Advertisement
ಪಟ್ಟಣದ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, ಎಲ್ಲಾ ವಾರ್ಡ್‌ಗಳಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಬೀದಿ, ಬೀದಿಯಲ್ಲಿ ನಾಯಿಗಳ ಕಾಟ ತಾಳಲಾರದೇ ಹಲವರು ಭಯಭೀತರಾಗಿದ್ದಾರೆ. ಮತ್ತೆ ಕೆಲವರು ರಸ್ತೆಯಲ್ಲಿ ಸೈಕಲ್ ಮತ್ತು ಬೈಕ್, ಇನ್ನಿತರ ವಾಹನಗಳಲ್ಲಿ ಚಲಿಸುವಾಗಲೂ ನಾಯಿಗಳು ಅಡ್ಡ ಬರುವುದೆ ಎಂದು ಭಯದಿಂದಲೇ ಓಡಾಡಿಸುವಂತೆ ಆಗಿದೆ.
Related Articles
Advertisement
ರಸ್ತೆ ಅಪಘಾತ: ಬೀದಿನಾಯಿಗಳ ಹಿಂಡು ರಸ್ತೆಯಲ್ಲೇ ಹೆಚ್ಚಾಗಿ ಇರುವುದರಿಂದ ರಸ್ತೆಯಲ್ಲಿ ಬರುವ ವಾಹನಗಳಿಗೂ ದಾರಿ ಬಿಡುತ್ತಿಲ್ಲ. ಗುಂಪು ಗುಂಪಾಗಿ ನಿಲ್ಲುವುದರಿಂದ ಹಲವು ಬೈಕ್ ಸವಾರರು ನಾಯಿಗಳಿಗೆ ಗುದ್ದಿಸಿ, ರಸ್ತೆಯಲ್ಲಿ ಬಿದ್ದು, ತೀವ್ರಗಾಯಗೊಂಡಿದ್ದು, ಹಲವು ಘಟನೆಗಳು ಜರುಗಿರುವ ನಿರ್ದೇಶನ ಪಟ್ಟಣದಲ್ಲಿ ಇದೆ.
ಭಯಪಡುವ ವಿದ್ಯಾರ್ಥಿಗಳು: ಮುಖ್ಯ ರಸ್ತೆಗಳಲ್ಲಿ ಶಾಲೆ, ಕಾಲೇಜಿಂದ ನಡೆದು ಬರುವ ವಿದ್ಯಾರ್ಥಿಗಳು, ನಾಯಿಗಳ ಹಿಂಡು ಕಂಡು ಎಲ್ಲಿ ಕಚ್ಚಿ ಬಿಡುತ್ತದೆಯೋ ಎಂದು ಭಯಭೀತರಾಗಿ, ನಾಯಿಗಳಿಗೆ ರಸ್ತೆಯನ್ನು ಬಿಟ್ಟು, ರಸ್ತೆ ಬದಿಯಲ್ಲಿ ಅಂಜಿ ಹೋಗುವಂತಹ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಎದುರಾಗಿದೆ.
ಇನ್ನು ಮುಂದೆಯಾದರೂ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು, ವಿವಿಧ ಬಡಾವಣೆಗಳಲ್ಲಿ ಹೆಚ್ಚಿರುವ ನಾಯಿಗಳ ಉಪಟಳವನ್ನು ನಿಯಂತ್ರಣ ಮಾಡಿ ಭಯಭೀತರಾಗಿರುವ ಸಾರ್ವಜನಿಕರಿಗೆ, ಮಕ್ಕಳಿಗೆ ಮತ್ತು ವಾಹನ ಸವಾರರಿಗೆ ಅನುಕೂಲ ಕಲ್ಪಿಸುವರೇ ಎಂದು ಕಾದು ನೋಡಬೇಕಾಗಿದೆ.
ಬೀದಿನಾಯಿಯನ್ನು ಬೇರೆಡೆ ಸಾಗಿಸಲಾಗದ ದುಸ್ಥಿತಿ: ಈ ಹಿಂದೆ ನಗರಸಭೆ ವತಿಯಿಂದ ಬೀದಿನಾಯಿಗಳಿಗೆ ಚುಚ್ಚು ಮದ್ದುಗಳನ್ನು ಹಾಕಿ, ಕೊಲ್ಲಲಾಗುತ್ತಿತ್ತು. ನಂತರ ನಾಯಿಗಳನ್ನು ಹಿಡಿದು ಕಾಡಿಗೆ ಬಿಡಲಾಗುತ್ತಿತ್ತು. ಇದನ್ನು ಕಂಡ ಪ್ರಾಣಿ ದಯಾಳು ಸಂಘದವರು, ನಗರಸಭೆಯ ಅಧಿಕಾರಿಗಳ ಮೇಲೆ ದೂರುಗಳನ್ನು ಸಲ್ಲಿಸಿ, ನಾಯಿಗಳನ್ನು ಕೊಲ್ಲದಿರಲು ಮತ್ತು ಹಿಡಿದು ಬೇರೆಡೆಗೆ ಸಾಗಿಸಬಾರದು ಎಂದು ನ್ಯಾಯಾಲಯಗಳಲ್ಲಿ ಮೊಕದ್ದಮೆ ನೀಡಿದ ಹಿನ್ನಲೆಯಲ್ಲಿ ಬೀದಿನಾಯಿಯನ್ನು ಕೊಲ್ಲಲಾಗದೆ, ಬೇರೆಡೆಗೆ ಸಾಗಿಸಲಾಗದ ದುಸ್ಥಿತಿ ಎದುರಾಗಿದೆ ಎಂದು ನಗರಸಭೆಯ ಪೌರಾಯುಕ್ತ ನಾಗಶೆಟ್ಟಿ ತಿಳಿಸಿದ್ದಾರೆ.
ನಗರಸಭೆಯ ಅಧಿಕಾರಿಗಳು ನಾಯಿಗಳ ಸಂತಾನಹರಣ ಮಾಡಲು ಸೂಚಿಸಿದರೆ, ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪಶು ವೈದ್ಯ ಇಲಾಖೆ ಸಿದ್ಧವಾಗಿದೆ.-ಡಾ.ವೆಂಕಟರಾಮು, ಸಹಾಯಕ ನಿರ್ದೇಶಕ, ಪಶು ವೈದ್ಯ ಇಲಾಖೆ * ಡಿ ನಟರಾಜು