Advertisement
ರಾಜ್ಯದಲ್ಲಿ 2023ರ ಡಿಸೆಂಬರ್ ಕೊನೆಯ ವಾರದಲ್ಲಿ ಮನೆ ಬಾಗಿಲಿಗೆ ಶ್ರೀ ರಾಮ ಅಯೋಧ್ಯೆಯ ಅನುಗ್ರಹ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಪ್ರಾರಂಭವಾಗಿದ್ದು, ಸೋಮವಾರದ (21ರ) ಸಂಜೆಯವರೆಗೂ ನಿರಂತರವಾಗಿ ಸಾಧ್ಯವಾದಷ್ಟು ಮನೆಗಳಿಗೆ ಮಂತ್ರಾಕ್ಷತೆ ತಲುಪಿಸುವ ಕೆಲಸಗಳನ್ನು ರಾಮಭಕ್ತರು ಮಾಡಿದ್ದಾರೆಂದು ವಿಶ್ವ ಹಿಂದೂ ಪರಿಷತ್ ಮೂಲಗಳು ತಿಳಿಸಿವೆ.
Related Articles
Advertisement
ಉತ್ತರ ಕರ್ನಾಟಕದಲ್ಲಿ 35 ಲಕ್ಷ ಮನೆಗೆ ಅಕ್ಷತೆ
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಸುಮಾರು 35 ಲಕ್ಷ ಮನೆಗಳಿಗೆ ಅಯೋಧ್ಯೆ ಮಂತ್ರಾಕ್ಷತೆ, ಶ್ರೀರಾಮನ ಫೋಟೋ, ಆಹ್ವಾನ ಪತ್ರ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಧಾರವಾಡ ವಿಭಾಗ ಸಂಚಾಲಕ, ಮನೆ-ಮನೆಗೆ ಮಂತ್ರಾಕ್ಷತೆ ಅಭಿಯಾನದ ಧಾರವಾಡ ವಿಭಾಗ ಸಂಯೋಜಕ ವಿನಾಯಕ ತಲಗೇರಿ ತಿಳಿಸಿದ್ದಾರೆ. ಅನೇಕ ಕಡೆ ಮುಸ್ಲಿಂ-ಕ್ರೈಸ್ತರೂ ಸಹ ಮಂತ್ರಾಕ್ಷತೆಯನ್ನು ಭಕ್ತಿಯಿಂದ ಸ್ವೀಕರಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಉತ್ತರ ಕರ್ನಾಟಕದ 100 ಮಠಾಧೀಶರಿಗೆ ಅಯೋಧ್ಯೆಯಿಂದಲೇ ಆಹ್ವಾನ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಮಂದಿರ ತೀರ್ಪು ನೀಡಿದ್ದ ನ್ಯಾಯಮೂರ್ತಿ ಭೂಷಣ್ ಮಾತ್ರವೇ ಉದ್ಘಾಟನೆಗೆ ಹಾಜರಿ
ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಪಂಚಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳ ಪೈಕಿ ನಿವೃತ್ತ ನ್ಯಾಯಮೂರ್ತಿ ಅಶೋಕ್ ಭೂಷಣ್ ಮಾತ್ರವೇ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ. ಪೀಠದಲ್ಲಿದ್ದ ಆಗಿನ ಸಿಜೆಐ ರಂಜನ್ ಗೊಗೋಯ್, ನಿವೃತ್ತ ಸಿಜೆಐ ಎಸ್.ಎ.ಬೋಬ್ಡೆ ,ಹಾಲಿ ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನಿವೃತ್ತ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್‌ಗೆ ಆಹ್ವಾನವಿದ್ದರೂ ವಿವಿಧ ಕಾರಣಗಳಿಂದಾಗಿ ಹಾಜರಾಗುತ್ತಿಲ್ಲ.
ಪ್ರತಿ 2 ಗಂಟೆಗೆ ದುಪ್ಪಟ್ಟಾಗುತ್ತಿದೆ ಮಂದಿರ ಅನುದಾನ
ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ದೇಶದ ಮೂಲೆ-ಮೂಲೆಗಳಿಂದ ರಾಮಭಕ್ತರು ದೇಗುಲಕ್ಕೆ ದೇಣಿಗೆ ನೀಡುತ್ತಿದ್ದಾರೆ. ಭಾನುವಾರದ ವೇಳೆಗೆ ಭಕ್ತರು ನೀಡುತ್ತಿರುವ ದೇಣಿಗೆ ಪ್ರತಿ 2 ಗಂಟೆ ಗೊಮ್ಮೆ ದುಪ್ಪಟ್ಟಾಗುತ್ತಿದೆ ಎನ್ನಲಾಗಿದೆ.
ಮಲ್ಟಿಪ್ಲೆಕ್ಸ್, ಮಳಿಗೆಗಳಲ್ಲಿ ನೇರಪ್ರಸಾರಕ್ಕೆ ಕಾರ್ಪೋರೆಟ್ ಸಂಸ್ಥೆಗಳ ಸಹಕಾರ
ಅಯೋಧ್ಯೆಯ ಸಂಭ್ರಮವನ್ನು ದುಪ್ಪಟ್ಟಾಗಿಸಲು ನಡೆಸುತ್ತಿರುವ ಎಲ್ಲ ಪ್ರಯತ್ನಗಳಿಗೂ ಅಲ್ಲಿನ ಸ್ಥಳೀಯ ಕಾರ್ಪೋರೆಟ್ ಸಂಸ್ಥೆಗಳು ಕೈ ಜೋಡಿಸಿ,ದೊಡ್ಡ ದೊಡ್ಡ ಮಳಿಗೆಗಳಲ್ಲಿ, ರಸ್ತೆಗಳಲ್ಲಿ ಎಲ್‌ಇಡಿಗಳನ್ನು ಅಳವಡಿಸುವಂಥ ವಿವಿಧ ರೀತಿಯ ಕೆಲಸಗಳಲ್ಲಿ ಕೊಡುಗೆ ನೀಡುತ್ತಿವೆ. ಕೆಲವು ಸಂಸ್ಥೆಗಳು, ಮಳಿಗೆಗೆಳು ಸ್ವಯಂಪ್ರೇರಣೆಯಿಂದ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಿ ಎಲ್‌ಇಡಿ ಪರದೆ ಗಳನ್ನೂ ಅಳವಡಿಸುವ ಮೂಲಕ ಅಯೋಧ್ಯೆ ಸಂಭ್ರಮ ಕಣ್ತುಂಬಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಟ್ಟಿವೆ. ಪಿವಿಆರ್ ಐನಾಕ್ಸ್ ಪ್ರಾಣ ಪ್ರತಿಷ್ಠೆ ಸಮಾರಂಭವನ್ನು ನೇರ ಪ್ರಸಾರ ಮಾಡಲಿದೆ.
ಅಯೋಧ್ಯೆಯಲ್ಲಿ ಹನುಮ ಮಂದಿರ ಶುಚಿಗೊಳಿಸಿದ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ಅಯೋಧ್ಯೆ ತಲುಪಿದ್ದು, ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಮುಗಿಯೋವರೆಗೂ ಅಯೋಧ್ಯೆಯಲ್ಲಿರೋದಾಗಿ ತಿಳಿಸಿದ್ದಾರೆ. “ರಾಮಮಂದಿರ ಕೇವಲ ಪ್ರತಿಮೆಯಲ್ಲ. ಈ ಘಳಿಗೆ ಭಾರತದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ’ ಎಂದಿರುವ ಕಂಗನಾ, “ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ಸಾಧ್ಯವಾಗುವುದು ತಮ್ಮ ಹಿಂದಿನ ಜೀವನದ ಕರ್ಮದ ಫಲವಾಗಿ. ಈ ಮಹತ್ವದ ದಿನವನ್ನು ತರ ಲು ದೇಶವು ಒಗ್ಗೂಡಿದ್ದು, ಇಡೀ ರಾಷ್ಟ್ರಕ್ಕಿ ದು ಅದೃಷ್ಟ. ಅಯೋಧ್ಯೆಯ ದರ್ಶನ ಪಡೆಯಲು ಹಲವು ಜನ್ಮಗಳ ಪುಣ್ಯ ಮಾಡಿರಬೇಕು’ ಎಂದು ಹೇಳಿದ್ದಾರೆ. ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಗುರು ರಾಮಭದ್ರಾಚಾರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಕಂಗನಾ, ಹನುಮಾನ್ ಮಂದಿರವನ್ನು ಶುಚಿಗೊಳಿಸುವ ಕಾರ್ಯದಲ್ಲೂ ಭಾಗಿಯಾಗಿದ್ದಾರೆ.