Advertisement

ದೇಶದ ವಿರೋಧಿ ಚಟುವಿಟಿಕೆ ಆರೋಪ: ಆಂಧ್ರಪ್ರದೇಶದ ಹಲವೆಡೆ ಎನ್ ಐಎ ದಾಳಿ

01:47 PM Sep 18, 2022 | Team Udayavani |

ನೆಲ್ಲೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕೆಲವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.

Advertisement

ಆಂಧ್ರ ಪ್ರದೇಶದ ಕರ್ನೂಲ್, ನೆಲ್ಲೂರ್, ನಂದ್ಯಾಲ್ ಮತ್ತು ತೆಲಂಗಾಣದ ನಿಜಾಮಾಬಾದ್ ನಲ್ಲಿ ಎನ್ಐಎ ದಾಳಿ ಮಾಡಿದೆ.

ಕಳೆದ ತಿಂಗಳು, ಎನ್‌ ಐಎ ಹೈದರಾಬಾದ್‌ನಲ್ಲಿ 27 ಜನರ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಲು ಸಂಚು ರೂಪಿಸಿದ್ದಾರೆಂದು ಕೇಸು ದಾಖಲಿಸಿತ್ತು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಭೇಟಿಯಾದ ಪಿಣರಾಯಿ ವಿಜಯನ್: ಗಡಿ ರಸ್ತೆಗಳ ಕುರಿತು ಚರ್ಚೆ

ನಿಜಾಮಾಬಾದ್‌ ನಲ್ಲಿರುವ ಅಬ್ದುಲ್ ಖಾದರ್ ಅವರ ಮನೆಯನ್ನು ಪಿಎಫ್‌ಐ ಸದಸ್ಯರು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ ಎಂದು ಇತರ 26 ಜನರ ವಿರುದ್ಧವೂ ಎಫ್‌ ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮೂಲಗಳ ಪ್ರಕಾರ ಅಬ್ದುಲ್ ಖಾದರ್ ಅವರು ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಹೆಚ್ಚುವರಿ ಭಾಗವನ್ನು ಪಿಎಫ್‌ಐ ಸದಸ್ಯರು ತಮ್ಮ ಸಭೆಗಳು ಮತ್ತು ತರಬೇತಿಗಳಿಗೆ ಬಳಸಲು ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ.

ಪಿಎಫ್‌ಐ ಸದಸ್ಯರು ಕರಾಟೆ ತರಗತಿಗಳ ಹೆಸರಿನಲ್ಲಿ ಯುವಕರಿಗೆ ತರಬೇತಿ ಮತ್ತು ದೈಹಿಕ ವ್ಯಾಯಾಮಗಳನ್ನು ಪ್ರಾರಂಭಿಸಿದ್ದರು. ಅವರ ದ್ವೇಷಪೂರಿತ ಭಾಷಣಗಳ ಮೂಲಕ ನಿರ್ದಿಷ್ಟ ಸಮುದಾಯದ ವಿರುದ್ಧ ಯುವಕರನ್ನು ಪ್ರಚೋದಿಸುತ್ತಿದ್ದರು ಎಂದು ಎಫ್‌ಐಆರ್ ನಲ್ಲಿ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next