ಹೊಸದಿಲ್ಲಿ : 2018ರ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗಾಗಿ ಇದೇ ಸೆಪ್ಟಂಬರ್ 15ರ ವರೆಗೆ ಯಾರೂ ಯಾವುದೇ ವ್ಯಕ್ತಿಯ ಹೆಸರನ್ನು ಸೂಚಿಸಬಹುದಾಗಿದೆ ಎಂದು ಸರಕಾರ ಹೇಳಿದೆ. ಆ ಮೂಲಕ ಅನಾಮಿಕ ಅರ್ಹ ಸಾಧಕರಿಗೆ ಈ ಪ್ರಶಸ್ತಿ ಜನರೇ ಸೂಚಿಸುವ ಪ್ರಕಾರ ಸಿಗಲಿ ಎಂಬ ಆಶಯ ಸರಕಾರದ್ದಾಗಿದೆ.
ಪದ್ಮ ಪ್ರಶಸ್ತಿಗಳಿಗೆ ಜನರು ಸರಕಾರದ www.padmaawards.gov.in
ವೆಬ್‌ಸೈಟಿನಲ್ಲಿ ಆನ್‌ಲೈನ್ ಮೂಲಕ ಮಾತ್ರವೇ ನಾಮಾಂಕನ ಇಲ್ಲವೇ ಶಿಫಾರಸುಗಳನ್ನು ಮಾಡಬಹುದಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ವೆಬ್ ಸೈಟನ್ನು ವಿನ್ಯಾಸಗೊಳಿಸಿದೆ.
ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾರ್ವಜನಿಕ ಸೇವ, ಪೌರ ಸೇವೆ, ವಾಣಿಜ್ಯ ಮತ್ತು ಕೈಗಾರಿಕೆ – ಮುಂತಾದ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಸಾಧನೆಗೈದಿರುವವರಿಗೆ ಸರಕಾರ ವರ್ಷಂಪ್ರತಿ ಪದ್ಮ ಪ್ರಶಸ್ತಿ ನೀಡಿ ಪುರಸ್ಕರಿಸುವುದು ಸಂಪ್ರದಾಯವಾಗಿದೆ.