Advertisement
ಅರ್ಜಿಗಳ ವಿಲೇವಾರಿ ಮಾಡಲೇಬೇಕು ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲೇ ಬೇಕು ಎಂದು ಕಾರ್ಮಿಕರು ಘೋಷಣೆ ಕೂಗಿದರು.
ಪ್ರತಿಭಟನೆಯನ್ನು ಉದ್ಘಾಟಿಸಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸುಮಾರು 12 ಲಕ್ಷ ಕಾರ್ಮಿಕರು ನೋಂದಣಿ ಮಾಡಿದ್ದು, ಈಗಾಗಲೇ 5,600 ಕೋಟಿ ರೂ. ಹಣ ಸಂಗ್ರಹವಾಗಿದೆ. ಅದರಲ್ಲಿ ಕಳೆದ 11 ವರ್ಷಗಳಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಖರ್ಚು ಮಾಡಿದ್ದು ಕೇವಲ 171 ಕೋಟಿ ರೂ. ಮಾತ್ರ. ದೀರ್ಘ ಕಾಲದ ಹೋರಾಟ ನಡೆದು ಕಲ್ಯಾಣ ಮಂಡಳಿ ರಚನೆಯಾಗಿ 12 ಬಗೆಯ ಸವಲತ್ತುಗಳು ಜಾರಿಗೊಂಡಿವೆ. ಅವುಗಳು ಕಟ್ಟಡ ಕಾರ್ಮಿಕರಿಗೆ ಸಿಗುವಲ್ಲಿ ಸಿಐಟಿಯು ಅವಿರತ ಪ್ರಯತ್ನ ನಡೆಸುತ್ತಿದೆ. ಆದರೆ ಕಾರ್ಮಿಕ ಇಲಾಖೆಯು ಈ ಸವಲತ್ತುಗಳು ಸಿಗದ ರೀತಿಯಲ್ಲಿ ಹತಾಶ ಪ್ರಯತ್ನ ನಡೆಸುತ್ತಿದೆ. ವಿನಾ ಕಾರಣ ಕಿರುಕುಳ ನೀಡಿ ಕಟ್ಟಡ ಕಾರ್ಮಿಕರನ್ನು ಸತಾಯಿಸುತ್ತಿದೆ ಎಂದು ಆರೋಪಿಸಿದರು. ದುರುದ್ದೇಶದಿಂದ ಅರ್ಜಿ ರದ್ದು
ಮದುವೆ, ಮರಣ ಹಾಗೂ ಮಕ್ಕಳ ಸ್ಕಾಲರ್‌ಶಿಪ್‌ಮುಂತಾದವುಗಳಿಗೆ ಸಂಬಂ ಧಿಸಿದ ಅರ್ಜಿಗಳನ್ನು ದುರುದ್ದೇಶದಿಂದಲೇ ರದ್ದುಪಡಿಸಿ ಕಾರ್ಮಿಕರನ್ನು ಸಂಕಷ್ಟಕ್ಕೊಳ ಪಡಿಸಿದೆ. ಮತ್ತೂಂದು ಕಡೆ ರಾಜ್ಯ ಸರಕಾರ ಕೂಡ ಮಂಡಳಿಯಲ್ಲಿ ಜಮಾವಣೆಗೊಂಡ ಹಣದ ಮೇಲೆ ಕಣ್ಣಿಟ್ಟಿದ್ದು ,ಅದನ್ನು ದುರುಪಯೋಗ ಪಡಿಸಲು ಹೊಂಚು ಹಾಕುತ್ತಿದೆ ಎಂದು ಆರೋಪಿಸಿದ ಅವರು, ಸರಕಾರದ ಈ ಪ್ರಯತ್ನವನ್ನು ತಡೆದು ಕಟ್ಟಡ ಕಾರ್ಮಿಕರ ಪರವಾದ ನೀತಿಗಳನ್ನು ಜಾರಿಗೊಳಿಸಲು ಸಂಘಟಿತ ಹೋರಾಟ ರೂಪಿಸಲು ಕಂಕಣ ಬದ್ಧರಾಗಿ ದುಡಿಯ ಬೇಕೆಂದು ಕರೆ ನೀಡಿದರು.
Related Articles
ಸಿಐಟಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಕಲ್ಯಾಣ ಮಂಡಳಿಯಲ್ಲಿ ಜಿಲ್ಲೆಯ ಸುಮಾರು 45,000 ಸದಸ್ಯರು ನೋಂದಣಿಯಾಗಿದ್ದರೂ ಅದರಲ್ಲಿ ಅರ್ಧದಷ್ಟು ಸದಸ್ಯತ್ವ ಬೋಗಸ್ ಆಗಿದೆ ಎಂದು ಆಪಾದಿಸಿದರು.
Advertisement
ಸಿಬಂದಿ ಅಸಹಕಾರಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕಾರ್ಮಿಕರಿಗೆ ಸವಲತ್ತುಗಳನ್ನು ವಿಸ್ತರಿಸಲು ಇಲಾಖೆ ಸಿಬಂದಿ ಅಸಹಕಾರ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿದರು. ಹೋರಾಟದ ನೇತೃತ್ವವನ್ನು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ರವಿಚಂದ್ರ ಕೊಂಚಾಡಿ, ಸಂತೋಷ್ ಶಕ್ತಿನಗರ, ಜಯಂತ ನಾಯ್ಕ, ಕೆ. ಪಿ. ಜೋನಿ, ವಸಂತಿ ಕುಪ್ಪೆಪದವು, ಪ್ರೇಮನಾಥ್ ಜಲ್ಲಿಗುಡ್ಡೆ, ಶಿವರಾಮ್ ಗೌಡ, ಬಿಜು ಅಗಸ್ಟಿನ್, ಶಂಕರ ಮೂಡಬಿದಿರೆ, ವಸಂತ ನಡ, ರಾಮಣ್ಣ ವಿಟ್ಲ, ಸೀತಾರಾಮ್ ಶೆಟ್ಟಿ, ಜನಾರ್ದನ ಕುತ್ತಾರ್ ಮುಂತಾದವರು ವಹಿಸಿದ್ದರು.