Advertisement
ಅಲ್ಲದೆ, ಮುಧೋಳ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲ ಪಡೆದರೂ ಜಯಗಳಿಸುವಲ್ಲಿ ವಿಫಲವಾಗಿದೆ. ಮಾ.14 ರಂದು ಎಪಿಎಂಸಿಯ ಒಂಭತ್ತು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮಂಗಳವಾರ ನಡೆದ ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶ ಹೊರಬಿದ್ದಿದೆ. ಚುನಾವಣೆಗೂ ಮುಂಚೆ ನಾಲ್ವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಇಟಕಾಲ, ಕೋಲಕುಂದಾ, ರಂಜೋಳ ಹಾಗೂ ಸಹಕಾರ ಕ್ಷೇತ್ರದಿಂದ ವಿರೋಧ ಆಯ್ಕೆಯಾಗಿದ್ದರು.
Related Articles
Advertisement
ಆಡಕಿ ಕ್ಷೇತ್ರದಿಂದ ಗುರುನಾಥರೆಡ್ಡಿ 1966 ಮತ ಪಡೆದು ಜಯಗಳಿಸಿದರೆ, ಎದುರಾಳಿ ಗೋವಿಂದ ಮುಡಗುಲ್ 672 ಮತ ಪಡೆದರು. ವರ್ತಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ (ಬಿಜೆಪಿ ಬೆಂಬಲಿತ ಎಂದು ಹೇಳಲ್ಪಟ್ಟ) ವಿದ್ಯಾಸಾಗರ ಪಾಟೀಲ 125 ಮತ ಪಡೆದು ಜಯಗಳಿಸಿದರೆ, ಎದುರಾಳಿ ಶಿವಶರಣಪ್ಪ ಪಂತಲು 110 ಮತ ಪಡೆದರು.
ಕಾರ್ಯಕರ್ತರೇ ಗೆಲುವಿಗೆ ಕಾರಣ: ಕಾರ್ಯಕರ್ತರು ಪ್ರಾಮಾಣಿಕ ರೀತಿಯಲ್ಲಿ ದುಡಿದ ಕಾರ್ಯದ ಫಲವಾಗಿ ಎಪಿಎಂಸಿಯ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ಎಪಿಎಂಸಿ ಚುನಾವಣೆಗೆ ತಾವು ಪ್ರಚಾರ ಮಾಡಿಲ್ಲ. ಆದರೂ ಎಲ್ಲಾ ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಈ ಮೂಲಕ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಕಾರ್ಯಕ್ಷಮತೆ ಅರಿಯಬಹುದು ಎಂದು ಹೇಳಿದರು.
ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಹಿರಿಯ ಮುಖಂಡ ಶಂಭುರೆಡ್ಡಿ ಮದ್ನಿ, ಶರಣಭೂಪಾಲರೆಡ್ಡಿ ಪಾಟೀಲ, ಸತೀಶರೆಡ್ಡಿ ಪಾಟೀಲ ರಂಜೋಳ, ಹಾಪಕಾಮ್ಸ್ ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ ಹಾಗೂ ಮತ್ತಿತರರು ಇದ್ದರು.
ಸನ್ಮಾನ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್ನಲಾಗಿದ್ದ ಪಕ್ಷೇತರ ಅಭ್ಯರ್ಥಿ ವಿದ್ಯಾಸಾಗರ ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿಗೆ ಬಂದು ಸಚಿವರನ್ನು ಸನ್ಮಾನಿಸಿದರು.