ಹುಬ್ಬಳ್ಳಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲು ಸರ್ಕಿಟ್ ಹೌಸ್‌ನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಾ.14ರಂದು ಎಪಿಎಂಸಿ ಅಧ್ಯಕ್ಷರ ಆಯ್ಕೆಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಚರ್ಚಿಸಿದರು.
ಜೆಡಿಎಸ್‌ನವರು ತಮಗೂ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸಿದರು ಎನ್ನಲಾಗಿದೆ. ಸಭೆಯಲ್ಲಿ ಎಪಿಎಂಸಿ ಸದಸ್ಯರಾದ ಈಶ್ವರ ಕಿತ್ತೂರ, ರಘು ಕೆಂಪಲಿಂಗನಗೌಡರ, ಮಂಜುನಾಥ ಮುದರಡ್ಡಿ, ಜಗನ್ನಾಥಗೌಡಸಿದ್ದನಗೌಡರ, ಸುರೇಶ ಕಿರೆಸೂರ, ಶಂಕರಗೌಡ ಪಾಟೀಲ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ, ಪಿ.ಸಿ.ಸಿದ್ದನಗೌಡರ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮೊದಲಾದವರು ಇದ್ದರು.
ಅಧ್ಯಕ್ಷ ಆಯ್ಕೆಗೆ 9 ಸದಸ್ಯರ ಬೆಂಬಲ ಅವಶ್ಯಕತೆಯಿದೆ. ಎಪಿಎಂಸಿ ಚುನಾವಣೆಯಲ್ಲಿಬಿಜೆಪಿ ಬೆಂಬಲಿತರು 5 ಜನ ಸದಸ್ಯರಿದ್ದರೆ, ಕಾಂಗ್ರೆಸ್ ಬೆಂಬಲಿತರು 3 ಜನರಿದ್ದು, 3 ಜನರು ಸರಕಾರದಿಂದ ನಾಮ ನಿರ್ದೇಶಿತ ಸದಸ್ಯರಿದ್ದಾರೆ. ಜೆಡಿಎಸ್ ಬೆಂಬಲಿತ ಒಬ್ಬ ಸದಸ್ಯರಿದ್ದು, ಯಾವುದೇ ಪಕ್ಷದ ಬೆಂಬಲ ಪಡೆಯದ 5 ಸದಸ್ಯರಿದ್ದಾರೆ.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ವಿನಯ ಕುಲಕರ್ಣಿ,ಕಾಂಗ್ರೆಸ್ ಬೆಂಬಲಿತರು ಎಪಿಎಂಸಿ ಅಧ್ಯಕ್ಷರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನಮಗೆ ಒಟ್ಟು 9 ಸದಸ್ಯರ ಬೆಂಬಲವಿದೆ. ಜೆಡಿಎಸ್ ಕೂಡ ಬೆಂಬಲಿಸಲು ಒಪ್ಪಿಕೊಂಡಿದ್ದು, ಯಾರನ್ನು ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. 3 ಅಥವಾ 4 ಅವಧಿ ಅಧ್ಯಕ್ಷರ ಆಯ್ಕೆ ಕುರಿತು ಬಗ್ಗೆ ಚರ್ಚೆ ನಡೆದಿದೆ ಎಂದರು.
ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ಜೆಡಿಎಸ್‌ಗೆ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವಂತೆ ಕೇಳಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡುಅಧಿಕಾರ ನಡೆಸುವುದು ಖಚಿತ. ಅಧ್ಯಕ್ಷರಿಗೆ 1ವರ್ಷದ ಅವಧಿ ನಿಗದಿಪಡಿಸಿದರೆ ಹೆಚ್ಚಿನ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ ಎಂಬ ಬಗ್ಗೆ ಕೂಡ ಚರ್ಚೆ ನಡೆಯಿತು ಎಂದು ತಿಳಿಸಿದರು.