ನವದೆಹಲಿ : ಅಪೋಲೋ ಮತ್ತು ಮ್ಯಾಕ್ಸ್ ಆಸ್ಪತ್ರೆಗಳು ಶನಿವಾರದಿಂದ (ಮೇ 1) ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ನೀಡುವುದಾಗಿ ಶುಕ್ರವಾರ ಘೋಷಣೆ ಮಾಡಿವೆ.
18 ರಿಂದ 45 ವಯೋಮಾನದವರಿಗೆ ಅಪೋಲೋ ಆಸ್ಪತ್ರೆ ಶನಿವಾರದಿಂದ ಲಸಿಕೆ ನೀಡಲು ತಯಾರಿ ಮಾಡಿಕೊಂಡಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಲಸಿಕಾ ತಯಾರಿಕಾ ಕಂಪನಿಗಳಿಂದ ನೇರವಾಗಿ ಲಸಿಕೆ ಖರೀದಿ ಮಾಡಲಾಗುತ್ತದೆ” ಎಂದು ಆಸ್ಪತ್ರೆ ಹೇಳಿದೆ.
ದೇಶದಲ್ಲಿ ಮೇ 1 ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಪ್ರಾರಂಭಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಕರ್ನಾಟಕ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಶನಿವಾರದಿಂದ ಲಸಿಕೆ ನೀಡಲು ಸಾಧ್ಯವಿಲ್ಲ. ನಮ್ಮಲ್ಲಿ ಲಸಿಕೆಯ ಸಂಗ್ರಹವಿಲ್ಲ ಎಂದು ಹೇಳಿವೆ.
ದರ :
ಖಾಸಗಿ ಆಸ್ಪತ್ರೆಗಳು ಸೆರಮ್ ಇನ್ಸಿಟಿಟ್ಯೂಟ್ ಲಸಿಕೆಯನ್ನು ಪಡೆಯಲು ಪ್ರತಿ ಡೋಸ್‌ಗೆ 600 ರೂ.ಗಳನ್ನು ಪಾವತಿ ಮಾಡಬೇಕು. ಭಾರತ್ ಬಯೋಟೆಕ್ ಲಸಿಕೆಯನ್ನು ಪಡೆಯಲು ಪ್ರತಿ ಡೋಸ್‌ಗೆ 1,200 ರೂ. ಪಾವತಿ ಮಾಡಬೇಕಿದೆ.