Advertisement

Apology: ಕ್ಷಮಾಧಾನಕ್ಕೆ ರಾಷ್ಟ್ರಪತಿ ನಿರ್ಣಯವೇ ಅಂತಿಮ

10:19 PM Aug 31, 2023 | Team Udayavani |

ನವದೆಹಲಿ: ಮರಣದಂಡನೆಗೆ ಗುರಿಯಾದ ಅಪರಾಧಿಯು ಸಲ್ಲಿಸಿದ ಕ್ಷಮಾಧಾನ ಮನವಿಯನ್ನು ರಾಷ್ಟ್ರಪತಿಗಳೇ ತಿರಸ್ಕರಿಸಿದರೆ, ಆ ಬಳಿಕ ಅಪರಾಧಿ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವಂತಿಲ್ಲ. ಹೀಗೆಂದು ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ-2023 (ಬಿಎನ್‌ಎಸ್‌ಎಸ್‌ )ರಲ್ಲಿ ಪ್ರಸ್ತಾಪಿಸಲಾಗಿದೆ.

Advertisement

ಸಂವಿಧಾನದ 72ನೇ ವಿಧಿಯು ಶಿಕ್ಷೆಗೆ ಗುರಿಯಾದ ಯಾರಿಗಾದರೂ ಕ್ಷಮಾಧಾನ ನೀಡುವ ಅಥವಾ ಶಿಕ್ಷೆ ಬದಲಿಸುವ ಅಧಿಕಾರವನ್ನು ರಾಷ್ಟ್ರಪತಿ ಅವರಿಗೆ ನೀಡಿದೆ. ಈ ಅಧಿಕಾರದ ಅನ್ವಯ ರಾಷ್ಟ್ರಪತಿಗಳು ನೀಡಿದ ತೀರ್ಪು ಅಂತಿಮವಾಗಿರಲಿದ್ದು, ನಂತರ ಅದನ್ನು ಪ್ರಶ್ನಿಸಿ ಯಾವುದೇ ನ್ಯಾಯಾಲಯಕ್ಕೂ ಹೋಗುವಂತಿಲ್ಲ, ಯಾವುದೇ ನ್ಯಾಯಾಲಯವೂ ಈ ಕುರಿತ ತನಿಖೆ ನಡೆಯುವಂತಿಲ್ಲ ಎಂದು ಬಿಎನ್‌ಎಸ್‌ಎಸ್‌ನ 473ನೇ ವಿಧಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next