Advertisement

ಲಂಕಾ ಅಭಿಮಾನಿಗಳ ಜತೆ ಕೊಹ್ಲಿ-ಅನುಷ್ಕಾ

10:22 AM Aug 17, 2017 | Team Udayavani |

ಕೊಲಂಬೊ: ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಜತೆ ವಿರಾಟ್‌ ಕೊಹ್ಲಿ ಗೆಳೆತನ ಈಗ ಜಗತ್ತಿಗೇ ಗೊತ್ತಿರುವ ಸಂಗತಿ. ವಿಶೇಷವೆಂದರೆ ಪ್ರತಿ ಕ್ರಿಕೆಟ್‌ ಪ್ರವಾಸದ ನಡುವೆ ಸಮಯ ಸಿಕ್ಕಾಗೆಲ್ಲ ಈ ಇಬ್ಬರೂ ಜತೆಯಾಗಿರುವುದನ್ನು ನಾವು ನೋಡಬಹುದು. ಭಾರತ ಕ್ರಿಕೆಟ್‌ ತಂಡದ ಶ್ರೀಲಂಕಾ ಪ್ರವಾಸವೂ ಇದಕ್ಕೆ ಹೊರತಾಗಿಲ್ಲ. 

Advertisement

ಈಗಷ್ಟೇ ಟೆಸ್ಟ್‌ ಮುಗಿದು ಸೀಮಿತ ಓವರ್‌ಗಳ ಸರಣಿಗೆ ಭಾರತ ಸಿದ್ಧವಾಗಿದೆ. ಈ ಅಂತರದಲ್ಲಿ ಅನುಷ್ಕಾ ಲಂಕಾಕ್ಕೆ ಹಾರಿ ಕೊಹ್ಲಿಯನ್ನು ಸೇರಿಕೊಂಡಿದ್ದಾರೆ. ಈ ಬಾರಿಯ ವಿಶೇಷವೆಂದರೆ ಕೊಹ್ಲಿ ಮತ್ತು ಅನುಷ್ಕಾ ಅವರು ಕೋಚ್‌ ರವಿಶಾಸ್ತ್ರಿ ಮತ್ತು ಲಂಕಾದ ಅಭಿಮಾನಿಗಳ ಜತೆಗೆ ಚಿತ್ರ ತೆಗೆಸಿಕೊಂಡಿದ್ದು ಆಗಿದೆ. 

ತಿಂಗಳ ಹಿಂದೆ ಇಂಗ್ಲೆಂಡ್‌ನ‌ಲ್ಲಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಮುಗಿದ ಮೇಲೆ ಕೊಹ್ಲಿ-ಅನುಷ್ಕಾ ಜೋಡಿ ನ್ಯೂಯಾರ್ಕ್‌ನಲ್ಲಿ ಸುತ್ತಾಡಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು!

Advertisement

Udayavani is now on Telegram. Click here to join our channel and stay updated with the latest news.

Next