Advertisement

ಅಗತ್ಯ ಬಿದ್ದರೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಸಿದ್ಧವಿದೆ : ಸಚಿವ ಸೋಮಶೇಖರ್‌

09:03 PM Nov 15, 2020 | sudhir |

ಸುರತ್ಕಲ್: ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಲು ಅಗತ್ಯ ಬಿದ್ದರೆ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಸಿದ್ಧವಿದೆ ಎಂದು ಕೃಷಿ ಮಾರುಕಟ್ಟೆ ಇಲಾಖಾ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

Advertisement

ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಭೇಟಿ ನೀಡಿ ಸ್ಥಳೀಯ ಶಾಸಕರು, ಸಮಿತಿಯ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕೇಂದ್ರ ಸರಕಾರವು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂಬ ಕಾನೂನು ತಂದ ಬಳಿಕ, ಬಹುತೇಕ ಎಪಿಎಂಸಿಗಳು ಭೀತಿಯಲ್ಲಿವೆ. ಆದರೆ ಎಪಿಎಂಸಿ ಯಾರ್ಡ್‌ಗಳ ಪರ್ಯಯ ಬಳಕೆ, ಆರ್ಥಿಕವಾಗಿ ಸಮಿತಿಗಳನ್ನು ಸುದೃಢಗೊಳಿಸಲು ಅಗತ್ಯ ಕ್ರಮವನ್ನು ಶೀಘ್ರ ಕೈಗೊಳ್ಳಲಾಗುವುದು. ಇದರ ಜತೆಗೆ ಎಪಿಎಂಸಿಯ ಅ ಧಿಕಾರವನ್ನು ವಿಕೇಂದ್ರೀಕರಣ ಮಾಡುವಲ್ಲಿಯೂ ಸರಕಾರ ಚಿಂತನೆ ನಡೆಸಲಿದೆ. ಇದರಿಂದ ಸಣ್ಣಪುಟ್ಟ ಕಾಮಗಾರಿ, ಅಭಿವೃದ್ಧಿಗೆ ಬೆಂಗಳೂರನ್ನು ಆಶ್ರಯಿಸುವುದು ತಪ್ಪಲಿದೆ ಎಂದರು.

ಇದನ್ನೂ ಓದಿ:ಮೈಸೂರು: ಪ್ರೀತಿಯ ನಾಟಕವಾಡಿ ಯುವತಿಯನ್ನು ಬೆಂಕಿಹಚ್ಚಿ ಕೊಂದ ಹಂತಕ ಅರೆಸ್ಟ್

ರಾಜ್ಯದ ನಾನಾ ಭಾಗದಲ್ಲಿರು ಎಪಿಎಂಸಿಗಳಲ್ಲಿ ಎಕರೆ ಗಟ್ಟಲೆ ಭೂಮಿಯಿದ್ದು, ಪರ್ಯಾಯ ಬಳಕೆಗೆ ಸರಕಾರದ ಇತರ ಇಲಾಖೆಗಳಿಂದ ಮನವಿಗಳು ಬರುತ್ತಿವೆ. ಆದರೆ ಕೃಷಿಕರಿಗಾಗಿಯೇ ಇದು ಉಳಿಯಬೇಕು. ಈ ನಿಟ್ಟಿನಲ್ಲಿ ಸಮಿತಿ ಅಧ್ಯಕ್ಷರು, ಸದಸ್ಯರು, ಅ ಧಿಕಾರಿಗಳು ಆಯಾ ಎಪಿಎಂಸಿ ಬಲವರ್ಧನೆಗೆ ನೀಲಿ ನಕಾಶೆ ಮಾಡಿ ಕಳಿಸಬೇಕು ಎಂದರು.

ಕೋಲ್ಡ್‌ ಸ್ಟೋರೇಜ್‌ ಅಗತ್ಯ
ಬೈಕಂಪಾಡಿ ಯಾರ್ಡ್‌ ಸೂಕ್ತ ಸಂಪರ್ಕ ವ್ಯವಸ್ಥೆ ಹೊಂದಿದ್ದು, ಈ ಭಾಗದಲ್ಲಿ ಹಣ್ಣು ಹಂಪಲು ಕೋಲ್ಡ್‌ ಸ್ಟೋರೇಜ್‌ ಅಗತ್ಯವಿದೆ. ಇದರ ಜತೆಗೆ ಈ ಯಾರ್ಡನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದು, ಸಚಿವರು ಅನುಮೋದನೆಯನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಮನವಿ ಮಾಡಿದರು.

Advertisement

ಬೈಕಂಪಾಡಿ ಯಾರ್ಡ್‌ನಲ್ಲಿ ಹಣ್ಣು ತರಕಾರಿ ಮಾರಲು ಆಸಕ್ತರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಕಾನೂನು ತಿದ್ದುಪಡಿಯ ಅಗತ್ಯವಿದೆ. 80 ಎಕರೆ ಪ್ರದೇಶ ಸದ್ಬಳಕೆಯಾಗಬೇಕಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ನುಡಿದರು.

ಎಪಿಎಂಸಿ ಅಧ್ಯಕ್ಷರ ಮನವಿ; ಸಚಿವರ ಭರವಸೆ
ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಅವರು ಸಚಿವರಿಗೆ ಮನವಿ ಸಲ್ಲಿಸಿ, ಕನಿಷ್ಠ 1 ಕೋಟಿ ರೂ. ಕಾಮಗಾರಿಯನ್ನು ನಡೆಸಲು ಸಮಿತಿ ಮಟ್ಟದಲ್ಲಿ ಅ ಧಿಕಾರ ನೀಡುವುದು, ಆದಾಯ ನಿ ಧಿಯಲ್ಲಿ ಇದೀಗ ನಿಗದಿ ಮಾಡಿದ 34 ಪೈಸೆಗಳನ್ನು ಎಪಿಎಂಸಿಗೆ ನೀಡುವಂತೆ, ಬೈಕಂಪಾಡಿ ಎಪಿಎಂಸಿಯನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಲು ಬೇಕಾದ ತುರ್ತು ಕ್ರಮವನ್ನು ಕೈಗೊಂಡು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಲು ಯೋಜನೆಗೆ ಅನುಮೋದನೆ ನೀಡುವಂತೆ ಆಗ್ರಹಿಸಿ ದರು. ಇದಕ್ಕೆ ಸ್ಪಂದಿಸಿದ ಸಚಿವರು ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದರು.

ಉಪಾಧ್ಯಕ್ಷೆ ರಜನಿ ದುಗ್ಗಣ್ಣ, ಸದಸ್ಯರಾದ ಅಶೋಕ್‌ ಶೆಟ್ಟಿ, ಪ್ರವೀಣ್‌ ಕುಮಾರ್‌, ರುಕ್ಮಯ್ಯ ನಾಯ್ಕ, ವರ್ತಕರ ಪ್ರತಿನಿಧಿ  ರಾಘವ ಶೆಟ್ಟಿ , ಎಂಜಿನಿಯರ್‌ ಗಣೇಶ್‌ ಹೆಗ್ಡೆ, ಕಾರ್ಯದರ್ಶಿ ಎಚ್‌.ಸಿ.ಎಂ. ರಾಣಿ, ವರ್ತಕರ ಸಂಘದ ಅಧ್ಯಕ್ಷ ಭರತ್‌ ರಾಜ್‌ ಕೃಷ್ಣಾಪುರ, ಮನಪಾ ಸದಸ್ಯ ವರುಣ್‌ ಚೌಟ, ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next