ಬಸವಕಲ್ಯಾಣ: ಬಸವಾದಿ ಶರಣರ ಕ್ರಾಂತಿಭೂಮಿ ಬಸವಕಲ್ಯಾಣದಲ್ಲಿ ಕಳೆದ 40 ವರ್ಷಗಳಿಂದಪ್ರತಿವರ್ಷ ಶರಣ ಕಮ್ಮಟ ಆಚರಿಸುತ್ತ ಬರಲಾಗುತ್ತಿದೆ. ಆದರೆ ಈ ವರ್ಷ ಕೋವಿಡ್ -19 ಇರುವುದರಿಂದ 41ನೇ ಶರಣ ಕಮಟ್ಟ ಮತ್ತು ಅನುಭವ ಮಂಟಪ ಉತ್ಸವ ನ.28 ಮತ್ತು 29ರಂದು ಸರಳವಾಗಿ ಆಚರಿಸಲಾಗುತ್ತದೆ ಎಂದು ಅನುಭವ ಮಂಟಪ ಅಧ್ಯಕ್ಷರಾದ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಅನುಭವ ಮಂಟಪದಲ್ಲಿ ಉತ್ಸವ ಅಂಗವಾಗಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಬಸವ ಭಕ್ತರು ಅನುಭವ ಮಂಟಪ ಬಸವಕಲ್ಯಾಣ ಫೆಸ್ ಬುಕ್ ಮತ್ತು ಯು ಟೂಬ್ ಚಾನಲನಲ್ಲಿ ಶರಣ ಕಮ್ಮಟ ಉತ್ಸವ ಕಾರ್ಯಕ್ರಮ ವೀಕ್ಷಿಸಬಹುದು ಎಂದರು.
ಬೀದರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಧನ್ನೂರ ಹಾಗೂ ಹುಮನಾಬಾದ್ ಹಿರಿಯ ಸಾಹಿತಿ ಡಾ| ಸೋಮನಾಥ ಯಾಳವಾರ ಮಾತನಾಡಿ, ಉತ್ಸವದ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು. ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.
ಶಿವಾನಂದ ಸ್ವಾಮಿಗಳು, ಮಹಾಲಿಂಗಸ್ವಾಮಿಗಳು, ನಿರಂಜನ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಸಿದ್ಧೇಶ್ವರಾನಂದ ಸ್ವಾಮಿಗಳು, ಬಸವಕಲ್ಯಾಣ ಅಭಿವೃದ್ಧಿ ಪ್ರಾ ಧಿಕಾರ ವ್ಯವಸ್ಥಾಪಕ ಮೀನಾಕುಮಾರಿ ಬೋರಾಳಕರ್, ಬಸವೇಶ್ವರದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನಿಲಕುಮಾರರಗಟೆ, ವಿಶ್ವಬಸವ ಧರ್ಮ ಟ್ರಸ್ಟ್‌ನ ಕಾರ್ಯದರ್ಶಿ ಡಾ| ಎಸ್.ಬಿ. ದುರ್ಗೆ ಸೇರಿದಂತೆ ಮತ್ತಿತರರು ಇದ್ದರು.
ಹಾಸ್ಯ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿ, ವಂದಿಸಿದರು.