Advertisement
ಕುಷನ್ ಆಸನಗಳು, ಎಲ್‌ಇಡಿ ಲೈಟ್‌ಗಳು, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಸೇರಿ ಇನ್ನೂ ಅನೇಕ ಸುಸಜ್ಜಿತ ಸೌಲಭ್ಯಗಳನ್ನು ಈ ರೈಲು ಒಳಗೊಂಡಿದೆ. ಸೀಟು ಕಾಯ್ದಿರಿಸುವ ಸೌಲಭ್ಯವಿಲ್ಲದ, ವರ್ಣರಂಜಿತ ಬೋಗಿಗಳನ್ನೊಳಗೊಂಡ ಈ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲು ಮೊದಲ ಹಂತದಲ್ಲಿ ಮುಂಬೈ – ಜಾರ್ಖಂಡ್‌ನ ಟಾಟಾ ನಗರ ಹಾಗೂ ಎರಡನೇ ಹಂತದಲ್ಲಿ ಎರ್ನಾಕುಲಂ-ಔರಾದ್ ನಡುವೆ ಸಂಚಾರ ನಡೆಸಲಿದೆ. ನಾಲ್ಕು ಹೊಸ ಪ್ರಯಾಣಿಕ ರೈಲುಗಳನ್ನು ಪರಿಚಯಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಅಂತ್ಯೋದಯ ರೈಲನ್ನು ಪರಿಚಯಿಸಲಾಗಿದೆ ಎಂದು ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ಶುದ್ಧ ಕುಡಿಯುವ ನೀರು, ಬೆಂಕಿ ನಂದಿಸುವ ಉಪಕರಣಗಳು, ಜೈವಿಕ ಶೌಚಾಲಯಗಳು, ಲೈಟ್‌ಗಳನ್ನೊಳಗೊಂಡ ನಾಮಫಲಕಗಳು, ಒಂದು ಬೋಗಿಯಿಂದ ಮತ್ತೂಂದು ಬೋಗಿಗೆ ಹೋಗುವ ವ್ಯವಸ್ಥೆ, ಸಾಮಗ್ರಿಗಳನ್ನು ಇಡಲು ಪ್ರತ್ಯೇಕ ರ್ಯಾಕ್‌ಗಳು, ಕಸದ ಬುಟ್ಟಿಗಳು ಇದರಲ್ಲಿವೆ. ದರ ಎಷ್ಟು ?
ಐಷಾರಾಮಿ ರೈಲುಗಳಿಗಿಂತ ಕಡಿಮೆ. ಸಾಮಾನ್ಯ ರೈಲುಗಳಿಗಿಂತ ಶೇ.10 ರಿಂದ 15ರಷ್ಟು ಹೆಚ್ಚಾಗಿರಲಿದೆ.