Advertisement
ಗ್ರಾಮೀಣ ಭಾಗಗಳಲ್ಲಿ ಕಾಡುತ್ಪತ್ತಿ ಹಾಗೂ ಅಡಿಕೆ ಮತ್ತಿತರ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿಯೂ ಮಾರುಕಟ್ಟೆ ಪ್ರವೇಶಕ್ಕೆ ಮಾಸ್ಕ್, ಸಾಮಾಜಿಕ ಅಂತರ ಷರತ್ತು ಅನ್ವಯವಾಗಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಉಜ್ವಲ್ ಗ್ಯಾಸ್ ಸಂಪರ್ಕ ಪಡೆದುಕೊಂಡವರು ಉಚಿತ ಸಿಲಿಂಡರ್ ಅನ್ನು ತತ್‌ಕ್ಷಣ ಪಡೆದುಕೊಳ್ಳಬಹುದು. ಈಗಾಗಲೇ ಅದಕ್ಕೆ ಬೇಕಾದಂತಹ ಮೊತ್ತ ಗ್ಯಾಸ್ ಏಜೆನ್ಸಿಗಳ ಖಾತೆಗೆ ಜಮೆ ಆಗಿದೆ. ಅನಿಲ ಭಾಗ್ಯ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದವರಿಗೂ ಮುಂದಿನ ದಿನಗಳಲ್ಲಿ ಉಚಿತ ಗ್ಯಾಸ್ ಸಿಗುವ ವ್ಯವಸ್ಥೆ ಆಗುತ್ತದೆ ಎಂದರು.
Related Articles
ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ 2 ಸಾವಿರ ರೂ.ನಂತೆ ಜಮೆ ಮಾಡಲು ಬೇಕಾದ ಮೊತ್ತವನ್ನು ಕಾರ್ಮಿಕ ಇಲಾಖೆ ಖಾತೆಗೆ ರಾಜ್ಯ ಸರಕಾರ ಜಮೆ ಮಾಡಿದೆ. ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಯನ್ನು ಇಲಾಖೆಗೆ ನೀಡಿದರೆ ಹಣ ಜಮೆ ಮಾಡುತ್ತಾರೆ ಎಂದರು.ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಉಪಸ್ಥಿತರಿದ್ದರು.
Advertisement
ದರ ಏರಿಕೆ: ಎಚ್ಚರಿಕೆಸಿಮೆಂಟ್, ಕಬ್ಬಿಣ ಮತ್ತಿತರ ವಸ್ತುಗಳಿಗೆ ತಮಗೆ ಬೇಕಾದಂತೆ ದರ ಹೆಚ್ಚಿಸುವ ವ್ಯಾಪಾರಿಗಳ ಬಗ್ಗೆ ನಿಗಾ ಇಡಲಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ಕಾನೂನು ಪ್ರಕಾರ ವ್ಯಾಪಾರಿಗಳ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಠಂದೂರು ಅವರು ಎಚ್ಚರಿಕೆ ನೀಡಿದ್ದಾರೆ. ಮರಳು ನೀತಿ ಸಿದ್ಧ
ರಾಜ್ಯದಲ್ಲಿ ಹೊಸ ಮರಳು ನೀತಿ ಬಗ್ಗೆ ಸಚಿವರು ಭರವಸೆ ನೀಡಿದ್ದರು. ಇದೀಗ ಹೊಸ ಮರಳು ನೀತಿ ಸಿದ್ಧವಾಗಿದೆ. ಈ ಹೊಸ ನೀತಿಗೆ ಮುಖ್ಯಮಂತ್ರಿ ಸಹಿ ಹಾಕಲು ಮಾತ್ರ ಬಾಕಿ ಇದೆ. ಸರಕಾರದಿಂದ ಅಧಿಕೃತ ಆದೇಶ ಕೆಲವೇ ದಿನಗಳಲ್ಲಿ ಬರಲಿದೆ.
– ಸಂಜೀವ ಮಠಂದೂರು
ಶಾಸಕರು