Advertisement

ಈಗಿನ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ .. ಸಚಿವ ಜೇಟ್ಲಿ ಮಾತಿನ ಮರ್ಮವೇನು?

09:34 AM Feb 27, 2019 | Sharanya Alva |

ನವದೆಹಲಿ: ಭಾರತೀಯ ವಾಯುಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಹುಟ್ಟಡಗಿಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿಯತೊಡಗಿದ್ದು, ಮತ್ತೊಂದೆಡೆ ಈಗಿನ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ನಡೆಯತೊಡಗಿದೆ.

Advertisement

ಅಲ್ ಕಾಯಿದಾ ಭಯೋತ್ಪಾದನೆ ಸಂಘಟನೆಯ ರೂವಾರಿ ಒಸಾಮಾ ಲಾಡೆನ್ ನನ್ನು ಅಮೆರಿಕ ಅಬೋಟಾಬಾದ್ ನೊಳಗೆ ನುಗ್ಗಿ ಹೊಡೆದು ಹಾಕಿಲ್ಲವೇ? ಅದೇ ರೀತಿ ಇಂದು ಏನು ಬೇಕಾದರು ನಡೆಯಬಹುದು. ನಮಗೆ ಯಾಕೆ ಅದು ಸಾಧ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಜೇಟ್ಲಿ ಖಡಕ್ ಉತ್ತರ ನೀಡಿದ್ದಾರೆ.

ಒಂದು ವೇಳೆ ಅಮೆರಿಕದ ನೌಕಾ ಸೀಲ್ ಪಡೆ ಒಸಾಮಾನನ್ನು ಕೊಲ್ಲುತ್ತಾರೆಂದ ಮೇಲೆ ಇಂದು ಎಲ್ಲವೂ ಸಾಧ್ಯ. ಆ ನಿಟ್ಟಿನಲ್ಲಿ ನಾವೂ ಯೋಚಿಸಬೇಕಾಗಿದೆ..ನಮಗೂ ಯಾಕೆ ಅದು ಸಾಧ್ಯವಾಗುವುದಿಲ್ಲ ಎಂದು ಜೇಟ್ಲಿ ಪ್ರಶ್ನಿಸಿದ್ದರು.

ಇಂದು ಬೆಳಗ್ಗೆ ವಾಯುಸೀಮೆ ಗಡಿ ಉಲ್ಲಂಘಿಸಿದ್ದ ಮೂರು ಪಾಕಿಸ್ತಾನದ ವಾಯುಪಡೆ ವಿಮಾನವನ್ನು ಭಾರತದ ವಾಯುಪಡೆ ಹಿಮ್ಮೆಟ್ಟಿಸಿತ್ತು. ಅಲ್ಲದೇ ಪಾಕಿಸ್ತಾನ ವಾಯುಪಡೆಯ ಎಫ್ 16 ವಿಮಾನವನ್ನು ಹೊಡೆದುರುಳಿಸಿತ್ತು. ಪಾಕಿಸ್ತಾನದ ಮಾಧ್ಯಮಗಳು ಮಾತ್ರ ಭಾರತದ ವಿರುದ್ಧ ಸುಳ್ಳು ಸುದ್ದಿಯನ್ನು ಬಿತ್ತರಿಸತೊಡಗಿವೆ.

Advertisement

2011ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಲಾಡೆನ್ ವಿರುದ್ಧ ನಡೆಸಿದ ಕಾರ್ಯಾಚರಣೆ ನೆನಪಿಸಿಕೊಳ್ಳಿ. ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಅಡಗಿಕುಳಿತಿದ್ದ ಉಗ್ರ ಲಾಡೆನ್ ಮೇಲೆ ಅಮೆರಿಕದ ಸೀಲ್ ಪಡೆ ರಹಸ್ಯ ಕಾರ್ಯಾಚರಣೆ ನಡೆಸಿ ಹತ್ಯೆಗೈದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next