Advertisement
ರೈತರ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಕೃಷಿ ಉತ್ಪನ್ನಮಾರುಕಟ್ಟೆಗಳು ಇದ್ದೂ ಇಲ್ಲದಂತಾಗಿವೆ. ಇದೇ ಕಾರಣದಿಂದ ಎಪಿಎಂಸಿ ಸೆಸ್ ಸಂಗ್ರಹದಲ್ಲಿ ಸಾಕಷ್ಟುಇಳಿಕೆಯಾಗುತ್ತಿದ್ದು ಮಾರುಕಟ್ಟೆ ವ್ಯವಸ್ಥೆಯ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ.
Related Articles
Advertisement
ಇದು ಎಪಿಎಂಸಿ ಸೆಸ್ ಸಂಗ್ರಹದ ಮೇಲೆ ಹೊಡೆತ ಕೊಟ್ಟಿದೆ. 2019-20 ರ ಅಗಸ್ಟ್‌ದಿಂದ ಜನವರಿಯವರೆಗೆ1.86 ಕೋಟಿ ರೂ. ಮಾರುಕಟ್ಟೆಶುಲ್ಕ ಸೇರಿ ಒಟ್ಟು 3.98 ಕೋಟಿರೂ. ಶುಲ್ಕ ಸಂಗ್ರಹವಾಗಿತ್ತು. ಆದರೆ2020-21 ರ ಇದೇ ಅವಧಿಯಲ್ಲಿ ಕೇವಲ 85.49ಲಕ್ಷ ರೂ. ಸಂಗ್ರಹವಾಗಿದೆ. ಇದರಲ್ಲಿ 35.16ಲಕ್ಷ ರೂ. ಮಾರುಕಟ್ಟೆ ಶುಲ್ಕ ಒಳಗೊಂಡಿದೆ. ಈ ಮೊದಲು ಮಾರುಕಟ್ಟೆ ಶುಲ್ಕ ಪ್ರತಿ ನೂರು ರೂ.ಗಳಿಗೆ 1.50 ರೂ. ಇತ್ತು. ಆದರೆ ಈಗ ಇದರ ಪ್ರಮಾಣ ಕೇವಲ 60 ಪೈಸೆ ಮಾತ್ರ ಇದೆ. ಎಪಿಎಂಸಿ ಹೊರಗಡೆವಹಿವಾಟು ಮಾಡುವವರು ಶುಲ್ಕ ಕಟ್ಟುತ್ತಿಲ್ಲ. ಮೇಲಾಗಿಗೋಧಿ, ಅಕ್ಕಿ ಮೊದಲಾದ ಆಹಾರ ಧಾನ್ಯ ತರಿಸುತ್ತಿದ್ದ ಭಾರತೀಯ ಆಹಾರ ನಿಗಮದಿಂದ ನಮಗೆ ಪ್ರತಿ ವರ್ಷ ಒಂದು ಕೋಟಿ ಶುಲ್ಕ ಬರುತ್ತಿತ್ತು. ಈಗ ಹೊಸ ಕಾಯ್ದೆ ಪರಿಣಾಮ ಅದೂ ಸಹ ತಪ್ಪಿದೆ. ಹೀಗಾಗಿನಿರ್ವಹಣೆಗೆ ಬಹಳ ತೊಂದರೆಯಾಗುತ್ತಿದೆ ಎಂಬುದು ಎಪಿಎಂಸಿ ಅಧಿಕಾರಿಗಳ ಹೇಳಿಕೆ.
ಮೊದಲು ಎಪಿಎಂಸಿ ಬಿಟ್ಟು ಹೊರಗಡೆಮಾರಿದರೆ ಪ್ರಕರಣ ದಾಖಲು ಮಾಡಲಾಗುತ್ತಿತ್ತು. ಈಗ ಈ ನಿರ್ಬಂಧ ತೆರವುಮಾಡಲಾಗಿದೆ. ರೈತರಿಗೆ ಮುಕ್ತ ಮಾರಾಟದ ಸೌಲಭ್ಯ ಕಲ್ಪಿಸಲಾಗಿದೆ. ಇಷ್ಟಾದರೂ ರೈತರಶೋಷಣೆ ನಿಂತಿಲ್ಲ. ದಲ್ಲಾಳಿಗಳು ರೈತರಿಂದಪ್ರತಿಶತ 8ರಿಂದ 10ರಷ್ಟು ಕಮಿಷನ್‌ಪಡೆಯುತ್ತಲೇ ಇದ್ದಾರೆ. ಸರ್ಕಾರದ ಆದೇಶದಲ್ಲಾಳಿಗಳಿಗೆ ಅನುಕೂಲವಾಗಿದೆ. ಸರ್ಕಾರವೇ ಎಪಿಎಂಸಿಗಳನ್ನು ಮುಚ್ಚುವ ವಾತಾವರಣ ನಿರ್ಮಾಣ ಮಾಡಿದೆ. – ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ
ಹೊಸ ಕಾಯ್ದೆ ಇನ್ನೂ ಜಾರಿಗೆ ಬಂದಿಲ್ಲ. ಆಗಲೇ ಎಪಿಎಂಸಿ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಎಪಿಎಂಸಿ ಉಳಿಸಬೇಕು ಎಂಬ ಇಚ್ಛಾಶಕ್ತಿ ಸರ್ಕಾರಕ್ಕಾಗಲೀಅಥವಾ ಅಧಿಕಾರಿಗಳಿಗೆ ಇಲ್ಲ. ಪ್ರತಿ ವರ್ಷ ಅಂಗಡಿಗಳಿಂದ ಸರಿಯಾಗಿ ಬಾಡಿಗೆ ಹಾಗೂ ಮಾರುಕಟ್ಟೆ ಶುಲ್ಕ ವಸೂಲಿ ಆಗುತ್ತಿಲ್ಲ. ಇದರಿಂದ ಸಹಜವಾಗಿಯೇ ಎಪಿಎಂಸಿ ಆದಾಯ ಕಡಿಮೆಯಾಗಿದೆ. – ಶಿವನಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ
ಮಾರುಕಟ್ಟೆ ಶುಲ್ಕ ಕಡಿಮೆಯಾಗಿರುವುದರಿಂದ ಎಪಿಎಂಸಿಆದಾಯದ ಮೇಲೆ ಬಹಳ ಕೆಟ್ಟ ಪರಿಣಾಮ ಆಗಿದೆ. ಇದರಿಂದ ನಿರ್ವಹಣೆ ಸಮಸ್ಯೆಯಾಗಿದ್ದು ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲುಸಮಸ್ಯೆಯಾಗುತ್ತಿದೆ. ಈ ಎಲ್ಲ ಅಂಶಗಳ ಬಗ್ಗೆಸರಕಾರದ ಗಮನಕ್ಕೆ ತರಲಾಗಿದೆ. –ಡಾ| ಕೋಡಿಗೌಡ ಕೆ, ಕಾರ್ಯದರ್ಶಿ, ಎಪಿಎಂಸಿ
–ಕೇಶವ ಆದಿ