Advertisement

ಸಿಕ್ಖ್ ವಿರೋಧಿ ದೊಂಬಿ: ಗಾಂಧಿ ಕುಟುಂಬದ ಪಾತ್ರ ಇಲ್ಲ: ಪಂಜಾಬ್‌ CM

03:40 PM Dec 17, 2018 | udayavani editorial |

ಹೊಸದಿಲ್ಲಿ : 1984ರ ಸಿಕ್ಖ್  ವಿರೋಧಿ ದೊಂಬಿ ಪ್ರಕರಣದಲ್ಲಿ ಆರೋಪಿ ಕಾಂಗ್ರೆಸ್‌ ಪಕ್ಷದ ನಾಯಕ ಸಜ್ಜನ್‌ ಕುಮಾರ್‌ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ದಿಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಸ್ವಾಗತಿಸಿದ್ದಾರೆ.

Advertisement

ಹಾಗಿದ್ದರೂ 1984ರ ಸಿಕ್ಖ್ ವಿರೋಧಿ ದೊಂಬಿಯಲ್ಲಿ ಕಾಂಗ್ರೆಸ್‌ ಪಕ್ಷದ್ದಾಗಲೀ, ಗಾಂಧಿ ಕುಟುಂಬದವರದ್ದಾಗಲೀ ಯಾವುದೇ ಪಾತ್ರ ಇರಲಿಲ್ಲ ಎಂದು ಹೇಳಿದರು. 

ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಘೋ ಕೋಮು ಹಿಂಸೆಯ ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಯಾಗುವ ಮೂಲಕ ಪ್ರಕರಣದ ಸಂತ್ರಸ್ತರಿಗೆ ಕೊನೆಗೂ ನ್ಯಾಯ ದೊರಕಿದಂತಾಗಿದೆ ಎಂದು ಅಮರೀಂದರ್‌ ಸಿಂಗ್‌ ಹೇಳಿದ್ದಾರೆ.

ಬಿಜೆಪಿಯ ಚಿತಾವಣೆಯಲ್ಲಿ ಬಾದಲ್‌ ಸಿಕ್ಖ್ ವಿರೋಧಿ ದೊಂಬಿ ಪ್ರಕರಣದಲ್ಲಿ ಗಾಂಧಿ ಕುಟುಂಬದ ಹೆಸರನ್ನು ಈಗಲೂ ಎಳೆಯುತ್ತಿರುವುದನ್ನು ಅಮರಿಂದರ್‌ ಸಿಂಗ್‌ ಖಂಡಿಸಿದರು. 

ಇದೇ ವೇಳೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ಸುನೀಲ್‌ ಕುಮಾರ್‌ ಜಾಖಡ್‌ ಅವರು ದಿಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಸ್ವಾಗತಿಸಿದ್ದಾರೆ. ದೊಂಬಿ ಸಂತ್ರಸ್ತರಿಗೆ ಕೊನೆಗೂ ನ್ಯಾಯ ಸಿಕ್ಕಿತು ಎಂದವರು ಹೇಳಿದ್ದಾರೆ. 

Advertisement

ಆದರೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ), 1984ರ ಸಿಕ್ಖ್ ದೊಂಬಿ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧ ದಾಳಿ ಮಾಡುವುದನು ಮುಂದುವರಿಸಿದೆ. ಪಕ್ಷದ ಹಿರಿಯ ನಾಯಕಿ ಮತ್ತು ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಅವರು, ಈ ದೊಂಬಿ ಪ್ರಕರಣದ ತನಿಖೆಯು ಅಂತಿಮವಾಗಿ ಗಾಂಧಿ ಕುಟುಂಬದೆಡೆಗೆಯೇ ಸಾಗುತ್ತದೆ ಎಂದು ಹೆಳಿದ್ದಾರೆ.

ಇವತ್ತು ಸಜ್ಜನ್‌ ಕುಮಾರ್‌, ನಾಳೆ ಜಗದೀಶ್‌ ಟೈಟ್ಲರ್‌, ನಾಡಿದ್ದು ಕಮಲ್‌ ನಾಥ್‌ ಮತ್ತು ಅಂತಿಮವಾಗಿ ಗಾಂಧಿ ಕುಟುಂಬ ದೋಷಿಗಳೆಂದು ಸಾಬೀತಾಗುತ್ತದೆ ಎಂದು ಹರ್‌ಸಿಮ್ರತ್‌ ಹೇಳಿದರು. 

2015ರಲ್ಲಿ  ನಾನು ಸಿಕ್ಖ್ ವಿರೋಧಿ ದೊಂಬಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕೆಂದು ಮಾಡಿಕೊಂಡಿದ್ದ ಕೋರಿಕೆಯನ್ನು ಮನ್ನಿಸಿದ್ದ ಪ್ರಧಾನಿ ಮೋದಿ ಅವರಿಗೆ ನನ್ನ ಧನ್ಯವಾದಗಳು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next