ಕೋಲ್ಕತಾ: ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕ ನಿಗ್ರಹ ಸಂಸ್ಥೆಯಾದ ಎನ್ ಐಎ
(NIA) ಅಧಿಕಾರಿಗಳ ತಂಡದ ಮೇಲೆ ಹಲ್ಲೆ ನಡೆಸಿರುವ ಘಟನೆ ಶನಿವಾರ (ಏ.06) ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Vijayapur;ದೇಶಕ್ಕೆ ಮೋದಿ ಅನಿವಾರ್ಯದ ಸ್ಥಿತಿ,ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ:ಯತ್ನಾಳ
ಪೂರ್ವ ಮಿಡ್ನಾಪುರದ ಭೂಪತಿನಗರದಲ್ಲಿ ಈ ಘಟನೆ ನಡೆದಿದ್ದು, ಎನ್ ಐಎ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. 2022ರಲ್ಲಿ ಬಾಂಬ್ ಸ್ಫೋಟ
(Bomb Blast case) ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಎನ್ ಐಎ ತಂಡ ಭೂಪತಿನಗರದಲ್ಲಿ ದಾಳಿ ನಡೆಸಲು ಆಗಮಿಸಿತ್ತು.
ಶೋಧ ಕಾರ್ಯ ನಡೆಸುತ್ತಿದ್ದ ಎನ್ ಐಎ ಅಧಿಕಾರಿಗಳ ಮೇಲೆ ಗುಂಪೊಂದು ಏಕಾಏಕಿ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಎನ್ ಐಎ ಅಧಿಕಾರಿಗಳು ಮತ್ತು ಗುಂಪಿನ ನಡುವೆ ಘರ್ಷಣೆ ನಡೆದಿದ್ದು, ಅಧಿಕಾರಿಗಳ ವಾಹನದ ಗಾಜುಗಳನ್ನು ಒಡೆದು ಹಾಕಿರುವ ಘಟನೆ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ಮೊದಲು ಎನ್ ಐಎ ಅಧಿಕಾರಿಗಳು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿತ್ತು. ಇಂದು ಎನ್ ಐಎ ಅಧಿಕಾರಿಗಳ ಕಾರುಗಳು ಆಗಮಿಸಿದಾಗ ಸ್ಥಳೀಯರು ಕಾರುಗಳನ್ನು ಅಡ್ಡಗಟ್ಟಿ ಕಲ್ಲು ತೂರಾಟ ನಡೆಸಿದ್ದರು. ಇದರ ಪರಿಣಾಮ ಎನ್ ಐಎ ಅಧಿಕಾರಿಯೊಬ್ಬರು ಗಾಯಗೊಂಡಿರುವುದಾಗಿ ತಿಳಿಸಿದೆ.