Advertisement
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ‘ಬೋಗಸ್ ಲಸಿಕೆ’ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಲಸಿಕೆ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ದೂರಿದರೆ ಒಳ್ಳೆಯದಾಗಲ್ಲ. 80 ಕೋಟಿ ಜನರಿಗೆ ಉಚಿತ ಲಸಿಕೆ ಕೊಡುವುದು ಸುಲಭವಲ್ಲ. ಟೀಕೆ ಮಾಡಬೇಕು ಸರಿ, ಆದರೆ ಇದು ನೈಸರ್ಗಿಕ ವಿಪತ್ತು. ಎಲ್ಲರೂ ಒಟ್ಟಾಗಿ ಎದುರಿಸಬೇಕು ಎಂದರು.
Related Articles
Advertisement
ಕರಾವಳಿಗೆ ಅನುದಾನ ಕಡಿಮೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಕರಾವಳಿಗೆ ಸರಿಯಾಗಿ ಅನುದಾನ ಬರುತ್ತಿದೆ. ಬೃಹತ್ ನೀರಾವರಿ ಯೋಜನೆಗೆ ಇಲ್ಲಿ ಅವಕಾಶವಿಲ್ಲ. ಅದರ ಹಣವನ್ನು ಸಣ್ಣ ನೀರಾವರಿ ಯೋಜನೆಗಳಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಎತ್ತಿನಹೊಳೆ ಯೋಜನೆ ಪೂರ್ಣವಾಗಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ತುಮಕೂರು- ಚಿಕ್ಕಬಳ್ಳಾಪುರ ಜಮೀನು ಒತ್ತುವರಿ ಕೆಲಸವಾಗಿಲ್ಲ. ಕೆಲವು ತೊಡಕುಗಳಿವೆ. ಅದೆಲ್ಲವನ್ನೂ ಸರಿ ಪಡಿಸಲಾಗುತ್ತಿದೆ. ಎರಡು ವರ್ಷದಲ್ಲಿ ಕೆಲಸ ಮುಗಿಯುತ್ತದೆ ಎಂದರು. ಮೇಕೆದಾಟು ವಿಚಾರವಾಗಿ ಯಾವುದೇ ಅಭಿಪ್ರಾಯ ನೀಡಲು ಸಚಿವ ಮಾಧುಸ್ವಾಮಿ ನಿರಾಕರಿಸಿದರು.