ಉಡುಪಿ: ಶ್ರೀಕೃಷ್ಣ ಪರಮಾತ್ಮ ಅರ್ಜುನನನ್ನು ಮುಂದಿರಿಸಿಕೊಂಡು ಜಗತ್ತಿಗೆ ಬೋಧಿಸಿದ ಭಗವದ್ಗೀತೆ ಹಿಂದೂ ಧರ್ಮದ ದೊಡ್ಡ ಕೊಡುಗೆಯಾಗಿದೆ. ಮಕ್ಕಳಲ್ಲೂ ಕೃಷ್ಣನನ್ನು ಕಾಣುವ ಹಿಂದೂ ಧರ್ಮ, ಸಂಸ್ಕೃತಿ ವಿಶಿಷ್ಟವಾದುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು.
ಮಹಾಭಾರತದ ಕಥಾನಕಗಳಲ್ಲಿ ಧರ್ಮಕ್ಕೇ ಅಂತಿಮ ಜಯ ಎಂಬ ಸಂದೇಶ ಸಿಗುತ್ತದೆ. ಇಂದಿನ ರಾಜಕೀಯದಲ್ಲೂ ಹಲವು ಘಟನಾವಳಿಗಳನ್ನು ಕಂಡಾಗ ಈ ಸಂದೇಶ ಪ್ರಸ್ತುತವೆನಿಸುತ್ತದೆ. ಶ್ರೀಕೃಷ್ಣನೇ ನಮಗೆಲ್ಲರಿಗೂ ರಕ್ಷಣೆಯನ್ನು ಕೊಡಬೇಕು. ನಮ್ಮ ತಪ್ಪು ಒಪ್ಪುಗಳನ್ನು ಶ್ರೀಕೃಷ್ಣನ ಪದತಲದಲ್ಲಿಡಲು ನಾನು ಬಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿ ಆಗಿರುವಾಗ ನೀಡಿದ ಸಹಕಾರವನ್ನು ಸ್ಮರಿಸಿಕೊಂಡರು. ಶ್ರೀಕೃಷ್ಣನ ಬಾಲಲೀಲೆಗಳು, ಗೋವರ್ಧನಗಿರಿ ಬೆಟ್ಟವನ್ನು ಎತ್ತಿದ ಕಥಾನಕಗಳನ್ನು ಉದಾಹರಿಸಿದ ಅವರು, ಗೋವರ್ಧನಗಿರಿಯ ಮಹತ್ವವನ್ನು ವರ್ಣಿಸಿದರು.
ಪ್ರಾಕೃತಿಕ ವಿಕೋಪ: ಪ್ರಾರ್ಥನೆ
Advertisement
ರಾಜಾಂಗಣದಲ್ಲಿ ರವಿವಾರ ಶ್ರೀಕೃಷ್ಣ ಮಠದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಉದ್ಘಾಟನ ಸಮಾರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು, ರಾಜಕಾರಣಿಗಳಿಗೂ ಶ್ರೀಕೃಷ್ಣ ಸಾರ್ವಕಾಲಿಕ ಮೌಲ್ಯಗಳನ್ನು ಬೋಧಿಸಿದ್ದಾನೆ ಎಂದರು.
Related Articles
Advertisement
ಪ್ರಾಕೃತಿಕ ವಿಕೋಪ ಕಡಿಮೆ ಯಾಗುವ ನಿಟ್ಟಿನಲ್ಲಿ ಎಲ್ಲರೂ ದೇವರಲ್ಲಿ ಪ್ರಾರ್ಥಿಸಬೇಕು. ನಾವೂ ಪ್ರಾರ್ಥಿಸುತ್ತೇವೆ. ಆದ ಕಷ್ಟನಷ್ಟಗಳಿಂದ ಹೊರಬರಲು ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದು ಪರ್ಯಾಯ ಶ್ರೀಪಾದರು ಆಶಿಸಿದರು.
ಶ್ರೀ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಶ್ರೀಪಲಿಮಾರು ಕಿರಿಯ ಶ್ರೀವಿದ್ಯಾ ರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಮಾಜಿ ಸಚಿವರಾದ ಸಾ.ರಾ. ಮಹೇಶ್, ಪ್ರಮೋದ್ ಮಧ್ವರಾಜ್, ಅಮರನಾಥ ಶೆಟ್ಟಿ, ಶಾಸಕರಾದ ಕೆ. ರಘುಪತಿ ಭಟ್, ಎಚ್.ಎಲ್. ಭೋಜೇಗೌಡ, ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ವೆಂಕಟರಾಮನ್ ಅಕ್ಕರಾಜು ಉಪಸ್ಥಿತರಿದ್ದರು. ಸಮಾಜಶಾಸ್ತ್ರಜ್ಞ ಪ್ರೊ| ಪಾದೂರು ಶ್ರೀಪತಿ ತಂತ್ರಿ, ಬೆಂಗಳೂರಿನ ಕಲಾವಿದೆ ಶಮಾ ಕೃಷ್ಣ, ಶ್ರದ್ಧಾ, ಸಾರಿಗೆ ಉದ್ಯಮಿ ಕೃಷ್ಣಾನಂದ ಚಾತ್ರ, ನಿಟ್ಟೆ ಮ್ಯಾನೇಜ್ಮೆಂಟ್ ಸಂಸ್ಥೆಯ ಕಾರ್ಪೊರೇಟ್ ವ್ಯವಹಾರಗಳ ಡೀನ್ ಡಾ| ಅನಂತಪದ್ಮನಾಭ ಆಚಾರ್ಯ, ಬ್ರಹ್ಮಾವರದ ಜಿಎಂ ವಿದ್ಯಾನಿಕೇತನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶಚಂದ್ರ ಶೆಟ್ಟಿ ಅವರನ್ನು ಸ್ವಾಮೀಜಿಯವರು ಸಮ್ಮಾನಿಸಿದರು. ಡಾ| ವಿಜಯೇಂದ್ರ ವಸಂತ ಕಾರ್ಯಕ್ರಮ ನಿರ್ವಹಿಸಿದರು.
| ಶ್ರೀಕೃಷ್ಣ ಜನ್ಮಾಷ್ಟಮಿ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಎಚ್‌ಡಿಕೆ ಅಭಿಮತ
ಶ್ರೀಕೃಷ್ಣ ಹಿಂದೂಗಳಿಗೆ ಮಾತ್ರ ದೇವರಲ್ಲ, ಮುಸ್ಲಿಮರಿಗೂ ದೇವರು. ಮೈಸೂರಿನ ಮೊದಲ ಮುಸ್ಲಿಂ ರಾಜ ಹೈದರಾಲಿ ಶ್ರೀಕೃಷ್ಣನ ಕಥೆಯನ್ನು ಹಿಂದಿಯಲ್ಲಿ ಕೇಳಿಸಿಕೊಂಡಿದ್ದ. ಅಭಿಮನ್ಯು ವೀರ, ಭೀಷ್ಮ ಯೋಗ್ಯ ಹಿರಿಯ, ಕೃಷ್ಣನ ಸಂದೇಶ ಅನುಸರಿಸಬೇಕು ಎಂದು ಹೇಳಿದ್ದ. ಅವನೋರ್ವ ಚತುರ ರಾಜಕಾರಣಿಯಾಗಲು ಈ ಕಥಾನಕವನ್ನು ಕೇಳಿಸಿಕೊಂಡ. ಮಹಾಭಾರತದಲ್ಲಿ ಬರುವ ರಾಜಕೀಯ ವಿಷಯ ಅತ್ಯುನ್ನತವಾದುದು. ಭಗವದ್ಗೀತೆ ಒಂದು ಜೀವನಧರ್ಮವಾಗಿದೆ. ನಮ್ಮ ಸಾವಿನ ಅನಂತರವೂ ನಮ್ಮ ಬಗ್ಗೆ ಜನರು ಒಪ್ಪಿ ಮಾತನಾಡುವಂತಹ ಬದುಕನ್ನು ನಾವು ಸವೆಸಬೇಕಾದರೆ ಅಂದರೆ ಆತ್ಮೋನ್ನತಿಗಾಗಿ ಗೀತೆ ಅತೀ ಅಗತ್ಯ ಎಂದು ಇತಿಹಾಸ, ಸಮಾಜಶಾಸ್ತ್ರಜ್ಞ ಪ್ರೊ| ಪಾದೂರು ಶ್ರೀಪತಿ ತಂತ್ರಿ ವಿಶ್ಲೇಷಿಸಿದರು.
ಹೈದರಾಲಿ ಕೇಳಿದ ಕೃಷ್ಣಕಥೆ