ಬೆಂಗಳೂರು: ನಗರದಲ್ಲಿ ಮಳೆಯಿಂದ ಉಂಟಾಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಮಾಹಿತಿ ನೀಡಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು “ಬೆಂಗಳೂರು ಮೇಘ ಸಂದೇಶ ಆ್ಯಪ್’ ಹಾಗೂ ವರುಣ ಮಿತ್ರ ವೆಬ್‌ಸೈಟ್ ಸಿದ್ಧಪಡಿಸಿದೆ.
ಯಲಹಂಕದದಲ್ಲಿ ಶನಿವಾರ ಕೆಎಸ್ ಎನ್‌ಡಿಎಂಸಿ ಮತ್ತು ಐಐಎಸ್‌ಸಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಆ್ಯಪ್ ಹಾಗೂ ವೆಬ್‌ಸೈಟ್‌ಗೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿ, ಇದರಿಂದ ನಗರದಲ್ಲಿ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಮಳೆ, ಗಾಳಿಯ ಬಗ್ಗೆ ಸುಲಭವಾಗಿ ಮತ್ತು ಕೆಲವೇ ಕ್ಷಣಗಳಲ್ಲಿ ಮಾಹಿತಿ ಸಿಗಲಿದೆ. ಮಳೆ ಬರುವಾಗ ಯಾವ ರಸ್ತೆ ಸುರಕ್ಷಿತವಾಗಿದೆ. ಎಲ್ಲಿ ಪ್ರವಾಹ ಉಂಟಾಗಬಹುದು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇವುಗಳಿಂದ ಲಭ್ಯವಾಗಲಿದೆ ಎಂದು ಹೇಳಿದರು.
ಶಾಶ್ವತ ಪರಿಹಾರಕ್ಕೆ ಸಮಿತಿ: ಮಳೆಯಾದಾಗ ಪ್ರತಿ ಬಾರಿಯೂ ಕೆಲವು ಪ್ರದೇಶಗಳು ಜಲಾವೃತ್ತವಾಗುತ್ತಿವೆ. ಈ ರೀತಿಯ ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಈಗಾ ಗಲೇ ಗುರುತಿಸಲಾಗಿ ದ್ದು, ಈ ಭಾಗದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಟಾಟಾ ಇನ್‌ಟಿಟ್ಯೂಟ್ ಎಂಜಿನಿಯರ್‌ಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ತಂಡಗಳು ಪ್ರತಿ ಪ್ರವಾಹ ಪೀಡಿತ ಪ್ರದೇ ಶಕ್ಕೆ ಭೇಟಿ ನೀಡಿ, ಆಯಾ ಪ್ರದೇಶಗಳಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿ ತಪ್ಪಿಸುವ ನಿಟ್ಟಿನಲ್ಲಿ ವರದಿ ನೀಡಲಿವೆ. ವರ ದಿಯ ಆಧಾರದ ಮೇಲೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ರಾಜ್ಯ ವಿಪತ್ತು ಪ್ರಾಧಿಕಾರದ ನಿರ್ದೇಶಕ ಮನೋಜ್ ರಾಜನ್ ಇತರರಿದ್ದರು. ಈ ವೇಳೆ ಬಿಬಿಎಂಪಿ ಮತ್ತು ವಿಪತ್ತು ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಪ್ರವಾಹ ಸಿದ್ಧತೆ ಮತ್ತು ತಂತ್ರಜ್ಞಾನ ಬಳಕೆ ಕುರಿತು ಕಾರ್ಯಾಗಾರ ನಡೆಸಲಾಯಿತು.
ಮಾಹಿತಿ ನೀಡುವ ಮೇಘ ಸಂದೇಶ: ನಿಗದಿತ ಪ್ರದೇಶದ ಮಳೆ ಪ್ರಮಾಣ, ಉಷ್ಣಾಂಶ, ಗಾಳಿಯ ವೇಗ ಮತ್ತು ಗಾಳಿ ಯಾವ ದಿಕ್ಕಿನಲ್ಲಿ ಬೀಸಲಿದೆ ಎಂಬ ವಿವರ ಲಭ್ಯ. ಮುಂದಿನ ಮೂರು ದಿನ ತಾವು ಇರುವ ಪ್ರದೇಶದ ಉಷ್ಣಾಂಶ, ಆದ್ರìತೆ, ಗಾಳಿಯ ವೇಗ ಮತ್ತು ಮಳೆ ಬಗ್ಗೆ ಮಾಹಿತಿ ಹಾಗೂ ಪ್ರವಾಹ ಉಂಟಾಗುವ ಪ್ರದೇಶ, ಸಿಡಿಲು ಮಾಹಿತಿ, ಮರ ಬಿದ್ದ ರಸ್ತೆ ಬಂದ್ ಆಗಿರುವ ಮಾಹಿತಿ ಸಿಗಲಿದೆ.
ವರುಣ ಮಿತ್ರ – ಮುನ್ಸೂಚನೆ: ಮಳೆಗಾಲದ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಉಂಟಾಗುವ ಪ್ರವಾಹವನ್ನು ತಡೆಲು ವಲಯವಾರು ನಕ್ಷೆ, ಮಳೆ ಮುನ್ಸೂಚನೆ, ಪ್ರವಾಹ ಮುನ್ಸೂಚನೆ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ವರುಣ ಮಿತ್ರ ವೆಬ್‌ಸೈಟ್ ಪಡೆಯಬಹುದಾಗಿದೆ. ಮಾಹಿತಿಗೆ //varunamitra.karnataka.gov.in/ ಜಾಲತಾಣ ಸಂಪರ್ಕಿಸಬಹುದು.