Advertisement

ಸಮರ ಸನ್ನದ್ಧತೆ ವೀಡಿಯೋ ಹರಿಬಿಟ್ಟ ನೌಕಾಪಡೆ

02:30 PM Oct 24, 2020 | keerthan |

ಹೊಸದಿಲ್ಲಿ: ಭಾರತ- ಚೀನ ಉದ್ವಿಗ್ನತೆ ನಡುವೆ ಭಾರತೀಯ ನೌಕಾಪಡೆ “ಹಡಗು ನಿರೋಧಕ ಕ್ಷಿಪಣಿ’ ಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

Advertisement

ಸಮರಾಭ್ಯಾಸದ ಭಾಗವಾಗಿ ಮುಳುಗುತ್ತಿರುವ ಹಡಗೊಂದಕ್ಕೆ ಅತ್ಯಂತ ನಿಖರವಾಗಿ ದಾಳಿ ಮಾಡಿರುವ ಕ್ಷಿಪಣಿ ಪರೀಕ್ಷೆಯ ವಿಡಿಯೋವನ್ನು ನೌಕಾಪಡೆ ಟ್ವಿಟರ್ ನಲ್ಲಿ ಪೋಸ್ಟ್‌ ಮಾಡಿದೆ. ಈ ಮೂಲಕ ನೌಕಾಪಡೆಯ ಸಮರ ಸನ್ನದ್ಧತೆಯನ್ನು ಪ್ರದರ್ಶಿಸಿದೆ.

ಅರಬ್ಬೀ ಸಮುದ್ರದಲ್ಲಿ ಮಧ್ಯಮ ಗಾತ್ರದ ಸಮರ ನೌಕೆ ಐಎನ್‌ಎ ಪ್ರಬಲ್ ಮೂಲಕ ಚಿಮ್ಮಿದ ಕ್ಷಿಪಣಿ ಗರಿಷ್ಠ ದೂರದಲ್ಲಿ ಮುಳುಗುತ್ತಿದ್ದ ಹಡಗನ್ನು ಯಶಸ್ವಿಯಾಗಿ ಟಾರ್ಗೆಟ್‌ ಮಾಡಿದೆ.

ಇದನ್ನೂ ಓದಿ:ಲಸಿಕೆ ವಿತರಣೆಗೆ ಯೋಜನೆ; ಆದ್ಯತಾ ವಲಯ ಗುರುತಿಸಿರುವ ಕೇಂದ್ರ

ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್‌ ಕರಂಬೀರ್‌ ಸಿಂಗ್‌ ಮಂಗಳವಾರ ವಷ್ಟೇ ಸಮುದ್ರ ತೀರ ಸನಿಹದ ಪ್ರದೇಶಗಳಲ್ಲಿನ ಕಾರ್ಯಾಚರಣೆ ಸಿದ್ಧತೆ ಬಗ್ಗೆ ಪರಿಶೀಲಿಸಿದ್ದರು. ಇದರ ಬೆನ್ನಲ್ಲೇ ಈ ಪರೀಕ್ಷೆ ನಡೆದಿದೆ.

Advertisement

ಲಡಾಖ್‌ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ ಇತ್ತ ನೌಕಾಪಡೆ ಸಮುದ್ರ ವ್ಯಾಪ್ತಿಯಲ್ಲಿ ನಿರಂತರ ಐಎನ್‌ಎಸ್‌ ವಿಕ್ರಮಾದಿತ್ಯ ಮತ್ತು ಇತರೆ ಯುದ್ಧನೌಕೆಗಳ ನೇತೃತ್ವದಲ್ಲಿ ನಿರಂತರ ಸಮರಾಭ್ಯಾಸ ನಡೆಸುತ್ತಲೇ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next