Advertisement

“ಪದ್ಮಾವತಿ’ವಿರುದ್ಧದ ಅರ್ಜಿ ವಜಾ

06:05 AM Nov 21, 2017 | Harsha Rao |

ಹೊಸದಿಲ್ಲಿ: ಅಂಶಗಳನ್ನು ಡಿಲೀಟ್‌ ಮಾಡುವಂತೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ.

Advertisement

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ, “ಸಿನಿಮಾಗೆ ಇನ್ನೂ ಸಿಬಿಎಫ್ಸಿ ಪ್ರಮಾಣಪತ್ರವೇ ಸಿಕ್ಕಿಲ್ಲ. ಹೀಗಾಗಿ, ಈಗಲೇ ಅಂಥ ಆದೇಶ ನೀಡುವುದಕ್ಕೆ ಬರುವುದಿಲ್ಲ. ಸಿನೆಮಾದ ವಿಚಾರದಲ್ಲಿ ಸೆನ್ಸಾರ್‌ ಮಂಡಳಿಗೆ ತನ್ನದೇ ಆದ ಪಾತ್ರವಿದೆ. ಅವರ ಕರ್ತವ್ಯವನ್ನು ಅವರು ಮಾಡುತ್ತಾರೆ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ’ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತು. ಅಷ್ಟೇ ಅಲ್ಲದೆ, ಅರ್ಜಿಯಲ್ಲಿ ಉಲ್ಲೇಖವಾಗಿದ್ದ ಕೆಲವು ಸಾಲುಗಳನ್ನು ಕೂಡ ತೆಗೆದುಹಾಕಿದ ನ್ಯಾಯಪೀಠ, “ಕೋರ್ಟ್‌ಗೆ ಸಲ್ಲಿಸುವ ಮನವಿಗಳು ಸಮಾಜದ ಸ್ವಾಸ್ಥ್ಯ ಹಾಳುಮಾಡುವಂತಿರಬಾರದು,’ ಎಂದು ಅರ್ಜಿದಾರ, ವಕೀಲ ಎಂ.ಎಲ್‌.ಶರ್ಮಾ ಅವರಿಗೆ ಖಡಕ್ಕಾಗಿ ಸೂಚನೆ ನೀಡಿತು.

ಇದೇ ವೇಳೆ, ನಟಿ ದೀಪಿಕಾ ಪಡುಕೋಣೆ ಅವರ ತಲೆ ಕತ್ತರಿಸಿದವರಿಗೆ 10 ಕೋಟಿ ರೂ. ಬಹುಮಾನ ಘೋಷಿಸಿದ ಬಿಜೆಪಿ ನಾಯಕ ಸೂರಜ್‌ ಪಾಲ್‌ ಅಮು ಅವರಿಗೆ ಹರಿಯಾಣ ಬಿಜೆಪಿ ಸೋಮವಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ. ತಮ್ಮ ಹೇಳಿಕೆ ಕುರಿತು ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಸಿನಿಮಾಗೆ ನಿಷೇಧ: ಸಿಎಂ ಚೌಹಾಣ್‌
ಸಿನಿಮಾದಲ್ಲಿ ಐತಿಹಾಸಿಕ ಸತ್ಯಗಳನ್ನು ತಿರುಚಲಾಗಿದೆ ಎಂದಾದರೆ ನಮ್ಮ ರಾಜ್ಯದಲ್ಲಿ ಪದ್ಮಾವತಿಯ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಘೋಷಿಸಿದ್ದಾರೆ. ಇತಿಹಾಸವನ್ನು ತಿರುಚುವಂಥ ಯಾವುದೇ ಪ್ರಯತ್ನವನ್ನೂ ನಾವು ಸಹಿಸುವುದಿಲ್ಲ. ರಾಣಿ ಪದ್ಮಾವತಿಯ ಘನತೆಗೆ ಧಕ್ಕೆ ತರುವಂಥ ದೃಶ್ಯ ಆ ಸಿನಿಮಾದಲ್ಲಿದ್ದರೆ ಅದಕ್ಕೆ ನಮ್ಮ ರಾಜ್ಯದಲ್ಲಿ ಅವಕಾಶವಿಲ್ಲ ಎಂದಿದ್ದಾರೆ ಚೌಹಾಣ್‌. ಇದೇ ವೇಳೆ, ಪಂಜಾಬ್‌ ಸಿಎಂ ಕ್ಯಾ| ಅಮರೀಂದರ್‌ ಸಿಂಗ್‌ ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇತಿಹಾಸದ ತಿರುಚುವಿಕೆಯನ್ನು ಯಾರೂ ಒಪ್ಪಲಾರರು. ಸಿನಿಮಾಗೆ ಲೈಸೆನ್ಸ್‌ ಕೊಡುವುದು ಸತ್ಯವನ್ನು ತಿರುಚುವುದಕ್ಕಲ್ಲ ಎಂದಿದ್ದಾರೆ.

ಟ್ರೇಲರ್‌ ಪ್ರಸಾರ ಮಾಡಿದ್ದಕ್ಕೆ ದಾಂಧಲೆ
ಮಧ್ಯಪ್ರದೇಶದ ಥಿಯೇಟರ್‌ವೊಂದರಲ್ಲಿ ಚಲನಚಿತ್ರ ಪ್ರದರ್ಶನದ ಮಧ್ಯೆ ವಿವಾದಿತ ಪದ್ಮಾವತಿ ಸಿನೆಮಾದ ಟ್ರೇಲರ್‌ ಪ್ರಸಾರ ಮಾಡಿದ್ದಕ್ಕೆ ಕರ್ಣಿ ಸೇನಾ ಸದಸ್ಯರು ದಾಂಧಲೆ ಎಬ್ಬಿಸಿದ ಘಟನೆ ನಡೆದಿದೆ. ಜತೆಗೆ, ಮುಂದೆ ಯಾವತ್ತೂ ಸಿನಿಮಾದ ಟ್ರೇಲರ್‌ ಪ್ರಸಾರ ಮಾಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. 

Advertisement

ಕೆಲವೊಮ್ಮೆ ಪದ್ಮಾವತಿಯಂಥ ಸಿನಿಮಾಗಳು ಸಂಕಷ್ಟಕ್ಕೆ ಒಳಗಾಗುವುದಿದೆ. ನಾನಂತೂ ಎಲ್ಲವೂ ಸರಿಯಾಗಲಿದೆ ಎಂಬ ಸಕಾರಾತ್ಮಕ ಭಾವನೆ ಹೊಂದಿದ್ದೇನೆ. ಸಿಟ್ಟಾಗುವ, ತಾಳ್ಮೆ ಕಳೆದುಕೊಳ್ಳುವ ಸಮಯ ಇದಲ್ಲ.
– ಶಾಹಿದ್‌ ಕಪೂರ್‌, ಪದ್ಮಾವತಿ ಸಿನಿಮಾದ ನಟ

ಪದ್ಮಾವತಿ ಸಿನಿಮಾ ಕುರಿತ ವಿವಾದವನ್ನು ನಾವು ಮಾತುಕತೆಯ ಮೂಲಕ ಪರಿಹರಿಸಲು ಯತ್ನಿಸುತ್ತಿದ್ದೇವೆಯೇ ಹೊರತು ವಾದ-ಪ್ರತಿ ವಾದದಿಂದ ಅಲ್ಲ.
– ಪ್ರಸೂನ್‌ ಜೋಶಿ, ಸಿಬಿಎಫ್ಸಿ ಮುಖ್ಯಸ್ಥ

ಪದ್ಮಾವತಿ ವಿರುದ್ಧದ ಪ್ರತಿಭಟನೆಗಳೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲು ರಾಜಕೀಯ ಪಕ್ಷವೊಂದು ನಡೆಸಿರುವ ವ್ಯವಸ್ಥಿತ ಸಂಚು.
– ಮಮತಾ ಬ್ಯಾನರ್ಜಿ, ಪ.ಬಂಗಾಲ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next