ಹುಡುಕುತ್ತಿದ್ದಾರೆ.
Advertisement
ಪರೀಕ್ಷೆ/ಚುನಾವಣೆ ಎಂದು ಕೆಲವರು ಸ್ವಲ್ಪ ದಿನ ಕಳೆಯಲಿ ಎಂಬ ಲೆಕ್ಕಾಚಾರದಲ್ಲಿದ್ದರೆ, ಇನ್ನೂ ಕೆಲವರು ತಮ್ಮ ಸಿನೆಮಾ ಉತ್ತಮವಾಗಿದ್ದರೆ ಪರೀಕ್ಷೆ/ಚುನಾವಣೆಯಿಂದ ಯಾವುದೇ ಸಮಸ್ಯೆ ಆಗಲಾರದು ಎಂಬ ಹುಮ್ಮಸ್ಸಿನಲ್ಲಿದ್ದಾರೆ.
ಮಂಗಳೂರಿಗೆ ಬೇಡವಾಗಿತ್ತು ಎಂಬ ವಾದ ಒಂದೆಡೆಯಾದರೆ, ಉತ್ತಮ ಸಿನೆಮಾ ನೀಡುವುದಾದರೆ ತುಳು ಪ್ರೇಕ್ಷಕ ಕೂಡ ಒಪ್ಪಿಕೊಳ್ಳಲು ರೆಡಿಯಿದ್ದಾನೆ ಎಂಬುದು ಸಿನೆಮಾ ನಿರ್ಮಾಪಕರ ಲೆಕ್ಕಾಚಾರ. ಅಂತೂ ತುಳುವಿನಲ್ಲೊಂದು ಇಂತಹ ಹೊಸ ಪ್ರಯೋಗ ಈಗ ಮುನ್ನೆಲೆಗೆ ಬರುತ್ತಿದೆ. ಅಂದಹಾಗೆ, ಬಿಡುಗಡೆಗೆ ಸಿದ್ಧವಾಗಿರುವ ಎರಡು ಸಿನೆಮಾಗಳ ಬಗ್ಗೆ ಮಾತನಾಡುವುದಾದರೆ, ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್ ಹಾಗೂ ಪ್ರೊಡಕ್ಷನ್ ಅರ್ಪಿಸುವ ಕೆ. ರತ್ನಾಕರ್ ಕಾಮತ್ ನಿರ್ಮಾಣದ, ಕಿಶೋರ್ ಮೂಡಬಿದಿರೆ ಕಥೆ- ಚಿತ್ರಕಥೆ, ನಿರ್ದೇಶನದ ‘ಅಪ್ಪೆ ಟೀಚರ್’ ಸಿನೆಮಾ ಮಾ. 23ರಂದು ಕರಾವಳಿಯ ಬಹುತೇಕ ಥಿಯೇಟರ್ ಗಳಲ್ಲಿ ತೆರೆ ಕಾಣಲು ರೆಡಿಯಾಗಿದೆ. ಉದಯ್ ಲೀಲಾ ಛಾಯಾಗ್ರಹಣ ನಡೆಸಿದ್ದು, ‘ಗ್ರಾಮಿ ಅವಾರ್ಡ್ ವಿನ್ನರ್’ ವನೀಲ್ ವೇಗಸ್ ಸಂಗೀತದಲ್ಲಿ ಕೈಜೋಡಿಸಿದ್ದಾರೆ. ಪ್ರದೀಪ್ ನಾಯಕ್ ಸಂಕಲನದಲ್ಲಿ ಸಹಕರಿಸಿದ್ದಾರೆ.
Related Articles
Advertisement
ಅಪ್ಪೆ ಟೀಚರ್ ಸಿನೆಮಾದ ಮೂಲಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮೊದಲ ಬಾರಿಗೆ ಬೇರೆ ಬ್ಯಾನರ್‌ನ ಸಿನೆಮಾದಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಸುನೀಲ್ ಹಾಗೂ ನಿರೀಕ್ಷಾ ಶೆಟ್ಟಿ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ನವೀನ್ ಡಿ. ಪಡೀಲ್ ಹಾಗೂ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಅಪ್ಪೆ ಟೀಚರ್‌ನ ಮುಖ್ಯ ರೋಲ್‌ನಲ್ಲಿದ್ದಾರೆ.
ಉಮೇಶ್ ಮಿಜಾರ್, ಸತೀಶ್ ಬಂದಳೆ, ದೀಪಕ್ ರೈ ಪಾಣಾಜೆ, ಕಾಮಿಡಿ ಕಿಲಾಡಿಯ ಅನೀಶ್ ಹಾಗೂ ಹಿತೇಶ್, ಡ್ರಾಮ ಜೂನಿಯರ್ನ ಚಿತ್ರಾಲಿ, ಡ್ಯಾನ್ಸಿಂಗ್ ಸ್ಟಾರ್ ಅದ್ವಿಕಾ ಶೆಟ್ಟಿ, ಗೋಪಿನಾಥ್ ಭಟ್, ಉಷಾ ಭಂಡಾರಿ, ಕರಿಷ್ಮಾ ಅಮೀನ್, ರಂಜಿತಾ ಲೂಯಿಸ್, ರಂಜನ್ ಬೋಳೂರು, ಸ್ಟಾ ಸ್ಟ್ಯಾನ್ಲಿ ಆಲ್ವರೀಸ್, ರಾನ್ಸ್ ಲಂಡನ್ ಮುಂತಾದವರು ಚಿತ್ರದಲ್ಲಿದ್ದಾರೆ. 33 ದಿನದಲ್ಲಿ ಮಂಗಳೂರು, ಉಡುಪಿ, ಬ್ರಹ್ಮಾವರ, ಕಾಸರಗೋಡು ವ್ಯಾಪ್ತಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಸಲಾಗಿತ್ತು.
ಇನ್ನು ತೊಟ್ಟಿಲು ಸಿನೆಮಾ ಬಗ್ಗೆ ಮಾತನಾಡುವುದಾದರೆ, ‘ರಂಬಾರೋಟಿ’ ಸಿನೆಮಾ ನಿರ್ದೇಶಿಸಿದ ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ ‘ತೊಟ್ಟಿಲ್’ ಸಿನೆಮಾ ಕೂಡ ಕೋಸ್ಟಲ್‌ವುಡ್‌ನಲ್ಲಿ ಒಂದಷ್ಟು ಹವಾ ಕ್ರಿಯೇಟ್ ಮಾಡಿದೆ. ಪ್ರದೀಪ್ ಅಗ್ರಾರ್- ಎಲ್‌ಡಿಪಿ ಫೆರಾರ್ ನಿರ್ಮಾಣದ ರಿಚರ್ಡ್ ಡಿ. ಕುನ್ಹ ಸಹ ನಿರ್ಮಾಣದ ಈ ಸಿನೆಮಾಕ್ಕೆ ಛಾಯಾಗ್ರಹಣ ಹಾಗೂ ಸಂಕಲನವನ್ನು ಕಿಶನ್ ನಡೆಸಿದ್ದಾರೆ. ಎಂ. ಡೋಲ್ಫಿನ್ ಕೊಳಲಗಿರಿ ಸಂಗೀತದಲ್ಲಿ ಕೈ ಜೋಡಿಸಿದ್ದಾರೆ.
ವಿಜೇತ್ ಸುವರ್ಣ ಹಾಗೂ ಸುರೇಖಾ ಭಟ್ ಮುಖ್ಯ ತಾರಾಗಣದ ಈ ಸಿನೆಮಾದಲ್ಲಿ ಕೆ. ಸ್ವರಾಜ್ಯ ಲಕ್ಷ್ಮೀ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ರಾಜೇಶ್ ಕೈಲಾರ್ಕ್, ಶಬರೀಶ್, ಸಂದೇಶ್ ಕೋಟ್ಯಾನ್ ಕಾರ್ಕಳ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕುಟುಂಬ ಸಮೇತ ನೋಡಬಹುದಾದ ಹಾಗೂ ಕಾಮಿಡಿಯನ್ನು ಮುಖ್ಯ ನೆಲೆಯಲ್ಲಿಟ್ಟು ಸಿನೆಮಾ ಸಿದ್ಧಪಡಿಸಲಾಗಿದೆ. ಕಾರ್ಕಳ ಹಾಗೂ ಹಾಸನದಲ್ಲಿ ಸಿನೆಮಾ ಶೂಟಿಂಗ್ ನಡೆದಿದೆ. ಜ್ಯೋತಿ ಸಿನೆಮಾ ಮಂದಿರದಲ್ಲಿ ತೊಟ್ಟಿಲ್ ರಿಲೀಸ್ ಆಗುವ ಬಗ್ಗೆ ಸದ್ಯಕ್ಕೆ ಮಾಹಿತಿ ಇದೆ.
‘ಬೆಲ್ ಬಾಟಮ್’ ಹಾಕಿದ ಪಡೀಲ್!ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಮ್’ ಕನ್ನಡ ಸಿನೆಮಾದ ಬಗ್ಗೆ ಎಲ್ಲರಿಗೂ ಗೊತ್ತಿದೆ. ‘ಕಿರಿಕ್ ಪಾರ್ಟಿ’ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಮುಖ್ಯ ತಾರಾಗಣದಲ್ಲಿದ್ದಾರೆ. ವಿಶೇಷವೆಂದರೆ ಈ ಸಿನೆಮಾದಲ್ಲಿ ಕುಸೇಲ್ದರಸೆ ನವೀನ್ ಡಿ. ಪಡೀಲ್ ಮುಖ್ಯ ಕಾಮಿಡಿ ಗೆಟಪ್‌ನಲ್ಲಿದ್ದಾರೆ. ಮಂಜೇಶ್ವರದ ಶಾರದಾ ಆರ್ಟ್ಸ್ ತಂಡದ ಕಾಮಿಡಿ ಆ್ಯಕ್ಟರ್, ಒಂದು ಮೊಟ್ಟೆಯ ಕಥೆಯ ‘ಅಟೆಂಡರ್’ ಪ್ರಕಾಶ್ ತುಮಿನಾಡ್ ಕೂಡ ಚಿತ್ರದಲ್ಲಿದ್ದಾರೆ. ಅಂದಹಾಗೆ, 80ರ ದಶಕದ ಪತ್ತೇದಾರಿ ಕಥೆಯನ್ನು ಆಧರಿಸಿದ ಈ ಚಿತ್ರ ನಟ- ನಟಿಯರ ಹೊಸ ಗೆಟಪ್‌ನಲ್ಲಿ ಸದ್ದುಮಾಡುತ್ತಿದೆ ದಿನೇಶ್ ಇರಾ