ಮಧ್ಯಪ್ರದೇಶದ ಹೊಶಂಗಾಬಾದ್‌ನ ಪಿಪಾ ರಿಯಾ ನಗರದಲ್ಲಿ ಮಾತನಾಡಿ, ಸಿಪಿಎಂನ ಪ್ರಣಾಳಿಕೆ ವಿಚಾರ ಪ್ರಸ್ತಾವಿಸಿ ಇಂಡಿಯಾ ಒಕ್ಕೂಟ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
Advertisement
ರಾಹುಲ್‌ನನ್ನು ದೇಶ ಗಂಭೀರವಾಗಿ ಪರಿಗಣಿಸಿಲ್ಲಶೆಹಜಾದ (ರಾಜಕುಮಾರ)ರನ್ನು ದೇಶ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಂಸದ ರಾಹುಲ್ ಗಾಂಧಿ ಹೆಸರು ಉಲ್ಲೇಖೀಸದೆ ಪ್ರಧಾನಿ ಟೀಕಿಸಿದ್ದಾರೆ. ಒಂದೇ ಸ್ಪರ್ಶದಲ್ಲಿ ದೇಶದ ಬಡತನವನ್ನು ತೊಲಗಿಸಿ ಬಿಡುವುದಾಗಿ ಅವರು ಹೇಳುತ್ತಾರೆ. ಹೀಗಾಗಿ ಅವರನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿಂದೆ ಅವರ ಅಜ್ಜಿ (ಮಾಜಿ ಪಿಎಂ ಇಂದಿರಾ) ಕೂಡ “ಗರೀಬಿ ಹಟಾವೋ’ ಎಂದು ಕರೆ ನೀಡಿದ್ದರು ಎಂದರು. ಜತೆಗೆ ಅವರೊಬ್ಬ ಶ್ರೀಮಂತ ಜಾದೂಗಾರ ಎಂದೂ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.