Advertisement

ಮಾದಕ ದ್ರವ್ಯ ವಿರೋಧಿ ದಿನಾಚರಣೆ

02:55 AM Jul 10, 2017 | Harsha Rao |

ಪಣಂಬೂರು: ನವಮಂಗಳೂರು ಬಂದರು ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಹಾಗೂ ಸಂಚಾರ ನಿಯಮಗಳ ಕುರಿತು ಮುಖಾಮುಖೀ ಚರ್ಚೆಯು ಶಾಲಾ ಸಭಾ ಭವನದಲ್ಲಿ ಜರಗಿತು.
ಮಂಗಳೂರು ಉತ್ತರ ಸಂಚಾರಿ ಠಾಣಾ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಅವರು ಮಾದಕ ದ್ರವ್ಯಗಳ ದುಷ್ಪರಿಣಾಮ ಅದನ್ನು ಸೇವಿಸುವ ಇಡೀ ಕುಟುಂಬವನ್ನು ಬಾಧಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಇದರಿಂದ ದೂರವಿರುವುದರ ಜತೆಗೆ ಹಿರಿಯರಿಗೂ ಇದರ ಹಾನಿ ಬಗ್ಗೆ ತಿಳಿಹೇಳುವ ಕೆಲಸ ಮಾಡ ಬೇಕು ಎಂದರು.

Advertisement

ಸಂಚಾರ ನಿಯಮವನ್ನು ಪಾಲಿಸಿದಲ್ಲಿ ಹೆಚ್ಚು ಅಪಘಾತವನ್ನು ನಿಯಂತ್ರಿಸಬಹುದಾಗಿದೆ. ಮದ್ಯ ಸೇವನೆ, ಅತಿ ವೇಗದ ಚಾಲನೆ, ಮೊಬೈಲ್‌ ಮೂಲಕ ಮಾತುಕತೆ, ವಾಹನ ಚಲಾವಣೆ, ನಿಯಮಗಳಿಗೆ ವಿರುದ್ಧವಾಗಿ ವಾಹನ ಓಡಿಸುವುದು ಮತ್ತಿತರರ ಕಾಣಗಳಿಂದ ಅಪಘಾತ ನಡೆಯುತ್ತದೆ ಇದನ್ನ ತಡೆಯಲು ಸ್ವಯಂ ಜಾಗೃತಿ ಅವಶ್ಯ ಎಂದರು.

ಶಿಕ್ಷಕ ರಕ್ಷಕ ಸಂಘ ಸಹಯೋಗ ನೀಡಿತ್ತು. ಪಿಟಿಎ ಅಧ್ಯಕ್ಷ ಧನರಾಜ್‌, ಕಾರ್ಯದರ್ಶಿ ಸತೀಶ್‌ ಸದಾನಂದ್‌, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಯೋಗೇಂದ್ರ, ಉಪಾಧ್ಯಕ್ಷೆ ಭಾಗ್ಯಲಕ್ಷಿ$¾à, ಪ್ರಭಾರ ಮುಖ್ಯ ಶಿಕ್ಷಕ ರಾಮಕೃಷ್ಣ, ಹಿ.ಪ್ರಾ ಮುಖ್ಯ ಶಿಕ್ಷಕಿ ಜೂಲಿಯಟ್‌ ಡಿ’ ಸೋಜಾ, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next