Advertisement
ವರ್ಲಿಯ ಮಧುಸೂದನ ಮಿಲ್ ಆವರಣದಲ್ಲಿ ರುವ ಶ್ರೀ ಸಿದ್ಧೇಶ್ವರ ಸ್ವಾಮಿ ಮಂದಿರದಲ್ಲಿ ಶಿಬಿರ ವನ್ನು ಪ್ರಾರಂಭಿಸಿ, 48 ದಿನಗಳ ಕಾಲ ಪ್ರತಿನಿತ್ಯ ಅನ್ನಸಂತರ್ಪಣೆ, ಮಹಾಪೂಜೆಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ವ್ರತಾಚರಣೆ ನಡೆಸುತ್ತಿರುವ ರಮೇಶ್ ಗುರುಸ್ವಾಮಿ ಅವರ ನೇತೃತ್ವದಲ್ಲಿ ಡಿ. 24 ರಂದು ಮುಂಜಾನೆ ಶರಣು ಘೋಷದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ವತಿಯಿಂದ ಭಜನ ಕಾರ್ಯಕ್ರಮ ಜರಗಲಿದೆ. ರಾತ್ರಿ 8 ರಿಂದ ಫೋರ್ಟ್ ಅಯ್ಯಪ್ಪ ಸೇವಾ ಸಮಿತಿಯ ಚಂದ್ರಶೇಖರ ಗುರುಸ್ವಾಮಿ ಮತ್ತು ರೇ ರೋಡ್ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಜಗನ್ನಾಥ ಗುರುಸ್ವಾಮಿ ಇವರಿಗೆ ಪಾದಪೂಜೆಯ ಮುಖಾಂತರ ಗುರುವಂದನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ರಿಂದ ಪ್ರಸಿದ್ಧ ಕಲ್ಲಡ್ಕ ವಿಠಲ್ ನಾಯಕ್ ಮತ್ತು ಬಳಗದಿಂದ ಸಂಗೀತದ ರಸಧಾರೆಯೊಂದಿಗೆ ವಿಶಿಷ್ಟ ಶೈಲಿಯ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ರಾತ್ರಿ ಹರಿವರಾಸನಂ ಮೂಲಕ ಮಂಗಳ ನಡೆಯಲಿದೆ. ಭಕ್ತಾದಿಗಳು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗುವಂತೆ ಫೌಂಡೇಷನ್‌ನ ಆಡಳಿತ ಟ್ರಸ್ಟಿ ಶಾಂಭವಿ ಆರ್. ಶೆಟ್ಟಿ ಮತ್ತು ಅಧ್ಯಕ್ಷ ಕೇದಗೆ ಸುರೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶ್ವಸ್ಥರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.