Advertisement

ಕೊರಟಗೆರೆ ಎಪಿಎಂಸಿ ಮುಚ್ಚಲು ಜನತೆ ವಿರೋಧ

10:16 PM Jul 02, 2021 | Team Udayavani |

ಕೊರಟಗೆರೆ: ತಾಲೂಕಿನ ರೈತರ ಬಹುದಿನದಕನಸಾದಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭಕ್ಕೂ ಮುನ್ನವೇಸರ್ಕಾರ ಮುಚ್ಚಲು ನಿರ್ಧರಿಸಿದ್ದು, ರೈತರಿಂದ ಭಾರೀವಿರೋಧ ವ್ಯಕ್ತವಾಗಿದೆ.

Advertisement

ತಾಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಬಳಿಕೃಷಿ ಮಾರುಕಟ್ಟೆಗೆ ಅಡಿಗಲ್ಲು ಹಾಕಲಾಗಿತ್ತು. 92ವಿವಿಧ ಅಧಿಸೂಚಿತ ಕೃಷಿ ಉತ್ಪನ್ನ ಮಾರಾಟನಿಯಂತ್ರಣಕ್ಕೆ ಒಳಪಡಿಸಲಾಗಿತ್ತು. 9 ಎಕರೆ ಜಾಗಮಾರುಕಟ್ಟೆಗೆ ಗುರುತಿಸಿ ಮಾರುಕಟ್ಟೆ ಸ್ವಾಧೀನಕ್ಕೆಪಡೆಯಲು ಆ.2017ರಲ್ಲಿ15.20 ಲಕ್ಷ ರೂ. ಸಮಿತಿಕಾರ್ಯದರ್ಶಿ ಮೂಲಕ ಸರ್ಕಾರಕ್ಕೆ ಸಂದಾಯಮಾಡಲಾಗಿತ್ತು.ಸಮಿತಿ ರಚನೆಯಾಗಿ 4 ವರ್ಷ ಕಳೆದರೂಅಭಿವೃದ್ಧಿಗೊಂಡಿಲ್ಲ.

ಮಾರುಕಟ್ಟೆ ರದ್ದುಪಡಿಸಲುಮುಂದಾಗಿರುವುದು ಅವೈಜ್ಞಾನಿಕ. ಕಾಂಪೌಂಡ್‌ಹೊರತುಪಡಿಸಿ ಇತರೆ ಏನೂ ಕೆಲಸ ಮಾಡದಿದ್ದರಿಂದಮಾರುಕಟ್ಟೆಗೆ ನಿಗದಿಪಡಿಸಲಾಗಿದ್ದ 9 ಎಕರೆ ಭೂಮಿಕಚ್ಚಾ ಸ್ಥಿತಿಯಲ್ಲೇ ಇದೆ. ಮಾರುಕಟ್ಟೆ ಸ್ಥಾಪನೆಯಾಗಿಪ್ರಾರಂಭಕ್ಕೂ ಮುನ್ನ ನಷ್ಟ ಎಂದು ಹೇಗೆ ಪರಿಗಣಿಸಲಾಯಿತು ಎಂಬುದೇ ಜನರ ಪ್ರಶ್ನೆಯಾಗಿದೆ.ಮಾರುಕಟ್ಟೆ ಆರಂಭಿಸಿ:ತಾಲೂಕಿನ ಅಕ್ಕಿರಾಂಪುರ ಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ವಾರ ನಡೆಯುವಕುರಿ, ಮೇಕೆ, ಮತ್ತು ಕೋಳಿ ವ್ಯಾಪಾರ ವಹಿವಾಟುಕೋಟಿ ರೂ.ಮೀರಿದೆ. ಇದರಿಂದ ಪ್ರತಿ ಶನಿವಾರರಾಜ್ಯದ ವಿವಿಧೆಡೆಯಿಂದ ನೂರಾರು ಜನ ಇಲ್ಲಿನಮಾರುಕಟ್ಟೆಗೆ ಬರುತ್ತಾರೆ. ಅದೇ ರೀತಿ ಯೋಜಿತಕೃಷಿಉತ್ಪನ್ನ ಮಾರುಕಟ್ಟೆ ವ್ಯವಸ್ಥಿತವಾಗಿ ಪ್ರಾರಂಭಿಸಿದ್ದಲ್ಲಿಇನ್ನಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಈ ಭಾಗದಸ್ಥಳೀಯ ರೈತರು

.ಕ್ರಮ ಕೈಗೊಂಡಿದ್ದ ಪರಂ:2017ರಲ್ಲಿ ಡಿಸಿಎಂ ಆಗಿದ್ದಡಾ.ಜಿ.ಪರಮೇಶ್ವರ್‌ ತುಮಕೂರು ಕೃಷಿ ಉತ್ಪನ್ನಮಾರುಕಟ್ಟೆಯಿಂದ ಪ್ರತ್ಯೇಕಿಸಿ ಕೊರಟಗೆರೆಗೆ ಸ್ವತಂತ್ರಕೃಷಿ ಉತ್ಪನ್ನ ಮಾರುಕಟ್ಟೆ ಮಂಜೂರು ಮಾಡಿಸಿದ್ದರು.ಫೆ.3, 2017ರಂದು ಮಾರುಕಟ್ಟೆ ಸಮಿತಿ ಪ್ರಾರಂಭಕ್ಕೆಸರ್ಕಾರ ಸೂಚಿಸಿತ್ತು.ಕಾಂಪೌಂಡ್‌, ಆಡಳಿತ ಕಚೇರಿ ಹಾಗೂ ಇತರೆಮಳಿಗೆ ನಿರ್ಮಾಣ ಕಾಮಗಾರಿಗೆ 4.50 ಕೋಟಿ ರೂ.ಮಂಜೂರು ಮಾಡಿತ್ತು. ಇದರಲ್ಲಿ ಒಂದು ಕೋಟಿರೂ. ವೆಚ್ಚದಲ್ಲಿ ಕಾಂಪೌಂಡ್‌ ಗೋಡೆ ನಿರ್ಮಾಣಮಾಡಲಾಗಿದೆ. ಸಮಿತಿ ರಚನೆಯಾದ ಬಳಿಕ ಸ್ಥಳೀಯಸಮಿತಿ ಅಧ್ಯಕ್ಷರ ಓಡಾಟಕ್ಕೆಂದು 14 ಲಕ್ಷ ರೂ.ವೆಚ್ಚದಜೀಪ್‌ ಕೂಡ ನೀಡಲಾಗಿತ್ತು. ಸಮ್ಮಿಶ್ರ ಸರ್ಕಾರಅಧಿಕಾರ ಕಳೆದುಕೊಂಡು ಬಿಜೆಪಿ ಸರ್ಕಾರ ಆಡಳಿತಕ್ಕೆಬಂದ ನಂತರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆಸಂಬಂಧಿಸಿದ ಕಾಮಗಾರಿ ಮುಂದುವರಿಯಲಿಲ್ಲ.

ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ಹಣ ನೀಡಲಿಲ್ಲ.ಈಗ ಸರ್ಕಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಆರ್ಥಿಕ ಸದೃಢತೆ ಹೊಂದಿಲ್ಲ ಎಂಬ ನೆಪವೊಡ್ಡಿಅಧಿಸೂಚನೆ ಹೊರಡಿಸುವ ಮೂಲಕ ತುಮಕೂರುಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ವಿಲೀನಗೊಳಿಸಲು ಮುಂದಾಗಿರುವುದಕ್ಕೆಈ ಭಾಗದ ರೈತರಿಂದವಿರೋಧವ್ಯಕ್ತವಾಗುತ್ತಿದೆ.

Advertisement

ಸಿದ್ದರಾಜು.ಕೆ.

Advertisement

Udayavani is now on Telegram. Click here to join our channel and stay updated with the latest news.

Next