Advertisement

ಧೈರ್ಯವಾಗಿ ಉತ್ತರಿಸಿ ಎಸೆಸೆಲ್ಸಿ ಪರೀಕ್ಷೆ; ಗೊಂದಲ ಬೇಡ, ಮುಂಜಾಗ್ರತೆ ಇರಲಿ

02:19 AM Jun 23, 2020 | Sriram |

ಮಂಗಳೂರು/ಉಡುಪಿ: ಕೋವಿಡ್ ಲಾಕ್‌ಡೌನ್‌ ಪರಿಣಾಮ ಮುಂದೂಡಲ್ಪಟ್ಟಿದ್ದ ಎಸೆಸೆಲ್ಸಿ ಪರೀಕ್ಷೆ ಜೂ. 25ರಿಂದ ಜು. 4ರ ವರೆಗೆ ನಡೆಯಲಿದೆ.

Advertisement

ಎಲ್ಲ ವಿದ್ಯಾರ್ಥಿಗಳು ಆತ್ಮ ಸ್ಥೈರ್ಯ ಹೆಚ್ಚಿಸಿಕೊಂಡು, ಗೊಂದಲಕ್ಕೆ ಒಳಗಾಗದೆ ಪರೀಕ್ಷೆ ಬರೆಯ ಬೇಕೆನ್ನು ವುದು “ಉದಯವಾಣಿ’ಯ ಆಶಯ.

ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಎದುರಿಸುವುದಕ್ಕೆ ಬೇಕಾದ ತಯಾರಿಗಳನ್ನು ಸರಕಾರ ಕೈಗೊಳ್ಳುತ್ತಿದೆ. ಹೆತ್ತವರು ಕೂಡ ಎಲ್ಲ ಅನುಕೂಲ ಕಲ್ಪಿಸಿಕೊಡುತ್ತಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯುವಂತೆ ಸಿದ್ಧತೆ ನಡೆಯುತ್ತಿದೆ. ಒಂದು ಬೆಂಚ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಕುಳಿತುಕೊಳ್ಳು ವಂತೆ ಮತ್ತು ಬೆಂಚ್‌ಗಳ ನಡುವೆ ಒಂದು ಮೀ. ಅಂತರ ಇರು ವಂತೆ ವ್ಯವಸ್ಥೆ ಮಾಡ ಲಾಗು ತ್ತಿದೆ. ವಿದ್ಯಾರ್ಥಿಗಳ ತಾಪ ಮಾನ ಪರೀಕ್ಷಿಸಿ, ಸ್ಯಾನಿಟೈಸರ್‌ ನೀಡಿಯೇ ಒಳಬಿಡ ಲಾಗುತ್ತದೆ. ಎಲ್ಲರಿಗೂ ಹಾಲ್‌ ಟಿಕೆಟ್‌ ನೀಡುವ ವೇಳೆ ಮಾಸ್ಕ್ ನೀಡಲಾಗಿದೆ, ಹೆತ್ತವರನ್ನು ಶಾಲೆಗೆ ಕರೆಸಿ ಮುಂಜಾಗ್ರತ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಹೀಗಾಗಿ ನಿಶ್ಚಿಂತೆಯಿಂದ ಪರೀಕ್ಷೆಯಲ್ಲಿ ಉತ್ತರಿಸ ಬಹುದು.

ಮಾಸ್ಕ್ ಮರೆಯದಿರಿ
ಮಾಸ್ಕ್ ಕಡ್ಡಾಯ. ಅಂತಿಮ ಹಂತದ ತಯಾರಿ ನಡುವೆ ಮಾಸ್ಕ್ ಮರೆತು ಹೋಗುವ ಸಾಧ್ಯತೆಯಿದೆ. ಹೀಗಾಗಿ ಪರೀಕ್ಷೆಯ ಹಿಂದಿನ ದಿನವೇ ಮಾಸ್ಕನ್ನು ಶಾಲಾ ಬ್ಯಾಗ್‌ನಲ್ಲಿ ತೆಗೆದಿರಿಸಿ. ಒಂದು ವೇಳೆ ಮರೆತು ತೆರಳಿದರೆ ಭಯಪಡಬೇಡಿ. ಪರೀಕ್ಷಾ ಕೇಂದ್ರದ ಅಧಿಕಾರಿ, ಶಿಕ್ಷಕರ ಗಮನಕ್ಕೆ ತಂದರೆ ಮಾಸ್ಕ್ ಒದಗಿಸುತ್ತಾರೆ. ಇದಕ್ಕಾಗಿ ಪ್ರತೀ ಕೇಂದ್ರದಲ್ಲಿಯೂ ಹೆಚ್ಚುವರಿ ಮಾಸ್ಕ್ ತೆಗೆದಿಡಲಾಗಿದೆ.

Advertisement

ಮುನ್ನಾ ದಿನವೇ ಸ್ಥಳ ವೀಕ್ಷಣೆ
ಆಸಕ್ತ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮುನ್ನಾದಿನವೇ ಆಗಮಿಸಿ ತಮ್ಮ ಕೊಠಡಿ, ಬೆಂಚುಗಳನ್ನು ವೀಕ್ಷಿಸಲು ಅವಕಾಶ ಇದೆ.

ಜ್ವರ,ಶೀತ ಇದ್ದರೆ ಮೊದಲೇ ತಿಳಿಸಿ
ಕೋವಿಡ್ ಬಗ್ಗೆ ಭಯ ಬೇಡ. ಮುನ್ನೆಚ್ಚರಿಕೆ ಇರಲಿ. ಜ್ವರ, ಶೀತ ಬಂದವರೆ ಲ್ಲರಿಗೂ ಕೋವಿಡ್ ಬರುವುದಿಲ್ಲ. ಆದರೆ ಸಾಂಕ್ರಾಮಿಕ ರೋಗ ಬೇರೆ ವಿದ್ಯಾರ್ಥಿಗಳಿಗೂ ಹರಡ ದಂತೆ ಎಚ್ಚರಿಕೆ ಇರಲಿ. ಸಮಸ್ಯೆಯ ಬಗ್ಗೆ ಮೊದಲೇ ಶಿಕ್ಷಕರಿಗೆ ತಿಳಿಸಿ. ಆಗ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಸಲು ಅವರಿಗೆ ಸಹಾಯವಾಗುತ್ತದೆ.

ಸಮಯಕ್ಕೆ ಸರಿಯಾಗಿ ತಲುಪಿ; ಗುಂಪುಗೂಡದಿರಿ
ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 9.30ಕ್ಕೆ ಹಾಜರಿದ್ದು, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಬೆಳಗ್ಗೆ 10.30ಕ್ಕೆ ನೋಂದಣಿ ಸಂಖ್ಯೆ ಇರುವ ಜಾಗದಲ್ಲಿ ಕುಳಿತುಕೊಳ್ಳಬೇಕು. 10.45ರ ಅನಂತರ ಪರೀಕ್ಷಾ ಕೊಠಡಿ ಪ್ರವೇಶಿಸಲು ಅವಕಾಶ ಇಲ್ಲ. ಆದ್ದರಿಂದ ಸಮಯಕ್ಕೆ ಸರಿಯಾಗಿ ಹಾಜರಾಗಿ.

ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಗುಂಪುಗೂಡಬೇಡಿ. ನೀವು ಕುಳಿತುಕೊಳ್ಳುವ ಬೆಂಚ್‌ ಬಿಟ್ಟು ಬೇರೆಯವರ ಬೆಂಚ್‌, ಪೆನ್‌, ಪುಸ್ತಕ ಮುಟ್ಟಬೇಡಿ. ಮನೆಯಿಂದಲೇ ಕುದಿಸಿ ಆರಿಸಿದ ನೀರು ಕೊಂಡೊಯ್ಯಿರಿ.

ಹಿಂದಿರುಗಿ ಸ್ನಾನ ಮಾಡಿ
ಪರೀಕ್ಷೆ ಮುಗಿಸಿ ಮನೆಗೆ ಬಂದ ತತ್‌ಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಬಟ್ಟೆಗಳನ್ನು ಆಗಲೇ ಬಿಸಿ ನೀರಿನಲ್ಲಿ ಶುಚಿಗೊಳಿಸಿ. ಇದರಿಂದ ಯಾವುದೇ ವೈರಾಣು ಸಂಪರ್ಕ ಆಗಿದ್ದರೂ ನಾಶವಾಗುತ್ತದೆ.

ಪೋಷಕರಿಗೆ ಕಿವಿಮಾತು
ಮಕ್ಕಳು ಮಾನಸಿಕ ಒತ್ತಡ ಅಥವಾ ಗೊಂದಲಕ್ಕೆ ಒಳಗಾಗ ದಂತೆ ನೋಡಿಕೊಳ್ಳಬೇಕಿದೆ. ಶಾಲೆ ಯಿಂದ ಮಾರ್ಗದರ್ಶನ ನೀಡಿರು ವಂತೆ ಮಕ್ಕಳನ್ನು ಆದಷ್ಟು ಬೇಗ ಕಳುಹಿಸಿಕೊಡಿ. ಪರೀಕ್ಷೆ ಮತ್ತು ಕೋವಿಡ್ ಆತಂಕ ಅವ ರಲ್ಲಿದ್ದರೆ ನಿವಾರಿಸಲು ಗಮನ ಹರಿಸಿ. ಅವರು ಸಾರ್ವ ಜನಿಕ ಸಾರಿಗೆಯಲ್ಲಿ ಹೋಗುವುದಿದ್ದರೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಹೇಳಿ. ಹೊರಡುವ ಮುನ್ನ ಮಾಸ್ಕ್, ಹಾಲ್‌ ಟಿಕೆಟ್‌, ಪೆನ್‌, ಪೆನ್ಸಿಲ್‌ ಸಹಿತ ಅಗತ್ಯ ವಸ್ತು ಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಿ. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್‌ ನೀಡ ಲಾಗು ತ್ತದೆ ಯಾದರೂ ನಿಮಗೆ ಅನುಕೂಲವಾದರೆ ಚಿಕ್ಕ ಸ್ಯಾನಿಟೈಸರ್‌ ಬಾಟಲಿ ಯನ್ನು ಮಕ್ಕಳಿಗೆ ಕೊಟ್ಟು ಕಳುಹಿಸಿಕೊಟ್ಟರೆ ಉತ್ತಮ.

ಮಾಸ್ಕ್ ರಿಹರ್ಸಲ್‌
ಪರೀಕ್ಷೆಗೆ ಮುನ್ನಾ ದಿನ ಸುಮಾರು 3 ತಾಸುಗಳ ಕಾಲ ಮಾಸ್ಕ್ ಧರಿಸಿ ಬರವಣಿಗೆ ನಡೆಸುವ ರಿಹರ್ಸಲ್‌ ನಡೆಸಿದರೆ ಪರೀಕ್ಷೆ ದಿನ ಮಾಸ್ಕ್ ಧಾರಣೆ ಕಿರಿಕಿರಿ ಯಾಗದು. ಪರೀಕ್ಷೆಯಲ್ಲಿ ಮೂರು ತಾಸುಗಳ ಕಾಲ ಬರೆಯ ಬೇಕಾಗಿದೆ. ಆದುದರಿಂದ ಬರೆದು ಅಭ್ಯಾಸ ಮಾಡುವುದು ಅಗತ್ಯ.

ವಿಶೇಷ ಕೊಠಡಿ
ಕ್ವಾರಂಟೈನ್‌ಗೆ ಒಳಪಟ್ಟಿರುವ ಮನೆಗಳಿಂದ ಮತ್ತು ಕಂಟೈನ್‌ ಮೆಂಟ್‌ ವಲಯ ಗಳಿಂದ ಬರುವ ಮಕ್ಕಳಿಗೆ ವಿಶೇಷ ಕೊಠಡಿ ಯಲ್ಲಿ ಎನ್‌-95 ಮಾಸ್ಕ್ ಧರಿಸಿ ಪರೀಕ್ಷೆ ಬರೆ ಯುವ ಅವಕಾಶವಿದೆ. ಈಗ ಬೇಡವಾದಲ್ಲಿ ಮುಂದೆ ನಡೆಯುವ ಪೂರಕ ಪರೀಕ್ಷೆಯಲ್ಲಿ ರೆಗ್ಯುಲರ್‌ ವಿದ್ಯಾರ್ಥಿಯಾಗಿ ಬರೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next