Advertisement

ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಹಲವರನ್ನು ಉಚ್ಛಾಟಿಸಿದ ಯಾದಗಿರಿ ಕಾಂಗ್ರೆಸ್

02:49 PM Jun 03, 2023 | Team Udayavani |

ಯಾದಗಿರಿ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸದೆ ವಿರೋಧಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಕೆಲವು ಪದಾಧಿಕಾರಿಗಳನ್ನು ಉಚ್ಚಾಟಿಸಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಶಾಮಸನ್ ಮಾಳಿಕೇರಿ ಪ್ರಕಟಿಸಿದರು.

Advertisement

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೆಲವು ಪದಾಧಿಕಾರಿಗಳು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ಸಾಕ್ಷಿ ಸಮೇತ ಸಾಬೀತಾಗಿದೆ. ಜಿಲ್ಲಾಧ್ಯಕ್ಷ ಬಸರಡ್ಡಿ ಅನಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ನಾಯ, ಮರೆಪ್ಪ ಬಿಳ್ಹಾರ ನೇತೃತ್ವದ ತಂಡ ಸಮಗ್ರವಾಗಿ ಪರಿಶೀಲಿಸಿ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಉಚ್ಚಾಟನೆಗೊಂಡ ಪದಾಧಿಕಾರಿಗಳು: ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಾ, ಮುಸ್ಲಿಂ ಮುಖಂಡ ಜಹಿರುದ್ದೀನ್ ಸವೇರಾ, ಶಹಾಪೂರ ಎಪಿಎಂಸಿ ಸದಸ್ಯ ಸಂತೋಷ ನಿರ್ಮಲಕರ್, ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಮಲ್ಲು ಶಿವಪುರ, ಕುರುಬ ಸಮಾಜದ ಮುಖಂಡ ಹೊನ್ನಪ್ಪ ಮುಷ್ಟೂರ, ದಲಿತ ಮುಖಂಡ ವಿಜಯಕುಮಾರ ಶಿರಗೋಳ, ವಾಲ್ಮೀಕಿ ಸಮಾಜ ಮುಖಂಡ ಸುಭಾಸ ಹೆಡಗಿಮದ್ರಾ, ಕಾರ್ಮಿಕ ಘಟಕದ ಜಿಲ್ಲಾ ಕಾರ್ಯದರ್ಶಿ ಭಿಮರಾಯ ನಾಯ್ಕಲ್ ಉಚ್ಚಾಟನೆಗೊಂಡ ಪದಾಧಿಕಾರಿಗಳಾಗಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವನಾಥ ಪಾಟೀಲ, ಸೋಮಶೇಖರ್ ಮಸ್ಕನಳ್ಳಿ, ಸುರೇಶ ಮಡ್ಡಿ, ಸಾಯಿಬಣ್ಣ ಬಾಡಿಯಾಳ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next