ಪುಣೆ: ನಮ್ಮ ಮಾತೃ ಭಾಷೆ ತುಳು. ಕಲೆ ಸಂಸ್ಕೃತಿಯೊಂದಿಗೆ ಬೆಸೆದು ಕೊಂಡಿರುವ ತುಳುನಾಡಿನ ಯಾವುದೇ ಕಾರ್ಯಕ್ರಮಗಳು ಇಲ್ಲಿ ನಡೆದಾಗ ಅದರಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆ. ತುಳು ಅಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಇನ್ನಷ್ಟು ಕಾರ್ಯಕ್ರಮಗಳು ಪುಣೆಯಲ್ಲಿ ನಡೆಯಲಿ. ಇದರ ಮುಖಾಂತರ ಭಾಷೆ, ಸಂಸ್ಕೃತಿ ಉಳಿಸುವ ಭಾವನೆ ನಮ್ಮಲ್ಲಿ ಮೂಡಲಿ ಎಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ತಿಳಿಸಿದರು.
ನ. 4ರಂದು ಶಿವಾಜಿನಗರ ಮಂಗಳ ಮಲ್ಟಿಫ್ಲೆಕ್ಸ್ ಸಿನೆಮಾ ಮಂದಿರದಲ್ಲಿ ಕಿಶೋರ್ ಮೂಡುಬಿದ್ರಿ ನಿರ್ದೇಶನದ ಅಪ್ಪೆ ಟೀಚರ್ ತುಳು ಸಿನೆಮಾ ಪ್ರದರ್ಶನದ ಮೊದಲಿಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಮಾತನಾಡಿ, ತುಳು ಕಾರ್ಯಕ್ರಮಗಳಿಗೆ ನಮ್ಮಿಂದಾಗುವ ಸಹಕಾರ ನೀಡಬೇಕು. ಸಿನೆಮಾ ಪ್ರದರ್ಶನ ಏರ್ಪಡಿಸಲು ಖರ್ಚು ದೊಡ್ಡ ಮಟ್ಟದಲ್ಲಿರುತ್ತದೆ. ಸಂಘ ಟಕರಿಗೆ ಕಲಾಪೋಷಕರು, ದಾನಿ ಗಳು, ಕಲಾಭಿಮಾನಿಗಳು ಸಹಕಾರ ನೀಡಬೇಕು ಎಂದರು.
ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಆನಂದ ಶೆಟ್ಟಿ ಮಿಯ್ನಾರು, ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ಬಂಟ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಗಣೇಶ್ ಹೆಗ್ಡೆ, ಪುಣೆ ರೆಸ್ಟೋರೆಂಟ್ ಅÂಂಡ್ ಹೊಟೇಲಿಯರ್ಸ್ ಅಸೋ ಸಿಯೇಶನ್ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಉಪಸ್ಥಿತ ರಿದ್ದು ದೀಪ ಪ್ರಜ್ವಲಿಸಿ ಸಿನಿಮಾಕ್ಕೆ ಚಾಲನೆ ನೀಡಿದರು.
ಯಕ್ಷಗಾನ, ನಾಟಕ, ಸಿನೆಮಾ ಯಾವುದೇ ಇರಲಿ ತುಳು ಕಾರ್ಯಕ್ರಮವೆಂದರೆ ಅದು ನಮ್ಮದೇ ಕಾರ್ಯಕ್ರಮ ಎಂಬ ಭಾವನೆ ಬರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಕೃತಿ ಜತೆಗೆ ಸಮಾಜಕ್ಕೆ ಪೂರಕವಾಗುವಂಥ, ನಮ್ಮ ಯುವ ಪೀಳಿಗೆಗೆ ಸಹಕಾರಿಯಾಗುವಂಥ ಸಂದೇಶಗಳು ಇರಬೇಕು.
-ಪ್ರವೀಣ್ ಶೆಟ್ಟಿ ಪುತ್ತೂರು, ಅಧ್ಯಕ್ಷರು, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ
ಯಕ್ಷಗಾನ, ತುಳು ಚಿತ್ರರಂಗ, ಕಲಾರಂಗ ಭೂಮಿಯ ಎಲ್ಲ ವರ್ಗದ ಕಲಾವಿದರು ನಮ್ಮವರು ಎಂಬ ಅಭಿಮಾನ ಮೂಡಬೇಕು. ಪ್ರತಿಭೆಗಳಿಗೆ ಬೆಂಬಲ ಸಿಗಬೇಕಾದರೆ, ಆಯೋಜಕರಿಗೆ ಮೊದಲು ಬೆಂಬಲ ಸಿಗಬೇಕು. ಆಗ ಮಾತ್ರ ಇನ್ನಷ್ಟು ಕಾರ್ಯಕ್ರಮಗಳು ಇಲ್ಲಿ ನಡೆಯಬಹುದು.
-ಆನಂದ ಶೆಟ್ಟಿ ಮಿಯ್ನಾರು, ಅಧ್ಯಕ್ಷರು, ಬಂಟ್ಸ್ ಅಸೋಸಿಯೇಷನ್ ಪುಣೆ
ಪುಣೆಯಲ್ಲಿ ತುಳು ಕಲಾ ಕಾರ್ಯಕ್ರಮ ಸಂಘಟಿಸುವ ಹಲವು ಸಂಘಟಕರಿದ್ದಾರೆ. ಇಂಥ ಕಾರ್ಯಕ್ರಮ ಅಯೋಜಿಸುವಾಗ ಅದರದೇ ಆದಂತಹ ಸಮಸ್ಯೆಗಳಿರುತ್ತವೆ. ಅದಕ್ಕೆ ಸಹಕರಿಸುವ ಗುಣ ನಮ್ಮದಾಗಬೇಕು. ಉತ್ತಮ ಕಾರ್ಯಗಳಿಗೆ ನಾವು ಜೋತೆಯಾಗಿರೋಣ.
– ವಿಶ್ವನಾಥ್ ಪೂಜಾರಿ ಕಡ್ತಲ, ಉಪಾಧ್ಯಕ್ಷರು, ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲಿಯರ್ಸ್ ಅಸೋಸಿಯೇಶನ್
ಚಿತ್ರ-ವರದಿ : ಹರೀಶ್‌ಮೂಡುಬಿದ್ರಿ