Advertisement

ಶಾಲಾ ಸುಧಾರಣೆಗೆ ಆಪ್‌ ಆಗ್ರಹ

12:03 PM Jun 07, 2022 | Team Udayavani |

ಜೇವರ್ಗಿ: ತಾಲೂಕಿನ ಸರಕಾರಿ ಶಾಲೆಗಳ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಮ್‌ ಆದ್ಮಿ ಪಕ್ಷ ತಾಲೂಕು ಘಟಕದ ವತಿಯಿಂದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಕಳೆದ ಮೇ 16 ರಂದು ಶಾಲೆಗಳು ಆರಂಭವಾಗಿ, ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ ಮಕ್ಕಳಿಗೆ ಕುಳಿತುಕೊಳ್ಳಲು ಸೂಕ್ತ ಆಸನದ, ಕೊಠಡಿಗಳ ಕೊರತೆ ಎದ್ದು ಕಾಣುತ್ತಿದೆ. ಬಿರುಕು ಬಿಟ್ಟ ಗೋಡೆ, ಸಿಮೆಂಟ್‌ ಉದುರುತ್ತಿರುವ ಮೇಲ್ಛಾವಣಿ, ಸುಣ್ಣ ಬಣ್ಣ ಕಾಣದ ಗೋಡೆಗಳು, ಗಾಳಿ ಬೆಳಕಿನ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳು ಶಾಲೆಗೆ ಹೋಗುವಂತಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಶಾಲೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದರೂ ಸರಕಾರಿ ಶಾಲೆಗಳ ಸುಧಾರಣೆ ಆಗುತ್ತಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಕಾಂಪೌಂಡ್‌ ಗೋಡೆ, ಮೈದಾನ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದರೂ ಅಭಿವೃದ್ಧಿ ಆಗುತ್ತಿಲ್ಲ. ಮಳೆಗಾಲ ಆರಂಭವಾಗುತ್ತಿದ್ದೂ, ಕೂಡಲೇ ಸಂಬಂಧಪಟ್ಟವರು ತಾಲೂಕಿನಲ್ಲಿರುವ ಶಾಲೆಗಳ ಕಟ್ಟಡ ಸುಧಾರಣೆ ಜತೆಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಮನವಿ ಪತ್ರದ ಮೂಲಕ ಆಗ್ರಹಿಸಲಾಯಿತು.

ಆಮ್‌ ಆದ್ಮಿ ಪಕ್ಷದ ಮುಖಂಡರಾದ ಬಸವರಾಜ ಹರವಾಳ, ಹಬೀಬ ಜಮಾದಾರ, ದೌಲತ್ತರಾಯ ಕುಂಬಾರ, ಪರಮಾನಂದ ಯಲಗೋಡ, ಕಾಶಿಂ ಕೂಡಿ, ಫರೀದ್‌ಸಾಬ, ಎಂ.ಎಂ. ಶಿರಹಟ್ಟಿ, ತಿಪ್ಪಣ್ಣ ಹುಲ್ಲೂರ, ಸಿದ್ದಣ್ಣ ಆದ್ವಾನಿ, ಮಲ್ಲಪ್ಪ ಅಂದಾ, ಶಿವಮಲ್ಲಪ್ಪ ಪೂಜಾರಿ, ಸಾಜೀದ್‌ ಗಂವ್ಹಾರ, ನಜೀರ ಪಾಶಾ, ವಿವೇಕಾನಂದ ಸೇರಿದಂತೆ ಮತ್ತೀತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next