ಬೆಂಗಳೂರು: ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದ್ದು ನಿರಂತರವಾಗಿ ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂದು ವರ್ಷಗಳ ಅವಧಿಯಲ್ಲಿ 845 ರೂ.ಏರಿಕೆ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮತಿ ಇರಾನಿ, ಶಶಿಕಲಾ ಜೊಲ್ಲೆ, ತಾರಾ, ಮಾಳವಿಕ ಅವರು ಯುಪಿಎ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ 10 ರೂ. ಹೆಚ್ಚಾದರೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರು. ಈಗ ಅವರೆಲ್ಲಾ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸರ್ಕಾರ ಸತ್ತು ಮಲಗಿದೆ. ಬಿಜೆಪಿಯ ಬೆಲೆ ಏರಿಕೆ ವಿರುದ್ಧ ನಾವು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಿದರೂ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಇದೆ. ಇದನ್ನು ನಾವು ಧಿಕ್ಕರಿಸಿ, ಸರ್ಕಾರದ ಬಳಿ ನ್ಯಾವನ್ನು ಆಗ್ರಹಿಸುತ್ತೇವೆ. ಸರ್ಕಾರ ಉಚಿತ ಸೌದೆ ಯೋಜನೆಯನ್ನು ಘೋಷಿಸಲಿ ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಚಿತ್ರಾ ರಾಮಕೃಷ್ಣ ಕೇಸ್: ಸಿಬಿಐಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್
ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಅಡುಗೆ ಅನಿಲ ಇಂದು 1112 ರೂ. ಆಗಿದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ತರುತ್ತೇವೆ ಎಂದು ಹೇಳಿದರು. ಈ ಯೋಜನೆ ಏನಾಯಿತು ಎಂದು ಈಗ ಹುಡುಕಬೇಕಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಪ್ರತಿ ಗ್ರಾಹಕರಿಂದ 200 ರೂ. ಸಂಗ್ರಹಿಸಿದರು. ಈ ಹಣ ಎಲ್ಲಿ ಹೊಯಿತು ಎಂದರು.
ರಾಜ್ಯ ಸಚಿವ ಸಂಪುಟದಲ್ಲಿ ಕೇವಲ ಓರ್ವ ಮಹಿಳೆ ಇದ್ದು, ಅವರು ಕೂಡ ಸರ್ಕಾರದ ಮುಂದೆ ಮಹಿಳೆಯರ ಧ್ವನಿ ಎತ್ತುತ್ತಿಲ್ಲ ಎಂದು ಹೇಳಿದರು.