Advertisement

ವಿದ್ಯುತ್‌ ಕಾಯ್ದೆ ತಿದ್ದುಪಡಿ ನೀತಿ ವಿರೋಧಿಸಿ ಮನವಿ

07:31 AM May 30, 2020 | Suhan S |

ಹೊಸಪೇಟೆ: ಕೇಂದ್ರ ಸರ್ಕಾರದ ವಿದ್ಯುತ್‌ ಕಾಯ್ದೆ ತಿದ್ದುಪಡಿ ನೀತಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನ ಹಳ್ಳಿ ಮಂಜುನಾಥ ಬಣ)ಪದಾಧಿಕಾರಿಗಳು ಶುಕ್ರವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಕೇಂದ್ರ ಸರ್ಕಾರವು ವಿದ್ಯುತ್‌ ವಿತರಣೆ ಸುಧಾರಣೆಗಾಗಿ 2014ರಲ್ಲಿ ತಿದ್ದುಪಡಿ ಕಾಯ್ದೆಯನ್ನು 2020ರಲ್ಲಿ ಜಾರಿಗೆ ತರಲು ಕರಡು ಪ್ರತಿ ಪ್ರಕಟಿಸಿದೆ. ಸರ್ಕಾರಿ ಸ್ವಾಮ್ಯದ ವಿತರಣೆ ವ್ಯವಸ್ಥೆಯನ್ನು ಖಾಸಗಿ ವ್ಯಕ್ತಿ ಹಾಗೂ ಕಂಪನಿಗಳಿಗೆ ನೀಡಲು ಈ ಕಾಯ್ದೆ ಸಹಾಯಕವಾಗಲಿದೆ. ಸರ್ಕಾರಿ ಸ್ವಾಮ್ಯದ ವಿದ್ಯುತ್ಛಕ್ತಿ ಕಂಪನಿಗಳಿಗೆ ಖಾಸಗೀಕರಣಗೊಳಿಸಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ಛಕ್ತಿಯನ್ನು ಪೂರೈಸುತ್ತಿದ್ದು, ಕೇಂದ್ರ ಸರ್ಕಾರದ ಹೊಸ ವಿದ್ಯುತ್‌ ನೀತಿಯಿಂದ ರೈತರು ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಹಾಗೂ ಕಡ್ಡಾಯ ವಿದ್ಯುತ್‌ ಬಿಲ್‌ ಪಾವತಿಸಬೇಕುತ್ತದೆ. ರೈತರ ಕೃಷಿ ಪಂಪ್‌ ಸೆಟ್‌ಗಳ ಬಿಲ್‌ ಪಾವತಿಗಾಗಿ ಕೇಂದ್ರ ಸರ್ಕಾರ, ಕಾನೂನನ್ನು ಜಾರಿಗೆ ತರಲು ಮುಂದಾಗಿದೆ. ಕೂಡಲೇ ರೈತ ವಿರೋಧಿ ವಿದ್ಯುತ್‌ ನೀತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಲ್ಲಾಳ್‌ ಪರಶುರಾಮ, ದೇವರಮನೆ ಮಹೇಶ್‌, ಎಂ.ಪ್ರಕಾಶ್‌, ನೀರಳ್ಳಿ ವೆಂಕಟೇಶ್‌ ನಾಯಕ, ಎಂ. ಸೋಮಪ್ಪ, ಷಣ್ಮುಕಪ್ಪ, ಫ‌ಕೀರಪ್ಪ, ಬಸಪ್ಪ, ಪಂಪಾಪತಿ, ಭಾಷಸಾಬ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next