Advertisement

ಉದ್ದೀಪನ ಪ್ರಕರಣ: ಇಂದಿನಿಂದ ಆನ್‌ಲೈನ್‌ವಿಚಾರಣೆ

10:49 PM May 06, 2020 | Sriram |

ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ ಉದ್ದೀಪನ ಪ್ರಕರಣಗಳು ರಾಶಿ ಬೀಳುವುದನ್ನು ತಡೆಯಲು ನಾಡಾ (ರಾಷ್ಟ್ರೀಯ ಉದ್ದೀಪನ ದ್ರವ್ಯ ನಿಗ್ರಹ ದಳ) ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿ ಕ್ರೀಡಾಳುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಕರಣಗಳ ವಿಚಾರಣೆಯನ್ನು ಆನ್‌ಲೈನ್‌ನಲ್ಲೇ ನಿರ್ವಹಿಸಲು ನಾಡಾ ಮುಂದಾಗಿದೆ ಎಂದು ಸಂಸ್ಥೆಯ ಮಹಾ ನಿರ್ದೇಶಕ ನವೀನ್‌ ಅಗರ್ವಾಲ್‌ ಬುಧವಾರ ತಿಳಿಸಿದ್ದಾರೆ.

Advertisement

ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಾಡಾ ಯಾವುದೇ ವಿಚಾರಣೆಗಳನ್ನು ನಡೆಸಿಲ್ಲ. ಕಳೆದ ವರ್ಷ ತನಿಖಾಧಿಕಾರಿಗಳು ದಾಖಲೆಯ 180 ಪ್ರಕರಣಗಳನ್ನು ವಿಚಾರಣೆ ನಡೆಸಿ, ಇತ್ಯರ್ಥಗೊಳಿಸಿದ್ದರು.

ಮೇ 8ರಿಂದ ಆನ್‌ಲೈನ್‌ನಲ್ಲೇ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಗ್ರಾಮೀಣ ಕ್ರೀಡಾಪಟುಗಳ ಮನೆಯಲ್ಲಿ ಅಂತರ್ಜಾಲ ಸೌಲಭ್ಯ ಹಾಗೂ ವೀಡಿಯೋ ಉಪಕರಣಗಳನ್ನು ಒದಗಿಸಲೂ ವ್ಯವಸ್ಥೆ ಮಾಡಲಾಗಿದೆ ಎಂದು ಅಗರ್ವಾಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next