ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಸಂಪುಟದ ಎಲ್ಲಾ 24 ಮಂದಿ ಸಚಿವರು ಗುರುವಾರ(ಎ.07) ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಎ.11ರಂದು ಅವರು ಸಂಪುಟ ಪುನಾರಚನೆ ನಡೆಸಲಿದ್ದಾರೆ.ಹೀಗಾಗಿ, ಹಾಲಿ ಸಚಿವರೆಲ್ಲರ ರಾಜೀನಾಮೆ ನೀಡಲಿದ್ದಾರೆ.
ಹಾಲಿ ಇರುವ ಸಚಿವರ ಪೈಕಿ ನಾಲ್ವರು ಸ್ಥಾನ ಉಳಿಸಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.ಜಾತಿ, ಪ್ರಾದೇಶಿಕವಾರು ಪ್ರಾಬಲ್ಯ ಪ್ರಮುಖವಾಗಿ ನೂತನ ಸಚಿವರ ಆಯ್ಕೆಯಲ್ಲಿ ಪ್ರಧಾನವಾಗಲಿದೆ.
ಇದನ್ನೂ ಓದಿ:ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲೇಬೇಕು: ಬಿ.ಕೆ. ಹರಿಪ್ರಸಾದ್ ಒತ್ತಾಯ
2019 ಮೇ 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ “ಅಧಿಕಾರ ಸ್ವೀಕರಿಸಿದ ಎರಡೂವರೆ ವರ್ಷಗಳ ಬಳಿಕ ಸಂಪೂರ್ಣವಾಗಿ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ’ ಎಂದು ಹೇಳಿದ್ದರು. ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ.
2019ರ ಜೂ.8ರಂದು ಹಾಲಿ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಏ.4ರಂದು ಸಿಎಂ ಜಗನ್ಮೋಹನ ರೆಡ್ಡಿ ಹೊಸತಾಗಿ 13 ಜಿಲ್ಲೆಗಳ ರಚನೆಯನ್ನು ಘೋಷಣೆ ಮಾಡಿದ್ದರು.