Advertisement

ಹಣ ವಿತ್ ಡ್ರಾ ಮಾಡುವುದು ಮಾತ್ರವಲ್ಲ, ಎಟಿಎಂ ನಲ್ಲಿ ಇವುಗಳನ್ನು ಮಾಡಬಹುದು..!

01:08 PM Aug 03, 2021 | |

ದೇಶದ ನಾಗರಿಕ ಬ್ಯಾಂಕ್ ಗಳಲ್ಲೆ ಅತ್ಯಂತ ದೊಡ್ಡ ಬ್ಯಾಂಕ್ ಎಂದು ಕರೆಸಿಕೊಳ್ಳುವ ಎಸ್ ಬಿ ಐ ಸೇರಿದಂತೆ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ನಗದು ಠೇವಣಿ ಸೌಲಭ್ಯ ಈಗ ಲಭ್ಯವಿದೆ.

Advertisement

ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವುದರೊಂದಿಗೆ ಕ್ಯಾಶ್ ಡೆಪಾಸಿಟ್ ಕೂಡ ಮಾಡಬಹುದಾಗಿದ್ದು,  ಎಟಿಎಂ ಮೂಲಕ ಹಣ ಅಥವಾ ಚೆಕ್ ಮೂಲಕ ಹಣ ಜಮಾ ಮಾಡಬಹುದಾಗಿದೆ.

ಇದನ್ನೂ ಓದಿ : ಉತ್ತರಪ್ರದೇಶ,ದೆಹಲಿ,ಕರ್ನಾಟಕ ಸೇರಿ ದೇಶದಲ್ಲಿ 24 ನಕಲಿ ವಿವಿಗಳಿವೆ: ಶಿಕ್ಷಣ ಸಚಿವ ಪ್ರಧಾನ್

ಎಸ್‌ ಬಿ ಐ ಡೆಬಿಟ್ ಕಾರ್ಡ್‌ನಿಂದ ಇನ್ನೊಂದು ಎಸ್‌ ಬಿಐ ಡೆಬಿಟ್ ಕಾರ್ಡ್‌ ಗೆ ದಿನಕ್ಕೆ ರೂ 40,000 ವರೆಗೆ ಎಸ್‌ ಬಿಐ ಎಟಿಎಮ್‌ ಗಳಲ್ಲಿ ಮಾಡಬಹುದಾಗಿದೆ.

ಇನ್ನು,  ವಿದ್ಯುತ್ ಬಿಲ್, ನೀರಿನ ಬಿಲ್ ನಂತಹ ಯುಟಿಲಿಟಿ ಬಿಲ್ ಗಳನ್ನು ಪಾವತಿಸಬಹುದಾಗಿದ್ದು,  ಎಸ್‌ ಬಿಐ ಸೇರಿದಂತೆ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ಈ ಸೌಲಭ್ಯ ಲಭ್ಯವಿದ್ದು, ಕ್ರೆಡಿಟ್ ಕಾರ್ಡ್ ಬಿಲ್ ನನ್ನು ಎಟಿಎಂನಿಂದಲೂ ಪಾವತಿಸಬಹುದಾಗಿದೆ.

Advertisement

ಎಟಿಎಂಗೆ ಮೂಲಕ ನೀವು ಮೊಬೈಲ್ ರೀಚಾರ್ಜ್ ಕೂಡ ಮಾಡಿಕೊಳ್ಳಬಹುದಾಗಿದ್ದು, ಎಸ್‌ ಬಿಐ ಸೇರಿದಂತೆ ಇತರ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ಈ ವಿಶೇಷ ಲಭ್ಯವಿದೆ ಎನ್ನುವುದು ವಿಶೇಷ.

ಸಾಲ ಪಡೆಯುವುದಕ್ಕಾಗಿ ಅರ್ಜಿಯನ್ನು ಕೂಡ ಎಟಿಎಂ ಮೂಲಕ  ಸಲ್ಲಿಸಬಹುದಾಗಿದ್ದು, ಐಸಿಐಸಿಐ ಬ್ಯಾಂಕ್ ಹಾಗೂ ಎಚ್‌ ಡಿಎಫ್‌ ಸಿ ಬ್ಯಾಂಕ್  ಸೇರಿ ಕೆಲವು ಬ್ಯಾಂಕ್ ಗಳ ಎಟಿಎಂಗಳಲ್ಲಿ ಈ ಸೌಲಭ್ಯ ಇದೆ.

ಇದನ್ನೂ ಓದಿ : ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ

Advertisement

Udayavani is now on Telegram. Click here to join our channel and stay updated with the latest news.

Next