Advertisement

ಭಯೋತ್ಪಾದನಾ ವಿರೋಧಿ ದಿನಾಚರಣೆ

08:04 AM May 22, 2019 | Team Udayavani |

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಜ್ಞಾನ ಸಂಗಮದಲ್ಲಿ ಭಯೋತ್ಪಾದನೆ ದುಷ್ಪರಿಣಾಮಗಳ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಯೋತ್ಪಾದನಾ ವಿರೋಧಿ ದಿನ ಮಂಗಳವಾರ ಆಚರಿಸಲಾಯಿತು.

Advertisement

ವಿಶ್ವವಿದ್ಯಾಲಯ ಕುಲಪತಿ ಡಾ| ಕರಿಸಿದ್ದಪ್ಪ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಜನಸಾಮಾನ್ಯರನ್ನು ವಿಶೇಷವಾಗಿ ಯುವಕರ ಮನಸ್ಥಿತಿ ತಪ್ಪು ಮಾರ್ಗದರ್ಶನ ಮಾಡುವ ಮೂಲಕ ಭಯೋತ್ಪಾದನೆ ಹುಟ್ಟು ಹಾಕಲಾಗುತ್ತಿದೆ. ಇದನ್ನು ಹೋಗಲಾಡಿಸಲು ನಾಗರಿಕರಲ್ಲಿ ಸಮಗ್ರತೆ ಹಾಗೂ ಸಹೋದರತ್ವ ಮನೋಭಾವನೆ ಬೆಳೆಸಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ವಿಟಿಯು ಪರೀಕ್ಷಾ ವಿಭಾಗದ ಕುಲಸಚಿವ ಹಾಗೂ ಪ್ರಭಾರಿ ಕುಲಸಚಿವ ಡಾ| ಸತೀಶ ಅಣ್ಣಿಗೇರಿ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಸ್ಥಾನಿಕ ಅಭಿಯಂತ ಹೇಮಂತಕುಮಾರ, ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರು, ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next