Advertisement

ಜಾಗರೂಕತೆ, ಮುನ್ನೆಚ್ಚರಿಕೆ ಕ್ರಮಗಳಿಂದ ಅಪರಾಧಗಳಿಗೆ ತಡೆ

01:05 AM Dec 05, 2018 | Karthik A |

ಪಡುಬಿದ್ರಿ: ನಮ್ಮ ಜಾಗರೂಕತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಂದ ಅಪರಾಧಗಳನ್ನು ತಡೆಗಟ್ಟಬಹುದಾಗಿದೆ ಎಂದು ಪಡುಬಿದ್ರಿ ಪೊಲೀಸ್‌ ಠಾಣಾ ಪಿಎಸ್‌ಐ ಸತೀಶ್‌ ಎಂ. ಪಿ. ಹೇಳಿದರು. ಅವರು ಡಿ. 4ರಂದು ಹೆಜಮಾಡಿಯ ಪ.ಪೂ. ಕಾಲೇಜಿನಲ್ಲಿ ಪಡುಬಿದ್ರಿ ರೋಟರಿ ಹಾಗೂ ಜೇಸಿಐ ಪಡುಬಿದ್ರಿ ಸಹ ಯೋಗದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾಜದಲ್ಲಿ ವಿದ್ಯಾರ್ಥಿಗಳು, ಯುವಜನತೆ ಪಾತ್ರ, ಅಪರಾಧ ಮುಕ್ತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾಲುದಾರಿಕೆ ವಿಚಾರದಲ್ಲಿ ಮಾತನಾಡಿ ಮಾಹಿತಿಗಳನ್ನು ನೀಡಿದರು. 

Advertisement

ದಾರಿ ತಪ್ಪದಿರಿ
ಭಾರತದಲ್ಲಿ ಯುವ ಜನರಿಗೆ ಉತ್ತಮ ಭವಿಷ್ಯವಿದೆ. ಯುವ ಜನತೆ, ಯುವ ಶಕ್ತಿ ಭಾರತದ ಅಭಿವೃದ್ಧಿಗಾಗಿ ಬಳಕೆಯಾಗಬೇಕು. ಆದರೆ ಈ ವಯೋಮಾನದಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ. ಸಮಸ್ಯೆಗಳಿಂದ ತೊಳಲಾಡುತ್ತಿದ್ದಾರೆ. ಈ ಸಂಕುಚಿತ ಸಂದರ್ಭಗಳಲ್ಲಿ ಪೊಲೀಸರ ನೆರವನ್ನು ಪಡೆಯಿರಿ. ಉತ್ತಮ ಪ್ರಜೆಗಳಾಗಿರಿ ಎಂದು ವಿದ್ಯಾರ್ಥಿಗಳಿಗೆ ಸತೀಶ್‌ ಕರೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಸರಕಾರಿ ಪ. ಪೂ. ಕಾಲೇಜು ಪ್ರಾಂಶುಪಾಲ ಈಶ್ವರ್‌ ಎ. ಮಾತನಾಡಿದರು. ವೇದಿಕೆಯಲ್ಲಿ ಪಡುಬಿದ್ರಿ ಠಾಣಾ ಎಎಸ್‌ಐ ದಿವಾಕರ ಸುವರ್ಣ, ಸರಕಾರಿ ಪ್ರೌಢಶಾಲೆ, ಹೆಜಮಾಡಿಯ ಮುಖ್ಯ ಶಿಕ್ಷಕಿ ಸವಿತಾ ನಾಯಕ್‌ ಉಪಸ್ಥಿತರಿದ್ದರು. ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್‌ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಹರೀಶ್‌ ಕುಮಾರ್‌ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್‌ ಪಡುಬಿದ್ರಿಯ ಅಧ್ಯಕ್ಷ ಗಣೇಶ್‌ ಆಚಾರ್ಯ ಎರ್ಮಾಳು ವಂದಿಸಿದರು.  

ವಿದ್ಯಾರ್ಥಿ ದೆಸೆಯಲ್ಲಿ ಮೊಬೈಲ್‌ ಬೇಡ
ಮಕ್ಕಳು ಮೊಬೈಲ್‌ ಚಾಳಿಯಿಂದ ದೂರವಿರಬೇಕು. ಮೊಬೈಲ್‌ ಕೊಟ್ಟು ಮಕ್ಕಳಿಗೆ ಊಟ ನೀಡುವುದನ್ನು ಪೋಷಕರೂ ಬಿಟ್ಟು ಬಿಡಬೇಕು. ಇಂದಿನ ಮಕ್ಕಳು ಟಿವಿ, ಮೊಬೈಲ್‌ಗ‌ಳೊಂದಿಗೇ ಆಟವಾಡುತ್ತಾರಲ್ಲದೇ ಅಂಗಳದಲ್ಲಿ ಆಟವಾಡುವುದನ್ನೇ ಬಿಟ್ಟಿರುವಂತಿದೆ ಎಂದೂ ಬೆಟ್ಟು ಮಾಡಿದ ಪಿಎಸ್‌ಐ ಸತೀಶ್‌ ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್‌ ನಿಮ್ಮೊಂದಿಗಿರದಿದ್ದರೆ ಉತ್ತಮ ಭವಿಷ್ಯ ನಿಮ್ಮದಾಗಲಿದೆ.
– ಸತೀಶ್‌ ಎಂ. ಪಿ.

Advertisement

Udayavani is now on Telegram. Click here to join our channel and stay updated with the latest news.

Next