ಹೊಸದಿಲ್ಲಿ: ಜವುಳಿ, ಉಡುಗೆ- ತೊಡುಗೆ ಮತ್ತು ಪಾದರಕ್ಷೆಗಳ ಜಿಎಸ್‌ಟಿ ಹೆಚ್ಚಳದಿಂದ ಬೆಲೆಯೂ ಏರಬಹುದಾಗಿದ್ದು, ಇದು ಗ್ರಾಹಕರ ಬೇಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು
ರಖಂ ಜವುಳಿ ಮಾರಾಟಗಾರರು ಪ್ರತಿಪಾದಿಸಿದ್ದಾರೆ.
ಹತ್ತಿಯ ಬಟ್ಟೆ, ಆ್ಯಕ್ರಿಲಿಕ್‌ಗಳ ಬೆಲೆ ಹೆಚ್ಚಳದಿಂದ ಈ ಕ್ಷೇತ್ರ ಈಗಾಗಲೇ ಕಂಗೆಟ್ಟಿದೆ. ಸರಕಾರವು ಈ ಉತ್ಪನ್ನಗಳ ಮೇಲೆ ಜಿಎಸ್‌ಟಿಯನ್ನು 2022ರ ಜನವರಿಯ ಬಳಿಕ ಅನ್ವಯವಾಗುವಂತೆ ಹಾಲಿ ಶೇ. 5ರಿಂದ ಶೇ. 12ಕ್ಕೆ ಏರಿಸಿದೆ.
ಬಟ್ಟೆಗಳ ಮೇಲಿನ ಜಿಎಸ್‌ಟಿಯನ್ನು ಶೇ. 5ರಿಂದ ಶೇ. 12ಕ್ಕೆ ಹೆಚ್ಚಿಸಲಾಗಿದ್ದರೆ ಯಾವುದೇ ಬೆಲೆಯ ಉಡುಪುಗಳ ಮೇಲಿನ ಜಿಎಸ್‌ಟಿಯನ್ನು ಶೇ. 12ಕ್ಕೆ ಏರಿಸಲಾಗಿದೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 8 ರೂ. ಇಳಿಕೆ
ಹಾಲಿ 1 ಸಾವಿರ ರೂ. ವರೆಗಿನ ಉಡುಪುಗಳ ಮೇಲೆ ಶೇ. 5 ಜಿಎಸ್‌ಟಿ ಇದೆ.