Advertisement
ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಇಂಡಿಯನ್ ಜರ್ನಲಿಸ್ಟ್ ಅಸೊಸಿಯೇನ್(ಐಜೆಎ) ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ 9 ವರ್ಷಗಳಿಂದ ಭಾರತದಲ್ಲಿ ನಿರಂತರವಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿಯಾಗತ್ತಿದೆ. ಜನರ ಧ್ವನಿಯನ್ನು ಅಡಗಿಸಲಾಗುತ್ತಿದೆ. ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ತೆರಿಗೆ ಇಲಾಖೆಯ ಶೋಧ ಕಾರ್ಯಾಚರಣೆಯು ಇದಕ್ಕೆ ತಾಜಾ ಉದಾಹರಣೆಯಾಗಿದೆ,’ ಎಂದು ದೂರಿದರು. ಇದೇ ವೇಳೆ ರಾಹುಲ್ ಗಾಂಧಿ ಅವರು ಭಾರತೀಯ ಸಮುದಾಯದೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿದರು.
ಲ್ಯಾಂಬೆತ್‌ನಗರದಲ್ಲಿರುವ ಜಗಜ್ಯೋತಿ ಬಸವಣ್ಣನವರ ಪ್ರತಿಮೆಗೆ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಗೌರವ ಅರ್ಪಿಸಿದ್ದಾರೆ. ಬಳಿಕ ಮಾತನಾಡಿದಅವರು ಪ್ರಜಾಪ್ರಭುತ್ವ ತತ್ವಕ್ಕೆ ಅಡಿಪಾಯ ಹಾಕಿದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ತತ್ವಗಳು ವಿಶ್ವಕ್ಕೇ ಮಾದರಿಯಾಗುವಂಥದ್ದು ಎಂದು ಬಣ್ಣಿಸಿದರು. ಕಾಶ್ಮೀರದಲ್ಲಿ ರಾಹುಲ್ ಗಾಂಧಿ ಅವರನ್ನು ನಿಯೋಜಿಸಲು ಇದು ಸಕಾಲ. ಉಗ್ರರು ಬರುತ್ತಾರೆ ಮತ್ತು ಅವರನ್ನು ನೋಡುತ್ತಾರೆ. ಇವರ ಮಾತುಗಳನ್ನು ಕೇಳಿಸಿಕೊಂಡು, ಉಗ್ರರು ಸುಮ್ಮನೆ ಹೊರಡುತ್ತಾರೆ. ಶಾಂತಿ ಮೂಲ ಭಯೋತ್ಪಾದನೆ ನಿಗ್ರಹಕ್ಕೆ ಸೂಕ್ತ ಪರಿಹಾರವಿದು.
– ವಿವೇಕ್ ಅಗ್ನಿಹೋತ್ರಿ, ನಿರ್ದೇಶಕ