ರಾಜು ಖಾರ್ವಿ ಕೊಡೇರಿ
ಬೆಂಗಳೂರು: ಶುಲ್ಕ ವಿವಾದ, ತರಗತಿಗಳುಸರಿಯಾಗಿ ನಡೆಯದೇ ಇರುವುದು, ಆನ್‌ಲೈನ್‌ತರಗತಿ ಕಿರಿಕಿರಿ ಸೇರಿ ಅನೇಕ ಕಾರಣಕ್ಕೆ ಪ್ರಸಕ್ತಸಾಲಿನಲ್ಲಿ ತಮ್ಮ ಮಕ್ಕಳನ್ನು ಮುಂದಿನ ಶೈಕ್ಷಣಿಕವರ್ಷದಲ್ಲಿ ಯಾವ ತರಗತಿಗೆ ಸೇರಿಸಬೇಕೆಂಬಗೊಂದಲ ಪಾಲಕ, ಪೋಷಕರಲ್ಲಿ ಸೃಷ್ಟಿಯಾಗಿದೆ.2019-20ನೇ ಸಾಲಿನಲ್ಲಿ ರಾಜ್ಯಪಠ್ಯಕ್ರಮದಶಾಲೆಗಳಿಗೆ ಒಂದನೇ ತರಗತಿಗೆ ಸೇರಿದ ಮಕ್ಕಳುಮುಂದಿನ ಶೈಕ್ಷಣಿಕ ವರ್ಷದಲ್ಲಿ 3ನೇ ತರಗತಿ ಪ್ರವೇಶಿಸಲಿದ್ದಾರೆ.
ಆದರೆ, ಈ ಮಕ್ಕಳಿಗೆಎರಡನೇ ತರಗತಿಯಲ್ಲಿ ಯಾವೆಲ್ಲ ಪಾಠ ಇತ್ತುಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಐದನೇ ತರಗತಿವರೆಗಿನ ಮಕ್ಕಳಲ್ಲೂ ಇದೇ ಸಮಸ್ಯೆ ಇದೆ.ಕಾರಣ, 2020-21ನೇ ಸಾಲಿನಲ್ಲಿ 1ರಿಂದ 5ನೇತರಗತಿ ಮಕ್ಕಳಿಗೆ ತರಗತಿಗಳೇ ನಡೆದಿಲ್ಲ. ಕೆಲಸಮಯ ವಿದ್ಯಾಗಮ ನಡೆದಿದ್ದು, ನಂತರರೆಡಿಯೋ ಮೂಲಕ ನಲಿಯುತ್ತ ಕಲಿಯೋಣಎಂಬ ಕಾರ್ಯಕ್ರಮ ಹೊರತುಪಡಿಸಿ ಬೇರೆಯಾವುದೇ ತರಗತಿಗಳು ಇರಲಿಲ್ಲ.ಖಾಸಗಿ ಶಾಲೆಗಳು ಆನ್‌ಲೈನ್ ತರಗತಿ,ಪೂರ್ವ ಮುದ್ರಿತ ವಿಡಿಯೊ ತರಗತಿ ನಡೆಸಿವೆ.
ಸರ್ಕಾರಿ ಶಾಲೆಯಲ್ಲಿ ಸ್ಥಳೀಯವಾಗಿ ಕೆಲವುಶಿಕ್ಷಕರು ಪಾಲಕ, ಪೋಷಕರ ಮೊಬೈಲ್‌ಗೆ ವ್ಯಾಟ್ಸ್‌ಆ್ಯಪ್ ಮೂಲಕ ಕಲಿಕಾ ಸಾಮಗ್ರಿಗಳನ್ನುಕಳುಹಿಸುತ್ತಿದ್ದರಾದರೂ ಪರಿಣಾಮಕಾರಿಯಾದಬೋಧನೆ ಅಥವಾ ಕಲಿಕೆ ನಡೆದಿಲ್ಲ. ಈಗಮುಂದಿನ ಶೈಕ್ಷಣಿಕ ವರ್ಷವೂ ಕೊರೊನಾಕ್ಕೆಬಲಿಯಾದರೆ ಮಕ್ಕಳ ಶೈಕ್ಷಣಿಕ ಭವಿಷ್ಯ ಇನ್ನಷ್ಟುಚಿಂತಾಜನಕವಾಗಲಿದೆ ಎಂದು ಪಾಲಕ,ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.ಪ್ರತಿ ವರ್ಷ ಮಕ್ಕಳನ್ನು ಶಾಲೆಗೆ ದಾಖಲಾತಿಮಾಡುವುದು ಕಡ್ಡಾಯವಾಗಿದೆ.
ಕೊರೊನಾಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಹಲವು ಬಾರಿ ದಾಖಲಾತಿ ಪ್ರಕ್ರಿಯೆಗೆ ಅವಕಾಶನೀಡಿತ್ತು. ಆದರೆ, ನಾನಾ ಕಾರಣಕ್ಕಾಗಿ ಖಾಸಗಿಶಾಲೆಗಳಿಗೆ ಹಲವು ಪಾಲಕ, ಪೋಷಕರು ತಮ್ಮಮಕ್ಕಳನ್ನು ಸೇರಿಸಿಲ್ಲ. ಜುಲೈ 15ರಿಂದ ಮುಂದಿನಶೈಕ್ಷಣಿಕ ವರ್ಷ ಆರಂಭವಾಗಿದೆ. ಮುಂದಿನತಿಂಗಳಿಂದ ಪ್ರವೇಶ ಪ್ರಕ್ರಿಯೆಗಳುಆರಂಭವಾಗಲಿದೆ, (ಕೆಲವು ಖಾಸಗಿ ಶಾಲೆಗಳುಈಗಾಗಲೇ ಆರಂಭಿಸಿವೆ) ಆದರೆ, ಕಳೆದಸಾಲಿನಲ್ಲಿ ದಾಖಲಾತಿ ಮಾಡದೇ ಇರುವಮಕ್ಕಳನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಈ ಹಿಂದೆಕಲಿತ ತರಗತಿಗೆ ಸೇರಿಸಬೇಕೇ ಅಥವಾ ಮುಂದಿನತರಗತಿಗೆ ಸೇರಿಸಬೇಕೇ ಎಂಬ ಗೊಂದಲದಲ್ಲಿಪಾಲಕ, ಪೋಷಕರಿದ್ದಾರೆ. ಆದರೆ, ಖಾಸಗಿಶಾಲೆಗಳು ದಾಖಲಾತಿ ಮಾಡದ ಮಕ್ಕಳಮೌಲ್ಯಮಾಪನ ಮಾಡುವುದು ಕಷ್ಟ. ಹೀಗಾಗಿಪಾಲಕರು ಪುನಃ ಅದೇ ಶಾಲೆಗೆ ಮಕ್ಕಳನ್ನುಸೇರಿಸಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆಮೂಲಗಳು ತಿಳಿಸಿವೆ.
ಕೊರೊನಾ ಆತಂಕ: ವಾರ್ಷಿಕ ಮೌಲ್ಯಾಂಕನಪರೀಕ್ಷೆ ಇಲ್ಲದೇ ಎರಡು ಶೈಕ Òಣಿಕ ವರ್ಷಕಳೆದಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೂಕೊರೊನಾ ಎರಡನೇ ಅಲೆಯ ಭೀತಿಕಾಡಲಾರಂಭಿಸಿದೆ. ಪ್ರಸಕ್ತ ಶೈಕ Òಣಿಕ ವರ್ಷಅಂತಿಮ ಘಟ್ಟ ತಲುಪಿದ್ದು, 1ರಿಂದ 9ನೇತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಮೌಲ್ಯಾಂಕನ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡುವ ಜತೆಗೆಬೇಸಿಗೆ ರಜೆ ಘೋಷಿಸಲಾಗಿದೆ. ಮೇ ಮತ್ತುಜೂನ್ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿವಾರ್ಷಿಕ ಪರೀಕ್ಷೆ ಗಳು ನಡೆಸುವ ಬಗ್ಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜುಲೈನಲ್ಲಿಮುಂದಿನ ಶೈಕ Òಣಿಕ ವರ್ಷದ ಆರಂಭಕ್ಕೆಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ರೀತಿಯಸಿದ್ಧತೆ ಮಾಡಿಕೊಂಡಿದೆ. ಆದರೆ, ಕೊರೊ ನಾಎರಡನೇ ಅಲೆ ಉಲ್ಬಣಗೊಳ್ಳುತ್ತಿ ರುವುದರಿಂದಮುಂದಿನ ಶೈಕ್ಷಣಿಕ ವರ್ಷದ ಮೇಲೂ ಇದರದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದುಹೇಳಲಾಗುತ್ತಿದೆ.