Advertisement

ಜನವಿರೋಧಿ  ಕಾಂಗ್ರೆಸ್‌ ಕಿತ್ತೂಗೆಯಿರಿ: ತೇಜಸ್ವಿನಿ

10:52 AM Jan 27, 2018 | |

ಬಂಟ್ವಾಳ: ರಾಜ್ಯದ ಜನವಿರೋಧಿ ಕಾಂಗ್ರೆಸ್‌ ಆಡಳಿತವನ್ನು ಕಿತ್ತೂಗೆಯಲು ಮತದಾರರು ಬಿಜೆಪಿಯನ್ನು ಗೆಲ್ಲಿಸಬೇಕು. ಜನನಾಯಕ ರಾಜೇಶ್‌ ನಾೖಕ್‌ ಬಂಟ್ವಾಳ ಕ್ಷೇತ್ರದಾದ್ಯಂತ 265 ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದು ಕ್ಷೇತ್ರದ ಮತದಾರರ ಹೊಣೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಮಾಜಿ ಸಂಸದೆ ತೇಜಸ್ವಿನಿ ಗೌಡ ಹೇಳಿದರು.

Advertisement

ಅವರು ಶುಕ್ರವಾರ ಬಿ.ಸಿ. ರೋಡ್‌ ಸ್ಪಶಾì ಕಲಾಮಂದಿರ ದಲ್ಲಿ ನಡೆದ ಪರಿವರ್ತನೆಗಾಗಿ ಬಿಜೆಪಿ ನಡಿಗೆ ಗ್ರಾಮದ ಕಡೆಗೆ ಪಾದಯಾತ್ರೆಯಲ್ಲಿ ಸಮಾರೋಪ ಭಾಷಣ ಮಾಡಿದರು. ಕಳೆದ 65 ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ದೇಶದ ಸಂಪತ್ತು ಬಡವರಿಗೆ ಮುಟ್ಟಿಲ್ಲ. ಮೋದಿಯವರು ಕಳೆದ ಮೂರೂವರೆ ವರ್ಷದ ಆಡಳಿತದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಜಗತ್ತಿನ ಜನಪ್ರಿಯ ನಾಯಕರಲ್ಲಿ ಮೂರನೇ ಸ್ಥಾನವನ್ನು ಅವರು ಅಲಂಕರಿಸಿದ್ದಾರೆ ಎಂದರು.

ರಾಜ್ಯ ಸರಕಾರ ಅನ್ನ ಭಾಗ್ಯ ಯೋಜನೆ ತನ್ನದು ಎನ್ನುತ್ತಿದೆ. ಆದರೆ ಪ್ರತೀ ಕೆ.ಜಿ. ಅಕ್ಕಿಯ ಮೇಲೆ ಕೇಂದ್ರ ಸರಕಾರ 29 ರೂ. ನೀಡುತ್ತದೆ. ರಾಜ್ಯ ಸರಕಾರ ಕೇವಲ 3 ರೂ. ನೀಡಿ ಯೋಜನೆ ತನ್ನದೇ ಎನ್ನುತ್ತಿದೆ ಎಂದವರು ಟೀಕಿಸಿದರು.

ಬಿಜೆಪಿ ನೇತಾರ ರಾಜೇಶ್‌ ನಾೖಕ್‌ ಉಳಿಪಾಡಿ ಮಾತನಾಡಿ, ಕ್ಷೇತ್ರದಲ್ಲಿ ಪಾದಯಾತ್ರೆ ಸಂದರ್ಭ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೀತಿ ವಿಶ್ವಾಸವನ್ನು ತೋರಿಸಿದ್ದಾರೆ. ಅವರಿಗೆ ಪಕ್ಷದ ಕಾರ್ಯಕರ್ತರ, ಅಭಿಮಾನಿಗಳ ಮತ್ತು ನನ್ನ ವೈಯಕ್ತಿಕ ಕೃತಜ್ಞತೆಗಳು ಎಂದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು. ಜಿಲ್ಲೆ ಮತ್ತು ಬಂಟ್ವಾಳದಲ್ಲಿ ಶಾಂತಿ ನೆಮ್ಮದಿ, ಸುವ್ಯವಸ್ಥೆಗಾಗಿ ಪಕ್ಷವನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅವರು ರಾಜ್ಯ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್‌ ವೈಫಲ್ಯವನ್ನು ತಿಳಿಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಸರ್ವಪ್ರಯತ್ನ ನಡೆಸ ಬೇಕು ಎಂದು ಕರೆ ನೀಡಿದರು.

Advertisement

ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ ತನಗೆ ಬಂದಿರುವ ಜೀವ ಬೆದರಿಕೆಯ ಆರು ಪತ್ರಗಳನ್ನು ಪ್ರದರ್ಶಿಸಿ ಭಾಷಣ ಮಾಡಿದರು. ಸತ್ಯಜಿತ್‌ ಸುರತ್ಕಲ್‌, ಪುರುಷ ಸಾಲ್ಯಾನ್‌ ನೆತ್ರೆಕೆರೆ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಕೆ. ಪದ್ಮನಾಭ ಕೊಟ್ಟಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕ ರುಕ್ಮಯ ಪೂಜಾರಿ, ರಾಮ್‌ದಾಸ್‌ ಬಂಟ್ವಾಳ, ಸುಲೋಚನಾ ಜಿ.ಕೆ. ಭಟ್‌, ಜಿ. ಆನಂದ, ಎಂ. ತುಂಗಪ್ಪ ಬಂಗೇರ, ಕಮಲಾಕ್ಷಿ ಕೆ. ಪೂಜಾರಿ, ವಸಂತ ಕುಮಾರ್‌ ಅನ್ನಳಿಕೆ, ಕ್ಯಾ| ಬೃಜೇಶ್‌ ಚೌಟ, ಸಂತೋಷ್‌ ಕುಮಾರ್‌ ರೈ ಬೋಳಿಯಾರು, ಯಶೋದಾ ಕೆ., ಸುಗುಣ ಕಿಣಿ, ಸಂಧ್ಯಾ ವೆಂಕಟೇಶ್‌, ತನಿಯಪ್ಪ ಗೌಡ, ಗಂಗಾಧರ, ದಿನೇಶ್‌ ಅಮೂrರು, ಪ್ರದೀಪ್‌ ಕುಮಾರ್‌ ಅಡ್ಯಾರ್‌, ದಿನೇಶ್‌ ಭಂಡಾರಿ, ವಜ್ರನಾಥ ಕಲ್ಲಡ್ಕ, ಉಮಾನಾಥ ಕೋಟ್ಯಾನ್‌ ಉಪಸ್ಥಿತರಿದ್ದರು.

ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಸ್ವಾಗತಿಸಿ, ಮೋನಪ್ಪ ದೇವಸ್ಯ ವಂದಿಸಿದರು. ದೇವಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next