯ ರಾಜ್ಯಾಧ್ಯಕ್ಷ ಶಾಂತವೀರ ನಾಯ್ಕ, ಕಾನೂನು ಸಲಹೆಗಾರರಾದ ಡಿ.ಎನ್‌.ಭಟ್‌, ಎಲ್‌.ಮಂಜುನಾಥ, ಪುರಸಭೆ ಮಾಜಿ ಅಧ್ಯಕ್ಷ ಎನ್‌.ಐ. ಸವಣೂರ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಕಾರ್ಮಿಕ ಸಂಘಟನೆಯ ಬ್ಲಾಕ್‌ ಅಧ್ಯರಾದ ಎಂ.ಎಸ್‌.ಪಾಟೀಲ, ಗುಡದಯ್ಯ ಸುಂಕದ, ಮುಖಂಡರದ ಮುತ್ತಣ್ಣ ನಾಶಿಕ, ಕೆ.ಎಲ್‌ .ದೇಶಪಾಂಡೆ, ನಾಗಪ್ಪ ಸವದತ್ತಿ, ರವಿ ಚಿಕ್ಕೇರಿ, ಮಖಬುಲ್‌ಅಹ್ಮದ ಸರ್ವಿಕೇರಿ, ಶಂಕ್ರಣ್ಣ ಪ್ಯಾಟಿ, ಮಂಜುನಾಥ ಬಸೆಗಣ್ಣಿ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next