Advertisement

ಜೂನಿಯರ್‌ ನ್ಯಾಶನಲ್‌ ಅಕ್ವೆಟಿಕ್ಸ್‌ ಚಾಂಪಿಯನ್‌ಶಿಪ್‌: ಅಪೇಕ್ಷಾ ಫೆರ್ನಾಂಡಿಸ್‌ ದಾಖಲೆ

10:57 PM Jul 18, 2022 | Team Udayavani |

ಭುವನೇಶ್ವರ: ಮಹಾರಾಷ್ಟ್ರವನ್ನು ಪ್ರತಿನಿಧಿಸುವ ಮಂಗಳೂರು ಮೂಲದ ಈಜುತಾರೆ ಅಪೇಕ್ಷಾ ಫೆರ್ನಾಂಡಿಸ್‌ ಜೂನಿಯರ್‌ ನ್ಯಾಶನಲ್‌ ಅಕ್ವೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದಾರೆ.

Advertisement

ವನಿತೆಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದ ಸ್ಪರ್ಧೆಯನ್ನು ಅವರು 1:12.83 ಸೆಕೆಂಡ್‌ಗಳಲ್ಲಿ ಕ್ರಮಿಸಿ ಈ ಸಾಧನೆಗೈದರು.

ಹಿಂದಿನ 1:14.42 ಸೆಕೆಂಡ್‌ಗಳ ದಾಖಲೆ ಚಾಹತ್‌ ಅರೋರಾ ಹೆಸರಲ್ಲಿತ್ತು. ಅಪೇಕ್ಷಾ 2022ರ ಫ್ರಾನ್ಸ್‌ ಈಜು ಸ್ಪರ್ಧೆಯಲ್ಲಿ ಇದೇ ಸ್ಪರ್ಧೆಯನ್ನು 1:14.54 ಸೆಕೆಂಡ್‌ಗಳಲ್ಲಿ ಪೂರೈಸಿದ್ದರು.

ಮುಂದಿನ ಇಂಡಿಯನ್‌ ಯೂತ್‌ ಗೇಮ್ಸ್‌ ಆಯ್ಕೆಯಲ್ಲಿ ಈ ಸಾಧನೆ ಪರಿಗಣನೆಗೆ ಬರಲಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಯೂತ್‌ ಗೇಮ್ಸ್‌ ಸಾಧನೆ ಮಾನದಂಡವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next